ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ ಅವರು ನಾನು ಅತ್ಯಂತ ಹೆಚ್ಚು ಗೌರವಿಸುವ ವ್ಯಕ್ತಿಯಾಗಿದ್ದು, ನನ್ನ ಪಾಲಿಗೆ ಅವರು ಶ್ರೀರಾಮ ಇದ್ದಂತೆ ಎಂದು ಮೋದಿ ಪತ್ನಿ ಜಶೋಧಾಬೆನ್ ಹೇಳಿದ್ದಾರೆ.
ಜಶೋದಾಬೆನ್ ಅವರನ್ನು ಮೋದಿ ವಿವಾಹವಾಗಿಲ್ಲ ಎಂದು ಗುಜರಾತ್ ಮಾಜಿ ಸಿಎಂ, ಮಧ್ಯಪ್ರದೇಶ ರಾಜ್ಯಪಾಲೆ ಈ ಹಿನ್ನೆಲೆಯಲ್ಲಿ ಅವರು ಪ್ರತಿಕ್ರಿಯೆ ನೀಡಿದ್ದು, ಆನಂದಿಬೆನ್ ಪಟೇಲ್ ಮಾತಿಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ತನ್ನನ್ನು ಮೋದಿ ವಿವಾಹವಾಗಿಲ್ಲ ಎಂದು ಆನಂದಿಬೆನ್ ಯಾತಕ್ಕಾಗಿ ಹೇಳಿದ್ದಾರೋ ನನಗೆ ತಿಳಿದಿಲ್ಲ. ಆದರೆ, 2004ರ ಚುನಾವಣೆಯ ಸಂದರ್ಭದಲ್ಲಿ ನಾಮಪತ್ರ ಸಲ್ಲಿಸುವ ವೇಳೆ ವಿವಾಹಿತ ಎಂದು ನಮೂದಿಸಿ, ತನ್ನ ಹೆಸರನ್ನು ಬರೆದಿದ್ದಾರೆ. ಆದರೆ, ಆನಂದಿಬೆನ್ ಯಾತಕ್ಕಾಗಿ ಹೀಗೆ ಹೇಳಿದ್ದಾರೆ ಎಂದಿದ್ದಾರೆ.
ಶಿಕ್ಷಿತ ಮಹಿಳೆಯಾಗಿ ಆನಂದಿಬೆನ್ ಅವರ ಮಾತುಗಳು ಆಶ್ಚರ್ಯ ಹಾಗೂ ಖೇಧವನ್ನು ಉಂಟು ಮಾಡಿದೆ. ಅವರ ಈ ಹೇಳಿಕೆಗಳು ಈ ದೇಶದ ಗೌರವಾನ್ವಿತ ಪ್ರಧಾನಿಯೊಬ್ಬರ ವ್ಯಕ್ತಿತ್ವಕ್ಕೆ ಕಳಂಕವನ್ನು ತರುತ್ತದೆ ಎನ್ನುವುದನ್ನು ಅವರು ಅರಿಯಬೇಕು ಎಂದಿದ್ದಾರೆ.
Discussion about this post