Monday, July 28, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Small Bytes

ಲಾಕ್ ಡೌನ್ ಪರಿಣಾಮ ಜನರ ಮನಃಸ್ಥಿತಿ ಹೇಗಿದೆ ಗೊತ್ತಾ?

May 11, 2020
in Small Bytes, Special Articles
0 0
0
File Image

File Image

Share on facebookShare on TwitterWhatsapp
Read - 3 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ವಿಶ್ವವೇ ತಲ್ಲಣಿಸಿ, ಪರದಾಡುವ ಸ್ಥಿತಿಗೆ ತಂದು ನಿಲ್ಲಿಸಿದೆ ಕೊರೋನಾ ಮಹಾಮಾರಿ. ಸಿರಿವಂತ ರಾಷ್ಟ್ರಗಳೂ ಕೈಚೆಲ್ಲುವ ಪರಿಸ್ಥಿತಿಯಲ್ಲಿವೆ. ಮುಂದುವರೆದ ದೇಶಗಳಾದ ಇಟಲಿ, ಫ್ರಾನ್ಸ್‌, ಅಮೆರಿಕಾ ದೇಶಗಳೂ ಕಂಗಲಾಗಿವೆ. ತಮ್ಮಲ್ಲಿ ವಿಶ್ವದರ್ಜೆಯ ವೈದ್ಯಕೀಯ ಸವಲತ್ತುಗಳು ಇದ್ದರೂ ಕೊರೋನಾ ಸಾಂಕ್ರಾಮಿಕವನ್ನು ತಡೆಗಟ್ಟಲು ಆಗುತ್ತಿಲ್ಲ.

ಮುಂಜಾನೆಯ ಸೂರ್ಯನ ತಾಪದಂತೆ ಏರುತ್ತಿರುವ ಸಾವಿನ ಗಣತಿಯನ್ನು ನಿಲ್ಲಿಸಲಾಗುತ್ತಿಲ್ಲ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪರಿಸ್ಥಿತಿ ಹೀಗಾದರೆ ಅಭಿವೃದ್ಧಿಶೀಲ ರಾಷ್ಟ್ರಗಳ ಕತೆಯಂತೂ ಇನ್ನಷ್ಟೂ ಶೋಚನೀಯ ಆಗಿವೆ. ವಿಶ್ವದಾದ್ಯಂತ ಲಕ್ಷಗಟ್ಟಲೆ ಜನರು ಗತ ಪ್ರಾಣರಾಗಿದ್ದಾರೆ. ಸುದ್ದಿ ಮೂಲಗಳ ಪ್ರಕಾರ ಸಾವಿರದ (ಸಾವು ಇರದ) ದೇಶಗಳೇ ಇಲ್ಲ. ಭಾರತಕ್ಕೆ ಜನವರಿ ತಿಂಗಳಲ್ಲಿ ಆಮದಾದ ಕೊರೋನಾ ಡ್ರ್ಯಾಗನ್… ಮೆಲ್ಲ… ಮೆಲ್ಲನೆ… ಬಂದು..ಉಸಿರಾಡಿ….. ಹರಿದಾಡಿ ಈಗ ಹೆಡೆಯೆತ್ತಿ ಬುಸುಗುಟ್ಟುತ್ತಿದೆ. ಬುಸುಗುಡುತ್ತಿರುವ ವಿಷಗಾಳಿಗೆ ಸತ್ತವರ ಸಂಖ್ಯೆ ಸಾವಿರದ ಮೇಲಾಗಿದೆ.

ಸೋಂಕಿತರ ಸಂಖ್ಯೆ ಲಕ್ಷದತ್ತ ಲಕ್ಷ ವಹಿಸಿದೆ. ದೂರದೃಷ್ಟಿಯ ನಮ್ಮ ರಾಷ್ಟ್ರದ ನಾಯಕರು ಮಾರ್ಚ್ 22ರಂದು ಜನತಾ ಕರ್ಫ್ಯೂ ಆಚರಿಸಿ ಎಂದು ಕರೆಕೊಟ್ಚರು. ಮಾರ್ಚ್ 25ರಿಂದ ಎಪ್ರಿಲ್ 14, ಎಪ್ರಿಲ್ 15ರಿಂದ ಮೇ 4, ಹಾಗೂ ಮೇ 5ರಿಂದ ಮೇ 17ರವರೆಗಿನ ಮೂರು ಹಂತದ ಲಾಕ್ ಡೌನ್ ಜಾರಿಗೆ ತಂದರು. ಇನ್ನು ಮುಂದಕ್ಕೆ ಆಯಾ ರಾಜ್ಯಗಳು ಮುಂದುವರಿಸುವ ಸಂಭವಗಳೂ ಒದಗಿಬರಬಹುದು.

ಶೇಕಡಾ 70ರಿಂದ 80 ಜನರು ಲಾಕ್ ಡೌನ್ ನಿಯಮಗಳನ್ನು ಪಾಲಿಸಿದರೆ ಉಳಿದ ಜನರು ಪಾಲಿಸುತ್ತಿಲ್ಲ. ನಮ್ಮ ದೇವರು ಕಾಪಾಡುತ್ತಾನೆಂದು ಸಾಂಕ್ರಾಮಿಕವನ್ನು ಸಾಂಘಿಕವಾಗಿ ಪಸರಿಸುವ ಪ್ರಯತ್ನವನ್ನು ಮಾಡುತ್ತಿರುವುದು ಖಂಡನೀಯ ಮತ್ತು ಯೋಚನೀಯವೂ ಆಗಿದೆ. ಲಾಕ್ ಡೌನ್ ಸಮಯದಲ್ಲಿ ಸಮಾಜದ ವಿವಿಧ ವರ್ಗಗಳ ಮನಃಸ್ಥಿತಿ ಹೇಗಿರಬಹುದು ಎಂಬುದನ್ನು ಇಲ್ಲಿ ಚರ್ಚಿಸಲಾಗಿದೆ. ಇಲ್ಲಿ ಹೇಳಿರುವುದು ಎಲ್ಲವೂ ಪರಮ ಸತ್ಯವಾಗಿರಬೇಕೆಂದೇನೂ ಇಲ್ಲ. ಊರಿನಿಂದ ಊರಿಗೆ, ಜನರಿಂದ ಜನರಿಗೆ ಬದಲಾಗಬಹುದು.

ವಿದ್ಯಾರ್ಥಿಗಳು
ಪರೀಕ್ಷೆಗೆ ಹಾಜರಾಗುತ್ತಿದ್ದ ಹಾಗೂ ಹಾಜರಾಗಬೇಕಿದ್ದ ವಿದ್ಯಾರ್ಥಿಗಳಲ್ಲಿ ಮಿಶ್ರ ಅಭಿಪ್ರಾಯಗಳು ವ್ಯಕ್ತಗೊಂಡಿವೆ. ಕಷ್ಟಪಟ್ಟು ಅಭ್ಯಾಸ ಮಾಡಿರುವ, ಹೆಚ್ಚು ಅಂಕಗಳನ್ನು ಗಳಿಸುವ ವಿಶ್ವಾಸವಿದ್ದ ವಿದ್ಯಾರ್ಥಿಗಳಿಗೆ ಲಾಕ್ ಡೌನ್ ಮೊದಲಿಗೆ ಸಂತೋಷದಾಯಕವಾಗಿರಲಿಲ್ಲ. ನಡೆಯುತ್ತೆ… ಚಲ್ತಹಿ ಗುಂಪಿಗೆ.. ಮುಂದೂಲ್ಪಡುತ್ತದೆ.. ಎಂದಾಗ ಸಂತಸವೇ ಆಗಿದೆ. ಇನ್ನೂ ಪರೀಕ್ಷೆ ಮಾಡದೆ ಮೇಲಕ್ಕೆರಿಸುತ್ತೇವೆ ಎಂದಾಗ ಉಲಿದು ನಲಿದವರೂ ಇರಬಹುದು. ತಾಂತ್ರಿಕ ವಿದ್ಯಾರ್ಥಿಗಳ ಪ್ರಾಜೆಕ್ಟ್‌ ಮೊದಲಾದವುಗಳನ್ನು ’ಸಕ್ರಿಯ ಜಾಲದ’ (Online) ಮೂಲಕ ಮಾಡುವಂತೆ ಹೇಳಲಾಯಿತು. ಈಗ ಹೆಚ್ಚಿನ ವಿದ್ಯಾರ್ಥಿಗಳು ’ಬೋರ’ (Bore) ’ಮೂಢ(Mood) ರ’ ವಶವಾಗಿದ್ದಾರೆ. ದಿನಪೂರ್ತಿ ದೂರದರ್ಶನ, ಜಂಗಮವಾಣಿ, ಅಂತರ್ಜಾಲಗಳಲ್ಲಿ ಸಮಯ ವ್ಯಥಿಸುತ್ತಿದ್ದಾರೆ. ಹೆತ್ತವರ ಬಿಸಿಯಾದ ತಲೆಯನ್ನು ಇನ್ನಷ್ಟು ಬಿಸಿಯಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಉದ್ಯೋಗಪತಿಗಳು
ದೇಶದ ಆರ್ಥಿಕತೆಯ ಬೆನ್ನೆಲುಬಾಗಿರುವ ಉದ್ಯೋಗಪತಿಗಳ ಸ್ಥಿತಿಗಳು ನಿಜಕ್ಕೂ ಚಿಂತಾಜನಕವಾಗಿದೆ. ಕಾರ್ಖಾನೆ, ಕಾರ್ಯಾಲಯ, ಹೋಟೆಲು ಮುಂತಾದುಗಳನ್ನು ತೆರೆಯುವಂತಿಲ್ಲ. ತೆರೆದರೂ ಉದ್ಯೋಗಿಗಳ ಗೈರು ಹಾಜರಿ. ಮನೆಯಿಂದ ಕೆಲಸ ಎಂಬ ನಿಯಮ ಹೆಚ್ಚಿನ ಕ್ಷೇತ್ರಗಳಲ್ಲಿ ನಡೆಯುವಂತಿಲ್ಲ. ಕೆಲಸಕ್ಕೆ ಬಾರದಿದ್ದರೂ ಸಂಬಳ ಪಾವತಿಸಿ, ಮುಂಗಡ ನೀಡಿ ಎನ್ನುವ ಸರಕಾರದ ನೀತಿ. ಆರ್ಥಿಕ ಸಬಲತೆ ಇಲ್ಲದವರು ಏನು ಮಾಡವುದು? ಎತ್ತ ಹೋಗುವುದು? ಈಗಾಗಲೇ ಹಳಿ ತಪ್ಪಿ ನಿಂತು ಎಂದೂ ದುರಸ್ತಿಯಾಗದ ವ್ಯವಹಾರವನ್ನು ಹೇಗೆ ಸರಿಪಡಿಸುವುದು? ಸಾಲಗಳ ಮೇಲಿನ ಬಡ್ಡಿ, ಚಕ್ರಬಡ್ಡಿಗಳು ಉರುಳದೆ ನಿಲ್ಲುತ್ತದೆಯೇ? ಕಟ್ಟಬೇಕಾದ ತೆರಿಗೆಗಳನ್ನು ಮನ್ನಾ ಮಾಡಲಾಗುತ್ತದೆಯೇ? ಹೋಟೆಲಿಗರಿಗೆ ಇಪ್ಪತ್ತೊಂದು ಬಗೆಯ ಲೈಸೆನ್ಸ್‌ ಶುಲ್ಕ ಕಟ್ಚಬೇಡವೇ? ಸಿಬ್ಬಂದಿಗಳು ಹೆಚ್ಚಿನವರು ಈಗಾಗಲೇ ಊರಿಗೆ ಹೋಗಿದ್ದಾರೆ ಅಥವಾ ಹೊರಟಿದ್ದಾರೆ. ಕಾರ್ಖಾನೆ, ಕಾರ್ಯಾಲಯ ಆರಂಭವಾದರೂ ಕೆಲಸದವರನ್ನು ಎಲ್ಲಿಂದ ತರಲಿ? ಏನೇನೋ ಎಂದೆಂದೂ ಮೇಲೆರದ ಚಿಂತೆಗಳ ಸುಳಿಯಲ್ಲಿದ್ದಾರೆ ಉದ್ಯೋಗಪತಿಗಳು.

ಉದ್ಯೋಗಿಗಳು
ಮಾರ್ಚ್ ಅಂತ್ಯದ ವರೆಗೆ ಕೆಲಸಕ್ಕೆ ಹೋಗದಿದ್ದರೂ ಪೂರ್ಣ ಸಂಬಳ ಬರುತ್ತದೆ ಎಂದು ಉಲ್ಲಾಸಿತರಾಗಿದ್ದರು. ಈಗ ನಿಜದ ಅರಿವಾಗತೊಡಗಿದಂತೆ ಸರಕಾರೇತರ ಉದ್ಯೋಗಿಗಳು ಚಿಂತೆಗೆ ಒಳಪಟ್ಚಿದ್ದಾರೆ. ಸಿಕ್ಕಿರುವುದು ರಜೆಯಲ್ಲ ಸಜೆ ಎಂಬುದೂ ಅವರಿಗೂ ಅನಿಸತೊಡಗಿದೆ. ಹೀಗೆ ಮುಂದುವರಿದರೆ ಕಂತಿನಲ್ಲಿ ಪಡೆದಿರುವ ಮನೆ, ಗಾಡಿ, ಐಷಾರಾಮಿ ವಸ್ತುಗಳ ಮಾಸಿಕ ಕಂತು ಹೇಗೆ ಕಟ್ಟುವುದು ಎಂಬ ಕಳವಳಕ್ಕೆ ಈಡಾಗಿದ್ದಾರೆ. ಮನೆ ಮಕ್ಕಳ ನಿಭಾವಣೆಯ ಚಿಂತೆಯೂ ಕಾಡತೊಡಗಿದೆ.

ಬಡತನ ರೇಖೆಗಿಂತ ಕೆಳಗಿನವರು
ಸಮುದ್ರಗುಪ್ತನ ಸುವರ್ಣಯುಗ ಬಂದರೂ ಅದು ನಮಗಲ್ಲ ಎನ್ನುವವರಿಗೆ ವ್ಯತಿರಿಕ್ತವಾದ ರೀತಿಯಲ್ಲಿ ಲಾಕ್ ಡೌನ್ ಸಂತಸವನ್ನು ತಂದುಕೊಟ್ಟಿದೆ. ಹೇಗೂ ಕೆಲವು ವರ್ಷಗಳಿಂದ ಸರಕಾರದಿಂದ ಪಡೆದ ಪಡಿತರವನ್ನು ಮಧ್ಯಮ ವರ್ಗದವರಿಗೆ ಮಾರಿ ನಗದು ಪಡೆದು ಖರ್ಚುಮಾಡುತ್ತಿದ್ದರು. ಲಾಕ್ ಡೌನ್ ನಲ್ಲಿ ಸರಕಾರ, ರಾಜಕೀಯ ಪಕ್ಷಗಳು, ರಾಜಕೀಯ ಪುಢಾರಿಗಳು, ಸಾಮಾಜಿಕ ಕಾರ್ಯಕರ್ತರು, ಸರಕಾರೇತರ ಸಂಸ್ಥೆಗಳು, ದಾನಿಗಳು ತಾ ಮುಂದು ನಾ ಮುಂದು ಎಂದು ಪಡಿತರ, ನಗದುಗಳನ್ನು ಹಂಚಿವೆ. ಹಂಚುತ್ತಿವೆ. ಲಾಕ್ ಡೌವುನ್ ಮುಂದುವರಿಯಲಿ, ಮದಿರೆ ಮಾರಾಟವಾಗಲಿ ಎನ್ನುವ ಉಲ್ಲಾಸೀತ ಭಾವನೆ. ಸಂತೃಪ್ತಿ ಎನ್ನಲಾಗದಿದ್ದರೂ. ದುಃಖಿತರಂತೂ ಅಲ್ಲ. ಈಗಾಗಲೇ ಒಟ್ಟು ಮಾಡಿರುವ ಪಡಿತರವನ್ನು ಮಾರದೆ ಇಟ್ಟಲ್ಲಿ 6-7 ತಿಂಗಳು ಬರಬಹುದು. ಇನ್ನೂ ಸಿಗುವ ಭರವಸೆಯಂತೂ ಇದೆ. ಆದ್ದರಿಂದ ಲಾಕ್ ಡೌವುನ್ ಮುಂದುವರಿಯಲಿ ಎಂಬ ಭಾವನೆಗಳೂ ಇರಬಹುದು.

ಗೃಹಿಣಿಯರು
ಶ್ರೀಮಂತರಿಂದ ಹಿಡಿದು ಎಲ್ಲ ವರ್ಗಗಳ ಗೃಹಿಣಿಯರ ಮನಸ್ಥಿತಿಗಳು ಹೆಚ್ಚು ಕಡಿಮೆ ಒಂದೇ ಆಗಿರಬಹುದು. ಒಂದೆರಡು ವಾರ ಮನೆಯವರು, ಮಕ್ಕಳೂ ಮನೆಯಲ್ಲಿಯೇ ಇರುತ್ತಾರೆ ಎಂಬ ಕೌಟುಂಬಿಕ ಏಕತ್ರತೆಯ ಭಾವನೆ ಬಂದಿರಬಹುದು. ಎಚ್ಚರಿಸುವ ಗಂಟೆಗಳಿಗನುಗುಣವಾಗಿ ಏಳಬೇಕೆಂದಿಲ್ಲ. ಕಾಲು ಚಾಚಿ ಮಲಗಿ, ನಿಧಾನವಾಗಿ ಏಳುವ ಎಣಿಕೆ ಬಂದಿರಬಹುದು. ಯಾವಾಗ ಮನೆಗೆಲಸದವರೂ ಬರುವುದಿಲ್ಲ ಎಂಬುದು ತಿಳಿಯುತ್ತೋ.. ಆಗ ಕಂಡದ್ದು ಕನಸು ಎಂದರ್ಥವಾಯಿತು. ಮನೆಯವರು, ಮಕ್ಕಳು ಬಗೆ ಬಗೆಯ ಊಟ ತಿಂಡಿಗಳಿಗೆ ಬೇಡಿಕೆ ಇಡತೊಡಗಿದಾಗ… ತಮ್ಮ ಧಾರಾವಾಹಿಗಳು ತಪ್ಪತೊಡಗಿದಾಗ.. ದಿನವೂ ಗಂಡನ ಜೇಬಿನಿಂದ ಸವರುತ್ತಿದ್ದ ಕಾಂಚಾಣ ನಿಂತಾಗ… ತಿನ್ನುತ್ತ ಬಿದ್ದಿರುವ… ಬಿದ್ದಲ್ಲೇ ತಿನ್ನುವವರನ್ನು ಕಂಡಾಗ… ಪಡಿತರ, ತರಕಾರಿ ಮುಗಿದಾಗ… ಅಡುಗೆ ಕೋಣೆಯ ತಾಪದೊಂದಿಗೆ ಸೆಖೆಯ ಪರಿತಾಪವೂ ಸೇರಿರುವಾಗ.. ಯಾವಾಗ ಇದಕ್ಕೆಲ್ಲ ಅಂತ್ಯ ಎಂದೆಣಿಸುತ್ತಿರಬಹುದು.

ಮೈ.. ಮನಗಳಿಗೆ ಸರಿಯಾದ ವ್ಯಾಯಾಮ ಸಿಗದೆ ಎಲ್ಲರನ್ನೂ ಒಂದು ರೀತಿಯ ಆಲಸ್ಯತನ ಕಾಡುತ್ತಿದೆ. ದೀರ್ಘಕಾಲ ಜ್ವರ ಬಂದು… ಈಗಷ್ಟೇ ಬಿಟ್ಟಿದೆ ಎಂಬಂಥ ಮನಸ್ಥಿತಿ ಎಲ್ಲರದ್ದಾಗಿದೆ.


Get in Touch With Us info@kalpa.news Whatsapp: 9481252093

Tags: CoronavirusCovid19IndiaIndiaLockDownKannadaNewsWebsiteLatestNewsKannadaSpecial Articleಕೊರೋನಾ ವೈರಸ್ಲಾಕ್ ಡೌನ್
Previous Post

ಸಂಜೀವಿನಿ ಹಿರಿಯ ನಾಗರೀಕರ ಆಶ್ರಮಕ್ಕೆ ಡಾ. ಸಿ.ರಾಮಾಚಾರಿ ಅವರಿಂದ ಆಹಾರ ಸಾಮಾಗ್ರಿ ವಿತರಣೆ

Next Post

ಡಿ.ಕೆ. ಶಿವಕುಮಾರ್ ಅಭಿಮಾನಿಗಳಿಂದ ಆಹಾರ ಕಿಟ್ ವಿತರಣೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಡಿ.ಕೆ. ಶಿವಕುಮಾರ್ ಅಭಿಮಾನಿಗಳಿಂದ ಆಹಾರ ಕಿಟ್ ವಿತರಣೆ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಸ್ವಾತಂತ್ರ್ಯ ದಿನಾಚರಣೆಗೆ ಯಶವಂತಪುರ-ತಾಳಗುಪ್ಪ ನಡುವೆ ವಿಶೇಷ ರೈಲು | ಇಲ್ಲಿದೆ ವೇಳಾಪಟ್ಟಿ

July 28, 2025

ಹಿಂದುಳಿದ ವರ್ಗಗಳ ಹಿತ ಮರೆತ ಸಿದ್ಧರಾಮಯ್ಯ: ಈಶ್ವರಪ್ಪ ಟೀಕೆ

July 28, 2025

ರೈತರಿಗೆ ಗೊಬ್ಬರ ಪೂರೈಸಲು ಸರ್ಕಾರ ವಿಫಲ: ಡಿ.ಎಸ್. ಅರುಣ್ ಆಕ್ರೋಶ

July 28, 2025

ಹೊಳಲೂರು | ಅರಣ್ಯ ಇಲಾಖೆ ಬೋನಿಗೆ ಬಿದ್ದ ಕರಡಿ

July 28, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಸ್ವಾತಂತ್ರ್ಯ ದಿನಾಚರಣೆಗೆ ಯಶವಂತಪುರ-ತಾಳಗುಪ್ಪ ನಡುವೆ ವಿಶೇಷ ರೈಲು | ಇಲ್ಲಿದೆ ವೇಳಾಪಟ್ಟಿ

July 28, 2025

ಹಿಂದುಳಿದ ವರ್ಗಗಳ ಹಿತ ಮರೆತ ಸಿದ್ಧರಾಮಯ್ಯ: ಈಶ್ವರಪ್ಪ ಟೀಕೆ

July 28, 2025

ರೈತರಿಗೆ ಗೊಬ್ಬರ ಪೂರೈಸಲು ಸರ್ಕಾರ ವಿಫಲ: ಡಿ.ಎಸ್. ಅರುಣ್ ಆಕ್ರೋಶ

July 28, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!