No Result
View All Result
Rani KoHEnur Calls Transgender Bill “Absurd”, Questions Lawmakers in Explosive Podcast Interview
English Articles

Rani KoHEnur Calls Transgender Bill “Absurd”, Questions Lawmakers in Explosive Podcast Interview

by ಕಲ್ಪ ನ್ಯೂಸ್
April 9, 2026
0

Kalpa Media House  |  Mumbai | Artist, drag performer, and activist Rani KoHEnur (Sushant Divgikar) has ignited widespread conversation following...

Read moreDetails
RPF team Seized 40.495 Kgs Ganja at Ballari Railway station

RPF team Seized 40.495 Kgs Ganja at Ballari Railway station

April 7, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

Extension of Special Train Services to Manage Summer Rush

April 7, 2026
Interior / upgradation of Next-Generation Amrit Bharat Coaches. Sample coach ready

Interior / upgradation of Next-Generation Amrit Bharat Coaches. Sample coach ready

April 6, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

Special Train Between Bengaluru Cantt and Chennai

April 3, 2026
  • Advertise With Us
  • Grievances
  • About Us
  • Contact Us
Thursday, April 9, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಅಂಕಣ ಸಚಿನ್ ಪಾರ್ಶ್ವನಾಥ್

ಎದುರಾಳಿಯನ್ನು ಗೆಲ್ಲಲು ಶಿವಾಜಿ ಮಹಾರಾಜರ ತಂತ್ರಗಾರಿಕೆ ಹೇಗಿರುತ್ತಿತ್ತು ಗೊತ್ತಾ?

ಹಿಂದೂ ಸಾಮ್ರಾಜ್ಯ ದಿನ: ಸನಾತನ ಸಂಸ್ಕೃತಿಯ ಉಳಿವಿಗೆ ತಮ್ಮ ಬದುಕನ್ನೇ ಮುಡಿಪಿಟ್ಟ ಮಹಾಭಾರತೀಯನ ಸಿಂಹಾಸನಾರೋಹಣ ದಿನವಿಂದು

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
June 4, 2020
in ಸಚಿನ್ ಪಾರ್ಶ್ವನಾಥ್
0
ಎದುರಾಳಿಯನ್ನು ಗೆಲ್ಲಲು ಶಿವಾಜಿ ಮಹಾರಾಜರ ತಂತ್ರಗಾರಿಕೆ ಹೇಗಿರುತ್ತಿತ್ತು ಗೊತ್ತಾ?
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ತಾಯಿ ಜೀಜಾಬಾಯಿ ಗರ್ಭವತಿಯಾಗಿರುತ್ತಾರೆ. ಸಹಜವಾಗಿ ಬಯಕೆಗಳು ಉದಿಸುತ್ತವೆ ಅಲ್ಲವೇ? ಅವು ಸಾಮಾನ್ಯವಾದವು ಆಗಿರಲಿಲ್ಲ. ಹದಿನೆಂಟು ಕೈಗಳಿರುವ ನಾನು ಸಿಂಹವನ್ನು ಓಡಿಸಿದಂತೆ ಕನಸು ಬೀಳುತ್ತಿದೆ. ಪ್ರತಿ ಕೈಯಲ್ಲೂ ಶಸ್ತ್ರ ಹಿಡಿದು ಭೂಮಿಯ ಮೇಲಿನ ಅಷ್ಟೂ ಶತ್ರುಗಳ ನಾಶ ಮಾಡಿ ಬೆಳ್ಗೊಡೆಯ ಅಡಿಯ ಸಿಂಹಾಸನ ಏರಿದ ಕನಸು ಬೀಳುತ್ತಿದೆ. ಕೇಳಿದವರು ಮುಗುಳು ನಗೆ ಬೀರಿದರು. ಮಾತೆ ನಮ್ಮ ಪರಂಪರೆಯಲ್ಲಿ ಅಧಿಕಾರವನ್ನು ದೈವದಿಂದ ಬೇಡಿ ಪಡೆದುದೇ ಹೆಚ್ಚು. ಹೀಗೆ ಕಾದು ಪಡೆದ ಇತಿಹಾಸವೇ ಇಲ್ಲ.

ಹೌದು ಹಾಗಿತ್ತು ಕಾಲ. ಸನಾತನ ಧರ್ಮದಲ್ಲಿ ಅದೆಂತಹ ನಿಷ್ಠೆ, ಅದಮ್ಯ ಪ್ರಾಮಾಣಿಕತೆ ಎಂದರೆ ಪರಂಪರಾಗತ ಅಧಿಕಾರವನ್ನು ದೈವದ ಸಾಕ್ಷಿಯಾಗಿ, ಅದರ ಅಣತಿಯಂತೆ ಪಡೆದ ಇತಿಹಾಸ ಇರುವುದು. ಅದೆಂತಹ ವೈರಿಯೇ ಆಗಿರಲಿ ಹಿಂದೂ ಸಾಮ್ರಾಟರು ಮೋಸ ಮಾಡಿ ಸಿಂಹಾಸನ ಪಡೆದುದಿಲ್ಲ. ಅದು ಬಿಡಿ, ತಂದೆ, ತಾಯಿ, ಸಹೋದರ ಕಗ್ಗೊಲೆ ಮಾಡಿಯೋ, ಬಂಧಿಸಿಟ್ಟೋ ಅಧಿಕಾರ ಪಡೆದ ಒಂದು ಉದಾಹರಣೆಯೂ ಇಲ್ಲ.

ಮಹಾರಾಜರ ಜನ್ಮ ಸಂದರ್ಭದಲ್ಲಿ ಪರಿಸ್ಥಿತಿ ಹಾಗಿರಲಿಲ್ಲ. ಅಂದ ಮಾತ್ರಕ್ಕೆ ಯಾರನ್ನೂ ತುಳಿದು ಗದ್ದುಗೆ ಏರಬೇಕು ಅಂತಲ್ಲ, ಆದರೆ ದೈವ ಪ್ರೇರಣೆಗೆ ಕಾಯದೇ ಒಬ್ಬ ವೀರ ಧರ್ಮ ಕಾಯಲೇಬೇಕಿತ್ತು. ಅಂತೆಯೇ ಅಂತಹ ಸ್ವಪ್ನವೂ ಮಹಾಮಾತೆಗೆ ಬಿದ್ದಿತ್ತು.

ಕಾಬೂಲಿನ ಅತಿಕ್ರಮಣದಿಂದ ಹಿಡಿದು ಈ ಸುಮುಹೂರ್ತದ ತನಕವೂ ಭಾರತದ ತನ್ನ ಪರಂಪರೆಯ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಸೋಲುತ್ತಲೇ ಇತ್ತು. ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ, ಅದು ಶ್ರೀ ಕೃಷ್ಣ ಹೇಳಿದಂತೆ ಅಧರ್ಮದ ಪತಾಕೆ ಗಗನಕ್ಕೆ ಏರಿದಾಗೆಲ್ಲ ಧರ್ಮವನ್ನು ಎತ್ತಿ ಹಿಡಿಯಲು ಪುಣ್ಯಪುರುಷರು ಜನ್ಮವೆತ್ತಿ ಬರುತ್ತಾರೆ, ಬರುತ್ತಲೇ ಇದ್ದಾರೆ. ಶಿವನೇರಿ ಕೋಟೆಯಲ್ಲಿ ಫೆಬ್ರವರಿ 19, 1630 ರಲ್ಲಿ ಜನನವಾಯಿತು. ಆದರೆ ತಾಯಿ ಜೀಜಾಬಾಯಿಗೆ ಮಗ ಹಿಂದೂ ಧರ್ಮ ರಕ್ಷಕನಾಗುವ ಕನಸು. ಒಂದಿಷ್ಟು ಘಟನೆಗಳು ಜರುಗಿದವು. ಔರಂಗಜೇಬನ ತಿರಸ್ಕರಿಸಿ ಬಂದ ಕವಿ ಭೂಷಣ, ಕಾಶಿಯಿಂದ ಕಲಿಯೊಬ್ಬನ ಅರಸುತ್ತಾ ಬಂದ ಗಾಗಾ ಭಟ್ಟ ಹೀಗೆ ಇವರೆಲ್ಲರಿಗೂ ಮಹಾರಾಜರಲ್ಲಿ ಆ ತೇಜಸ್ಸು ಗಮನಕ್ಕೆ ಬಂದಿತು. ಅಂತಹ ಒಂದು ಬೃಹತ್ ಕನಸಿಗಾಗಿ ಶಿವಾಜಿ ಮಹಾರಾಜರ ಪದಗ್ರಹಣವಾಯಿತು.

ಕವಿ ಭೂಷಣ ಹೇಳಿದಂತೆ,
ಕಾಶಿಯ ಕಲೆಯ ನಶಿಸುತ್ತಿತ್ತು,
ಮಧುರೆಯು ಮಸೀದಿಯಾಗುತ್ತಿತ್ತು,
ಶಿವಾಜಿ ಮಹಾರಾಜರು ಇಲ್ಲದಿದ್ದರೆ,
ಪ್ರತಿ ಭಾರತೀಯನ ಸುನ್ನತ್ ಆಗಿರುತ್ತಿತ್ತು.
ಈ ಸಾಲುಗಳೇ ಹೇಳುತ್ತಿದ್ದವು, ಛತ್ರಪತಿಗಳ ಪದಾರೋಹಣದ ಅವಶ್ಯಕತೆ ಕುರಿತು. ಇತಿಹಾಸವನ್ನು ತಿರುವಿದಾಗ ಭಾರತದ ಉದ್ದಗಲದ ಪರಿಚಯವಾಗುತ್ತದೆ. ಅಂತಹ ಕಳೆದುಕೊಳ್ಳುವ ಸ್ಥಿತಿ ಮುಂದುವರಿದು ಇಂದು ಭಾರತ ಸುನ್ನತಿಗಳ ದೇಶವಾಗಿರುತ್ತಿತ್ತು. ಅಸ್ಸಾಂನ ರಾಜ ಚಕ್ರಧ್ವಜ್ ಸಿಂಗ್ ಹೇಳುತ್ತಾನೆ, ಎಲ್ಲಿಯ ತನಕ ನಾನು ಶಿವಾಜಿ ಮಹಾರಾಜರ ಕಾರ್ಯತಂತ್ರಗಳ ಅನುಸರಿಸುತ್ತೇನೋ ಅಲ್ಲಿಯ ತನಕ ನನ್ನ ರಾಜ್ಯವನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವೇ ಇಲ್ಲ ಎಂದು. ಅಂತೆಯೇ ಎಂದಿಗೂ ಅಸ್ಸಾಂ ತಲೆ ಬಾಗಲೇ ಇಲ್ಲ. ಹೀಗೆ ಶಿವಾಜಿ ಮಹಾರಾಜರ ಯುದ್ದ ನೈಪುಣ್ಯತೆ, ಕಾರ್ಯ ವೈಖರಿಯನ್ನು ಕೇಳಿ ಕೇಳಿ ಆನಂದಿಸಬೇಕು. ಅವರು ಸಾಮ್ರಾಟರಾಗಲೆಂದೇ ಹುಟ್ಟಿದವರು.

ಶಿವಾಜಿ ಮಹಾರಾಜರ ಬದುಕಿನಲ್ಲಿ ಮತ್ತೊಂದು ಗಮನಿಸುವ ಅಂಶವಿದೆ. ಅದೆಂದರೆ ಸೋತಂತೆ ನಟಿಸಿ ಗೆಲ್ಲುವುದು ಅಂತೆಯೇ ಎದುರಾಳಿಯ ಮಾನಸಿಕತೆಯ ಮೇಲೆ ದಾಳಿ ಮಾಡುವುದು. ಬಹಳಷ್ಟು ಬಾರಿ ಇಂತಹ ಘಟನೆಗಳು ಅವರ ಯಶೋಗಾಥೆಯಲ್ಲಿ ದೊರಕುತ್ತವೆ.

‘ಹಿಂದವಿ ಸ್ವರಾಜ್ಯ ನಿರ್ಮಾಣ ವ್ಹಾವೆ, ಹೀಚ್ ಶ್ರೀಂಚಿ ಇಚ್ಛಾ’
ಇಡೀ ಬದುಕನ್ನು ಸನಾತನ ಸಂಸ್ಕೃತಿಯ ಉಳಿವಿಗಾಗಿಯೇ ಮುಡಿಪಿಟ್ಟ ಮಹಾಭಾರತೀಯನ ಸಿಂಹಾಸನಾರೋಹಣ ದಿನವಿಂದು. ಈ ದಿನವನ್ನು ನೆನೆದು ಪುಣ್ಯ ಪಡೆಯೋಣ. ಅವರು ಒಬ್ಬ ಸಾಮಾನ್ಯ ರಾಜನಾಗಿ ನೂರು ಕಾಲ ಬಾಳಬಹುದಿತ್ತು. ಅವತ್ತು ಅವರು ಹಾಗೆ ಬದುಕಿದ್ದರೆ ಇವತ್ತು ನಾನು ಈ ಲೇಖನ ಬರೆಯುವ ಪ್ರಸಂಗವೇ ಇರುತ್ತಿರಲಿಲ್ಲ ಅಲ್ಲವೇ? ಅಂದು ರಾಯಗಢದ ಅಂಗಣದಲ್ಲಿ ಭೂತಾಯಿಯ ಮಡಿಲಲ್ಲಿ ಮಲಗುವ ಮುನ್ನ ಕೇವಲ ಐವತ್ತು ವರ್ಷ ಬದುಕಿದರೂ ಐವತ್ತು ಶತಮಾನಗಳು ನೆನೆಯುವಂತಹ ಬದುಕು ಅವರದು. ಶಿವ ಛತ್ರಪತಿ ಮಹಾರಾಜ್ ಕೀ ಜೈ..


Get In Touch With Us info@kalpa.news Whatsapp: 9481252093

Tags: BharatChhatrapati Shivaji MaharajHinduKannadaNewsWebsiteLatestNewsKannadaSachin Parshwanathಭಾರತಶಿವಾಜಿ ಮಹಾರಾಜರುಸನಾತನ ಸಂಸ್ಕೃತಿಹಿಂದವಿ ಸ್ವರಾಜ್ಯ
Share234Tweet123Send
Previous Post

ಕೊರೋನಾ ಬಗ್ಗೆ ಆತಂಕ ಬೇಡ, ಎಚ್ಚರಿಕೆ ಇರಲಿ: ಡಿಸಿ ಶಿವಕುಮಾರ್ ಸಲಹೆ

Next Post

ಎಂಎಸ್‌ಎಂಇಗಳಿಗೆ ಪೂರಕವಾಗಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ತರಬೇತಿ: ಡಾ. ಅಶ್ವತ್ಥನಾರಾಯಣ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಎಂಎಸ್‌ಎಂಇಗಳಿಗೆ ಪೂರಕವಾಗಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ತರಬೇತಿ: ಡಾ. ಅಶ್ವತ್ಥನಾರಾಯಣ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಹುಲಿಕಲ್ ಘಾಟಿಯಲ್ಲಿ ಭಾರೀ ದುರಂತ | ಧರೆ ಕುಸಿದು ಮೂವರು ಕಾರ್ಮಿಕರ ಸಾವು

ಹುಲಿಕಲ್ ಘಾಟಿಯಲ್ಲಿ ಭಾರೀ ದುರಂತ | ಧರೆ ಕುಸಿದು ಮೂವರು ಕಾರ್ಮಿಕರ ಸಾವು

April 9, 2026
ಪಿಯುಸಿ ರಿಸಲ್ಟ್ | ಪೇಸ್ ಕಾಲೇಜಿನ ವಿದ್ಯಾರ್ಥಿನಿ ಮಹಿನ್ ರಾಜ್ಯಕ್ಕೆ 3, ಜಿಲ್ಲೆಗೆ ಪ್ರಥಮ ಸ್ಥಾನ

ಪಿಯುಸಿ ರಿಸಲ್ಟ್ | ಪೇಸ್ ಕಾಲೇಜಿನ ವಿದ್ಯಾರ್ಥಿನಿ ಮಹಿನ್ ರಾಜ್ಯಕ್ಕೆ 3, ಜಿಲ್ಲೆಗೆ ಪ್ರಥಮ ಸ್ಥಾನ

April 9, 2026
ದೇಶ ಸಮೃದ್ಧಿಯಾದಾಗ ನಾವೆಲ್ಲರೂ ಸಮೃದ್ಧಿ: ಸಂಸದ ರಾಘವೇಂದ್ರ

ದೇಶ ಸಮೃದ್ಧಿಯಾದಾಗ ನಾವೆಲ್ಲರೂ ಸಮೃದ್ಧಿ: ಸಂಸದ ರಾಘವೇಂದ್ರ

April 9, 2026
`ನಾನು ಕರುಣಾಕರ್’ ಚಿತ್ರನೋಡಿ, ಹೊಸ ಪ್ರತಿಭೆಗಳನ್ನು ಬೆಂಬಲಿಸಿ: ನಿರ್ಮಾಪಕ ನಮನ್ ನಾರಾಯಣ್ ಸಂತೋಷ್

`ನಾನು ಕರುಣಾಕರ್’ ಚಿತ್ರನೋಡಿ, ಹೊಸ ಪ್ರತಿಭೆಗಳನ್ನು ಬೆಂಬಲಿಸಿ: ನಿರ್ಮಾಪಕ ನಮನ್ ನಾರಾಯಣ್ ಸಂತೋಷ್

April 9, 2026
ಪಿಯುಸಿ ರಿಸಲ್ಟ್ | ಕುಮದ್ವತಿ ಕಾಲೇಜಿಗೆ ಶೇ.100 ರಷ್ಟು ಫಲಿತಾಂಶ | ಹೆಮ್ಮೆಯ ವಿದ್ಯಾರ್ಥಿಗಳಿವರು

ಪಿಯುಸಿ ರಿಸಲ್ಟ್ | ಕುಮದ್ವತಿ ಕಾಲೇಜಿಗೆ ಶೇ.100 ರಷ್ಟು ಫಲಿತಾಂಶ | ಹೆಮ್ಮೆಯ ವಿದ್ಯಾರ್ಥಿಗಳಿವರು

April 9, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL