ನವದೆಹಲಿ: ಗಡಿಯಲ್ಲಿ ಪದೇ ಪದೇ ತಕರಾರು ತೆಗೆಯುತ್ತಾ ಭಾರತೀಯ ಸೇನೆಗೆ ತಲೆನೋವಾಗಿ ಪರಿಣಮಿಸಿರುವ ಪಾಕ್ ನುಸುಳುಕೋರರನ್ನು ಮಟ್ಟ ಹಾಕಲು ಮಹತ್ವದ ಕ್ರಮ ಕೈಗೊಂಡಿರುವ ಭಾರತೀಯ ಸೇನೆ, ಎಲ್’ಒಸಿಯಲ್ಲಿ ಅತ್ಯಾಧುನಿಕವಾಗಿ ಸ್ನೈಪರ್ ರೈಫಲ್’ಗಳ ಬಳಕೆ ಆರಂಭಿಸಿದೆ.
ಈ ಕುರಿತಂತೆ ಉದಾಂಪುರದಲ್ಲಿರುವ ಉನ್ನತ ಸೇನಾಧಿಕಾರಿಯೊಬ್ಬರು ಮಾಧ್ಯಮಗಳೊಂದಿಗೆ ಮಾತನಾಡಿ, ಮಾಹಿತಿ ನೀಡಿದ್ದಾರೆ.
ಕಳೆದ ಜನವರಿ ತಿಂಗಳಲ್ಲಿ ನಾರ್ದರ್ನ್ ಕಮಾಂಡ್‌ನ ಜನರಲ್ ಆಫೀಸರ್ ಕಮಾಂಡರ್ ಇನ್ ಚೀಫ್ ಅವರ ವಿಶೇಷ ಹಣಕಾಸು ಅಧಿಕಾರದಡಿ ಜಾಗತಿಕ ಪೂರೈಕೆದಾರರಿಂದ 5,719 ಸ್ನೈಪರ್ ರೈಫಲ್‌ಗಳನ್ನು ಪಡೆಯುವುದಕ್ಕೆ ಸೇನೆಯು ಟೆಂಡರ್ ಕರೆದಿತ್ತು. ಇದರಂತೆ ಭಾರತೀಯ ಸೇನೆ ಇದೀಗ ಪಾಕಿಸ್ಥಾನದ ಜತೆಗಿನ ಎಲ್‌ಓಸಿಯಲ್ಲಿ ಹೊಸ ಸ್ನೈಪರ್ ರೈಫಲ್‌ಗಳನ್ನು ಉಪಯೋಗಿಸಲು ಆರಂಭಿಸಿಸಿದ್ದು ಇದರಿಂದ ಪಾಕ್ ನುಸುಳುಕೋರ ಉಗ್ರರನ್ನು ಸದೆ ಬಡಿಯುವ ಕೆಲಸ ಸುಲಭವಾಗಲಿದೆ ಎಂದಿದ್ದಾರೆ.







Discussion about this post