ಮಂಗಳೂರು: ಕೊಂಕಣಿ ಸಿನಿ ಪ್ರಿಯರಿಗೆ ಸಿಹಿ ಸುದ್ದಿ ಪ್ರಖ್ಯಾತ ಹಿಂದಿ ಗಾಯಕ ಅರ್ಮಾನ್ ಮಲಿಕ್ ಕೊಂಕಣಿ ಚಿತ್ರವೊಂದರಲ್ಲಿ ಹಾಡಿದ್ದಾರೆ.
ಹೌದು, ಬಹುನೀರಿಕ್ಷಿತ ಕೊಂಕಣಿ ಚಲನಚಿತ್ರ ಮ್ಯಾಂಗಲೋರ್ ಟು ಗೋವಾ ಶೀಘ್ರದಲ್ಲಿ ಬಿಡುಗಡೆಯಾಗಲಿದ್ದು, ಇದರ ಸುಂದರವಾದ ಹಾಡೊಂದನ್ನು ಪ್ರಖ್ಯಾತ ಬಾಲಿವುಡ್ ಗಾಯಕ ಅರ್ಮಾನ್ ಮಲಿಕ್ ಹಾಡಿದ್ದಾರೆ.
ಇನ್ನೊಂದು ವಿಶೇಷ ಎಂದರೆ ಈ ಹಾಡನ್ನು ಕನ್ನಡ ಚಲನಚಿತ್ರ ನಿರ್ದೇಶಕ ಗಣಿ ದೇವ್ ಕಾರ್ಕಳ ಬರೆದಿರೋದು. ಈಗಾಗಲೇ ಹಾಡು ಯುಟ್ಯೂಬ್’ನಲ್ಲಿ ಬಿಡುಗಡೆಗೊಂಡಿದ್ದು, ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.
ನೀಲ್ ರಸ್ಕ್ಯೂನ ಕೊಂಕಣಿ ಅನುವಾದಿತ ಈ ಹಾಡಿಗೆ ಕೊಂಕಣಿಗರು ಫೀದಾ ಆಗಿದ್ದಾರೆ. ರುಧಿರ ಫಿಲಂ ಬ್ಯಾನರ್’ನಲ್ಲಿ ಬ್ಲೇನ್ಜ್ ಕ್ರಿಯೇಷನ್ ಸಹಭಾಗಿತ್ವದಲ್ಲಿ ಮೂಡಿ ಬರುತ್ತಿರುವ ಮ್ಯಾಂಗಲೋರ್ ಟು ಗೋವಾ ಚಿತ್ರವನ್ನು ವಿನ್ಸೆಂಟ್ ಡಿಸೋಜ ಹಾಗೂ ಮೆಲ್ವಿನ್ ವಿಲ್ಫ್ರೆಡ್ ಪಿಂಟೋ ನಿರ್ಮಿಸಿದ್ದಾರೆ. ಇದೆ ಬರುವ ನವೆಂಬರ್ ಒಂದರಂದು ಗೋಲ್ಡನ್ ಜುಬಿಲಿ ಹಾಲ್’ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಚಿತ್ರದ ಹಾಡುಗಳು ಬಿಡುಗಡೆಯಾಗಲಿದೆ.
Discussion about this post