ಕಲ್ಪ ಮೀಡಿಯಾ ಹೌಸ್
ಚಳ್ಳಕೆರೆ: ಸಿಟಿಗಿಂತಲೂ ಹಳ್ಳಿಗಳಲ್ಲಿ ಕೊರೋನಾ ಸೋಂಕು ವೇಗವಾಗಿ ಹರಡುತ್ತಿರುವುದಕ್ಕೆ ಕಾರಣಗಳನ್ನು ಹುಡುಕುತ್ತಾ ಹೋದರೆ ಇಲ್ಲಿ ಉತ್ತರ ಸಿಗುತ್ತದೆ ಎಂದು ಪಿಎಸ್’ಐ ಐ. ಮಂಜುನಾಥ ಅರ್ಜುನ್ ಲಿಂಗಾರೆಡ್ಡಿ ಹೇಳಿದರು.
ತಾಲೂಕಿನ ಬೆಳಗೆರೆ, ಸಾಣಿಕೆರೆ ಕಾಪರಹಳ್ಳಿ, ಹುಲಿಕುಂಟೆ, ನಾರಾಯಣಪುರ, ಯಲಗಟ್ಟೆ ಇನ್ನು ಹಲವು ಗ್ರಾಮದಲ್ಲಿ ಕೊರೋನಾ ಜಾಗೃತಿ ಮೂಡಿಸಿ ಗ್ರಾಮೀಣ ಭಾಗದಲ್ಲಿ ಸೋಂಕು ಹರಡಲು ಹಲವು ಕಾರಣಗಳನ್ನು ತಿಳಿಸಿದರು.
ಹಳ್ಳಿ ಜನರ ಬೇಜವಾಬ್ದಾರಿತನ, ಅನಕ್ಷರತೆ, ಮೂಢನಂಬಿಕೆ, ಭಕ್ತಿ, ಭಯ, ಮಾನವೀಯತೆ ಮುಗ್ಧತೆಯಂತಹ ಹಲವು ಕಾರಣಗಳು ಸಿಗುತ್ತವೆ. ಕೊರೋನಾ ಈ ದೇಶಕ್ಕೆ ಕಾಲಿಟ್ಟಾಗ ಹಳ್ಳಿಗಳು ವೈರಸ್’ನಿಂದ ಬಹುದೂರದಲ್ಲಿದ್ದವು. ಪೇಟೆಗಳಲ್ಲಿ ಮಾತ್ರ ಜನ ಕೊರೋನಾಕ್ಕೆ ಬಲಿಯಾಗುತ್ತಿದ್ದರು. ಆದರೆ ಕೊರೋನಾ ಎರಡನೆಯ ಅಲೆ ಹಳ್ಳಿಗರನ್ನು ತೀವ್ರವಾಗಿ ಬಾಧಿಸುತ್ತಿದೆ. ಇದಕ್ಕೆ ಹಳ್ಳಿಗರ ಸ್ವಯಂಕೃತ ಅಪರಾಧವೇ ಕಾರಣ ಎಂದರು.
ಯಾವೆಲ್ಲಾ ಕಾರಣಗಳಿಂದ ಹಳ್ಳಿಗಳಲ್ಲಿ ಸೋಂಕು ಹರಡುತ್ತಿದೆ ಎಂಬುದನ್ನು ಅವರು ಪಟ್ಟಿ ಮಾಡಿದ್ದು ಹೀಗೆ:
- ಹಳ್ಳಿ ಜನ ಮಾಸ್ಕ್ ಹಾಕದೇ ಇರುವುದು
- ಮಾಸ್ಕ್ ಹಾಕಿದ್ರೂ ತಿಂಗಳುಗಟ್ಟಲೇ ತೊಳೆಯದೇ ಇರುವುದು
- ಪೊಲೀಸರಿಗೆ ಹೆದರಿ ತೋರಿಕೆಗೆ ಮಾಸ್ಕ್ ಹಾಕುವುದು
- ಮಾಸ್ಕ್ ಸರಿಯಾಗಿ ಹಾಕದೇ ಇರುವುದು
- ಸ್ಯಾನಿಟೈಜರ್ ಉಪಯೋಗಿಸುವುದೇ ಇರುವುದು
- ಪದೇ ಪದೇ ಕೈ ತೊಳೆಯುವ ಪದ್ದತಿಯೇ ಇಲ್ಲ
- ಸ್ನಾನವೂ ಸೇರಿದಂತೆ ಸ್ವಚ್ಛತೆಯ ಬಗ್ಗೆ ಗಮನ ನೀಡದೇ ಇರುವುದು
- ಸಾಮಾಜಿಕ ಅಂತರದ ಅರ್ಥವೇ ಗೊತ್ತಿಲ್ಲ
- ಟಂ ಟಂ, ಗೂಡ್ಸ್ ವಾಹನ, ಟ್ರ್ಯಾಕ್ಟರ್ ಗಳಲ್ಲಿ ಗುಂಪಾಗಿ ಪ್ರಯಾಣ
- ಹಳ್ಳಿಗಳ ಚಹಾ ಅಂಗಡಿಗಳಲ್ಲಿ ಗುಂಪು ಗುಂಪುಗುಪಾಗಿ ಸೇರಿಕೊಳ್ಳುವುದು
- ದೇವಸ್ಥಾನ ಅರಳಿಕಟ್ಟೆಗಳಲ್ಲಿ ಗುಂಪಾಗಿ ಕುಳಿತು ಹರಟೆ ಹೊಡೆಯುವುದು
- ಮದುವೆಗೆ 40 ಜನಕ್ಕೆ ಪರವಾನಿಗೆ ತೆಗೆದುಕೊಂಡು ಕದ್ದು ಮುಚ್ಚಿ ನೂರಾರು ಜನ ಸೇರುವುದು
- ಒಬ್ಬರ ಮನೆಯಲ್ಲಿ ಯಾರಿಗಾದ್ರೂ ಹುಷಾರ್ ಇಲ್ಲಾಂದ್ರೆ ಎಲ್ಲರೂ ಖಾಯಿಲೆ ಬಿದ್ದವರನ್ನು ಮಾತನಾಡಿಸಲು ಹೋಗುವುದು
- ಕದ್ದು ಮುಚ್ಚಿ ರಾತ್ರೋ ರಾತ್ರಿ ಜಾತ್ರೆ ಪೂಜೆ ಹೋಮ ಹವನ ಮಾಡುವುದು
- ಕೊರೋನಾ ಸಿಟಿಗೆ ಸೀಮಿತವಾದ ಖಾಯಿಲೆ. ಹಳ್ಳಿ ಜನಕ್ಕೆ ಬರಲ್ಲ ಅನ್ನುವ ಭ್ರಮೆ
- ನಾವು ಚೆನ್ನಾಗಿ ದುಡಿತೀವಿ, ತಿಂತೀವಿ. ನಮಗೆ ಕೊರೋನಾ ಬರಲ್ಲ ಅನ್ನುವ ನಂಬಿಕೆ
- ಮದ್ಯಪಾನ ಮಾಡಿದ್ರೆ ಕೊರೊನಾ ಬರಲ್ಲ ಅನ್ನುವ ಭ್ರಮೆ
- ಕೊರೋನಾ ಕೇವಲ ಸರಕಾರ ಹಾಗೂ ಮಾಧ್ಯಮಗಳ ಸೃಷ್ಠಿ ಎಂದುಕೊಂಡಿರುವುದು
- ದುಡ್ಡು ಹೊಡೆಯಲು ಸರಕಾರ ಇದನ್ನೆಲ್ಲಾ ಮಾಡುತ್ತಿದೆ ಎಂಬ ಸುಳ್ಳು ನಂಬಿಕೆ ವ್ಯಾಕ್ಸಿನ್ ಬಗ್ಗೆ ಇಲ್ಲಸಲ್ಲದ ತಪ್ಪು ತಿಳುವಳಿಕೆಗಳು
- ವ್ಯಾಕ್ಸಿನ್ ಹಾಕಿಸಿಕೊಂಡರೆ ಜ್ವರ ಬರುತ್ತೆ ಮುಂದೆ ಸಾಯ್ತಾರೆ ಅನ್ನುವುದು
- ಕೊರೋನಾದಿಂದ ಶೀತ ಕೆಮ್ಮು ಬಂದರೂ ವೈದ್ಯರ ಬಳಿಗೆ ಹೋಗದೇ ಇರುವುದು
- ಗ್ರಾಮದಲ್ಲೇ ಲಭ್ಯ ಇರುವ ನಕಲಿ ವೈದ್ಯರ ಬಳಿ ಚಿಕಿತ್ಸೆ ಪಡೆದುಕೊಳ್ಳುವುದು
- ಕೊರೋನಾ ಪರೀಕ್ಷೆಯಿದ ದೂರ ಇರುವುದು
- ಕೆಮ್ಮು ಶೀತಕ್ಕೆಲ್ಲ ಹೆದರಬೇಡ ಎಂಬ ಹಳ್ಳಿಗರ ಮಾತಿಗೆ ಮಣಿಯೋದು
- ಜ್ವರ ಕೆಮ್ಮು ಉಲ್ಬಣಿಸಿದ್ರೆ ಯಂತ್ರ-ಮಂತ್ರ-ಬೂದಿ ಪ್ರಯೋಗ
- ಸೋಷಿಯಲ್ ಮೀಡಿಯಾದ ನಕಲಿ ಹಾಗೂ ಸುಳ್ಳು ವಿಡಿಯೋಗಳ ಮೇಲೆ ಭರವಸೆ ಇಟ್ಟುಕೊಳ್ಳುವುದು
- ದೊಡ್ಡಾಸ್ಪತ್ರೆಗಳಲ್ಲಿ ಕಿಡ್ನಿ ಕಣ್ಣು ಮಿದುಳು ಸೇರಿದಂತೆ ಹಲವು ಅಂಗಾಂಗಗಳನ್ನು ಕದಿಯಲು ವೈದ್ಯರು, ಸರ್ಕಾರ ನಡೆಸಿದ ಹುನ್ನಾರ ಎಂಬ ನಂಬಿಕೆ
- ಆಸ್ಪತ್ರೆಗಳಲ್ಲಿ ಅಡ್ಮಿಟ್ ಮಾಡಿಕೊಂಡರೆ ನೋಡೋಕೂ ಬಿಡಲ್ಲ, ಒಳಗೆ ಏನ್ ಮಾಡ್ತಾರೆ ಗೊತ್ತೇ ಆಗಲ್ಲ ಎಂದು ವೈದ್ಯರನ್ನೂ ನಂಬದ ಜನ
- ಕೊರೋನಾ ಪೀಡಿತ ಅಂತ ಗೊತ್ತಿದ್ದರೂ ಮನೆಯಲ್ಲಿ ಪ್ರತ್ಯೇಕವಾಗಿ ಉಳಿಯದೇ ಇರೋದು
- ಖಾಯಿಲೆ ಪೀಡಿತನಿಗೆ ಅಸ್ಪಶ್ಯತಾ ಭಾವನೆ ಬರದೇ ಇರಲಿ ಅನ್ನುವ ಕಾರಣಕ್ಕೆ ಅವನನ್ನು ತಮ್ಮ ಬಳಿ ಸೇರಿಸಿಕೊಳ್ಳುವುದು

ಎಎಸ್’ಐ ದೊಡ್ಡ ತಿಪ್ಪಯ್ಯ, ಪಿಸಿಗಳಾದ ರಾಜು, ರಮೇಶ ಬಾರ್ಕಿ, ಡಿಎಆರ್ ಪೋಲೀಸ್ ಸಿಬ್ಬಂದಿಗಳು ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post