ಇಂದು ದೇಶದೆಲ್ಲೆಡೆ ಕಾರ್ಗಿಲ್ ವಿಜಯೋತ್ಸವವನ್ನು ಆಚರಣೆ ಮಾಡಲಾಗುತ್ತಿದೆ. ದೇಶದ ರಕ್ಷಣೆಗಾಗಿ ವೀರಸ್ವರ್ಗ ಸೇರಿದ ಯೋಧರ ಗುಣಗಾನ ಮಾಡಿ, ನಮನ ಸಲ್ಲಿಸಲಾಗುತ್ತಿದೆ.
ಅದು 1999ರ ಜುಲೈ 26… ಇಡಿಯ ಭಾರತವೇ ಹಿರಿ ಹಿರಿ ಹಿಗ್ಗಿತ್ತು.. ಶತ್ರುಗಳ ಮೇಲೆ ವಿಜಂಗೈದು, ತಾಯಿ ಭಾರತಿಯ ಪಾದಪದ್ಮಗಳಿಗೆ ಅದನ್ನು ಅರ್ಪಣೆ ಮಾಡಿದ ಭಾರತೀಯ ಸೇನೆ ಹಾಗೂ ಸೇನೆಯ ಹಿಂದೆ ನಿಂತಿದ್ದ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರವನ್ನು ದೇಶವೇಕೆ ಇಡಿಯ ವಿಶ್ವವೇ ಹಾಡಿ ಹೊಗಳಿತ್ತು.
ಹೌದು… ಕಾಲು ಕೆರೆದುಕೊಂಡ ಪದೇ ಪದೇ ಭಾರತದ ಮೇಲೆ ಕದನಕ್ಕೆ ಕರೆಯುತ್ತಿದ್ದ ಪಾಪಿ ಪಾಕಿಸ್ಥಾನ ಅಕ್ಷರಶಃ ಆ ಯುದ್ದಕ್ಕೆ ನಲುಗಿ ಹೋಗಿತ್ತು.
ಅತ್ಯಂತ ಶೀತ ಪ್ರದೇಶ ಕಾರ್ಗಿಲ್‌ನ ಭಾರತದ ಭಾಗದಲ್ಲಿ ಪಾಕ್ ಸೈನಿಕರ ಒಳ ನುಗ್ಗಿದ್ದಾರೆ ಎಂಬ ಖಚಿತ ಮಾಹಿತಿ ಭಾರತೀಯ ಸೇನೆಗೆ ಬಂದಿರುತ್ತದೆ. ತತಕ್ಷಣವೇ ಎಚ್ಚೆತ್ತ ಸೇನೆ ಅಲ್ಲಿಗೆ ತೆರಳುವ ವೇಳೆಗೆ ಪಾಪಿಗಳು ಕಾರ್ಗಿಲ್‌ನ ಬಹುತೇಕ ಭಾಗವನ್ನು ಶತ್ರುಗಳು ವಶಕ್ಕೆ ಪಡೆದುಕೊಂಡಿದ್ದರು.
ಸಮುದ್ರ ಮಟ್ಟದಿಂದ ಸುಮಾರು 18 ಸಾವಿರ ಅಡಿ ಎತ್ತರದ ಪ್ರದೇಶವಾದ ಅಲ್ಲಿ ಚಳಿ ಎನ್ನುವುದು ಸಾಮಾನ್ಯರ ಕಲ್ಪನೆಗೆ ಮೀರಿದ್ದು. ಇಂತಹ ಸಂದರ್ಭದಲ್ಲಿ ಯುದ್ದ ಘೋಷಣೆಯಾಯಿತು. ವಾತಾವರಣಕ್ಕೆ ನಮ್ಮ ಸೈನಿಕರು ಹೆದರಲಿಲ್ಲ. ಮುನ್ನುಗ್ಗಿ ಶತ್ರುಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದರು.
ಅಂದು ನಿಜಕ್ಕೂ ಭಾರತೀಯ ಯೋಧರಲ್ಲಿ ಧೈರ್ಯ ಎನ್ನುವುದು ಉಗ್ರ ರೂಪ ತಾಳಿತ್ತು. ಪಾಕ್ ಸೈನಿಕರನ್ನು ತರಗೆಲೆಗಳಂತೆ ಸವರಿದ್ದರು. ನಮ್ಮ ಸೈನಿಕರ ಆರ್ಭಟಕ್ಕೆ ಪಾಕಿಸ್ಥಾನ ಅಕ್ಷರಶಃ ತಲ್ಲಣಿಸಿಹೋಗಿತ್ತು. ಈ ವೇಳೆ ಈ ಸ್ಥಳಕ್ಕೆ ಬಂದ ನಾವು ತಪ್ಪು ಮಾಡಿದೆವು. ಭಾರತೀಯ ಸೈನಿಕರ ಮನುಷ್ಯರೋ ರಾಕ್ಷಸರೋ ಎಂದು ಪಾಕ್‌ನ ಸೈನಿಕರು ಮಾತನಾಡಿಕೊಂಡಿದ್ದರು. ನಿಜಕ್ಕೂ ಭಾರತೀಯ ಯೋಧರು ಅಂದು ಪ್ರದರ್ಶಿಸಿದ ಸಾಹಸಕ್ಕೆ ಒಂದು ಕ್ಷಣ ಪ್ರಪಂಚವೇ ಬೆಚ್ಚಿತ್ತು.
ಈ ಸಂದರ್ಭದಲ್ಲಿ ಭಾರತದ ಸುಮಾರು 550 ಯೋಧರು ವೀರಸ್ವರ್ಗ ಸೇರಿದ್ದರು. ಆದರೆ, ಪಾಪಿ ಪಾಕಿಸ್ಥಾನದ ಸುಮಾರು 3500 ರಿಂದ 4000 ಯೋಧರನ್ನು ಭಾರತೀಯ ಯೋಧರು ಹೊಸಕಿ ಹಾಕಿದ್ದರು.
ಆದರೆ, ಪಾಕಿಸ್ಥಾನ ತನ್ನ ಸೈನಿಕರ ಶವಗಳನ್ನು ಪಡೆದುಕೊಳ್ಳಲಿಲ್ಲ. ಯಾಕೆ ಗೊತ್ತಾ? ತನ್ನ 4000 ಸಾವಿರ ಸೈನಿಕರ ಶವಗಳನ್ನು ತಾನು ಪಡೆದುಕೊಂಡರೆ ಶಾಂತಿ ಒಪ್ಪಂದ ಹಾಗೂ ಕದನ ವಿರಾಮವನ್ನು ಮುರಿದು ದಾಳಿ ಆರಂಭಿಸಿ, ಯುದ್ದಕ್ಕೆ ಕಾರಣವಾಗಿದ್ದು ತಾನೆ ಎಂದು ಒಪ್ಪಿಕೊಂಡಂತಾಗುತ್ತದೆ ಎಂಬ ಕಾರಣಕ್ಕಾಗಿ ತನ್ನ ಸೈನಿಕರ ಶವಗಳನ್ನು ಪಾಕ್ ಪಡೆದುಕೊಳ್ಳಲಿಲ್ಲ.
ಆದರೆ, ಇಂತಹ ಸಂದರ್ಭದಲ್ಲಿ ಶತ್ರುಗಳದ್ದೇ ಆಗಿದ್ದರೂ ಸಹ ಪಾಕ್ ಸೈನಿಕರ ಶವಗಳಿಗೆ ಅಂತಿಮ ಸಂಸ್ಕಾರ ನೆರವೇರಿಸಿ, ವಿಶಾಲ ಮನೋಭಾವನೆ ಹಾಗೂ ವಿಶ್ವಭ್ರಾತೃತ್ವವನ್ನು ಮೆರೆದಿದ್ದು ನಮ್ಮ ಹೆಮ್ಮೆಯ ಭಾರತೀಯ ಸೇನೆ…
-ಜೈ ಜವಾನ್
Discussion about this post