No Result
View All Result
Indian Railway PM Modi to Inaugurate 4 Modern Railway Stations in Karnataka
English Articles

Indian Railway | PM Modi To Launch 4 Stations In Karnataka

by kalpa News
July 16, 2026
0

Kalpa Media House  |  Bengaluru  | Indian Railways continues its transformative journey with a strong focus on modernization and global...

Read moreDetails
SWR to run special trains for Good Friday, Easter rush

Indian Railway | Danapur and Bengaluru Special Trains Extension

July 16, 2026
Shivamogga's Sri Raghavendra Swamy Mutt Becomes First In South India To Receive Three ISO Certifications

Shivamogga | Raghavendra Swamy Mutt Becomes First In South India To Receives 3 ISO Certification

July 16, 2026
Mysore - Shivamogga - Talguppa Train Indian Railway

Indian Railway | Visakhapatnam– Bengaluru–Visakhapatnam Special Train Extension

July 16, 2026
Amrit Bharat Station Scheme

Hubballi Division Hosts Student Competitions to Promote Amrit Bharat Station Scheme

July 16, 2026
  • Advertise With Us
  • Grievances
  • About Us
  • Contact Us
Sunday, July 19, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಅಂಕಣ ಡಾ.ಗುರುರಾಜ ಪೋಶೆಟ್ಟಿಹಳ್ಳಿ

ಭಾರತದ ಪುರಾಣ, ಇತಿಹಾಸಗಳಲ್ಲಿ ಎಲ್ಲೆಲ್ಲಿ ಯೋಗದ ಉಲ್ಲೇಖವಿದೆ ಗೊತ್ತಾ?

kalpa News by kalpa News
June 21, 2020
in ಡಾ.ಗುರುರಾಜ ಪೋಶೆಟ್ಟಿಹಳ್ಳಿ
0
ವಿಶ್ವಕ್ಕೆ ಭಾರತ ನೀಡಿದ ಅದ್ಬುತ ಕಾಣಿಕೆ ಯೋಗಾಭ್ಯಾಸ
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಯೋಗ ವಿದ್ಯೆಯು ವಿಶ್ವಕ್ಕೆ ಭರತವರ್ಷವು ನೀಡಿರುವ ಒಂದು ಮಹಾ ಕೊಡುಗೆ. ಅದು ಅತಿ ಪ್ರಾಚೀನವಾಗಿರುವಂತೆಯೇ ಸಮೀಚೀನವೂ ಕೂಡ ಆಗಿದೆ. ವೇದೋಪನಿಷತ್ತುಗಳಲ್ಲಿ, ಶೃತಿಶಾಸ್ತ್ರ ಪುರಾಣಗಳಲ್ಲಿ, ಭಗವದ್ಗೀತೆ ಮತ್ತು ಇತಿಹಾಸಗಳಲ್ಲಿ ಕೂಡ ಯೋಗಕ್ಕೆ ಸಂಬಂಧಪಟ್ಟ ಉಲ್ಲೇಖಗಳಿರುವುದನ್ನು ನೋಡಿದರೆ ಇದಕ್ಕೆ ಸುಮಾರು ನಾಲ್ಕೈದು ಸಾವಿರ ವರ್ಷಗಳ ಹಿನ್ನೆಲೆ ಇರುವಂತೆ ಕಾಣುತ್ತದೆ. ಆದರೂ ಈ ಒಂದು ವಿದ್ಯೆಯು ಯಾವುದೇ ಒಂದು ವ್ಯಕ್ತಿಗೆ, ಸಮಾಜಕ್ಕೆ, ಪಗಂಡಕ್ಕೆ, ಜಾತಿಗೆ, ಧರ್ಮಕ್ಕೆ ಅಥವಾ ರಾಷ್ಟ್ರಕ್ಕೆ ಸೀಮಿತವಾದುದಿಲ್ಲ. ಇದು ಇಡಿಯ ವಿಶ್ವಕ್ಕೆ ಪ್ರಾಚೀನ ಋಷಿಮುನಿಗಳು ನೀಡಿರುವ ಒಂದು ವರಪ್ರಸಾದ. ಹಾಗಾದರೆ ಈ ಮಹಾವಿದ್ಯೆಯು ಎಲ್ಲಿಂದ ಪ್ರಾರಂಭವಾಯ್ತು? ಅದರ ಕರ್ತೃಗಳಾರು? ಅದು ಹೇಗೆ ಬೆಳೆದು ಬಂತು? ಅದರಲ್ಲಿರುವ ಅಂತಹ ಅಂತಃಶಕ್ತಿ ಏನು? ಇವೇ ಮೊದಲಾದ ಪ್ರಶ್ನೆಗಳು ಸಾಮಾನ್ಯವಾಗಿ ನಮ್ಮ ಮುಂದೆ ಬರುತ್ತವೆ.

ಪ್ರಾಚೀನ ಮಹರ್ಷಿಗಳು- ಯೋಗೀಶ್ವರಂ ಶಿವಂ ವಂದೇ-ವಂದೇ ಯೋಗೇಶ್ವರಂ ಹರಿಮ್‌ ಎಂದರು- ಎಂದರೆ ಶ್ರೀಮನ್ನಾರಯಣನನ್ನು ಮತ್ತು ಶ್ರೀ ರುದ್ರನನ್ನು (ಶಂಕರನನ್ನು) ಯೋಗಿಗಳೆಲ್ಲರ ಯೋಗೇಶ್ವರರು ಎಂಬುದಾಗಿಯೂ ಅಲ್ಲದೇ ಇವರೇ ಮೊತ್ತ ಮೊದಲನೆಯ ಯೋಗಾಚಾರ್ಯರೆಂಬುದಾಗಿಯೂ ಮಹರ್ಷಿಗಳೆಲ್ಲರ ಅಭಿಪ್ರಾಯ. ಮೂಲತಃ ಶಂಕರ-ನಾರಾಯಣರಲ್ಲಿ ಯಾವ ಭೇದವಿಲ್ಲದಿದ್ದರೂ ಅನೂಚಾನವಾಗಿ ಇವರೀರ್ವರ ಹೆಸರಿನಲ್ಲೂ ಒಂದೊಂದು ಯೋಗ ಸಂಪ್ರದಾಯವು ನಡೆದುಕೊಂಡು ಬಂದಿರುವುದು ರೂಢಿಯಲ್ಲಿದೆ. ಹೀಗಾಗಿ ಕೆಲ ಕೆಲವು ಉಪನಿಷತ್ತುಗಳಲ್ಲಿ ಶ್ರೀಮನ್ನಾರಾಯಣನೇ ಯೋಗದ ಮೂಲ ಆಚಾರ್ಯನೆಂದು ಪ್ರತಿಪಾದಿಸಿದರೆ ಇನ್ನು ಕೆಲವು ಉಪನಿಷತ್ತುಗಳಲ್ಲಿ ರುದ್ರನನ್ನೇ ಯೋಗದ ಮೂಲ ಆಚಾರ್ಯನೆಂಬುದಾಗಿ ನಿರೂಪಿಸಲಾಗಿದೆ. ಆದರೂ ಉಪನಿಷತ್ತುಗಳಲ್ಲಿ ವಿಷ್ಣು (ನಾರಾಯಣ) ಮತ್ತು ಶಂಕರರಿಂದಲೇ ಹಿರಣ್ಯಗರ್ಭನೆಂನ್ನಿಸಿಕೊಂಡಿರುವ ಬ್ರಹ್ಮನಿಗೆ ಯೋಗಪದೇಶವಾಯಿತೆಂದೂ ಮತ್ತು ಆತನು ಅನೇಕ ಋಷಿಮಹರ್ಷಿಗಳಾದ ಯೋಗಾಚಾರ್ಯರುಗಳಿಂದ ಆ ಯೋಗವಿದ್ಯೆಯನ್ನು ಪ್ರಚುರಪಡಿಸಿದನೆಂದೂ ತಿಳಿಯುತ್ತದೆ.

ವೇದೋಪನಿಷತ್ತುಗಳ ಕಾಲದಲ್ಲಾಗಲೀ ಅಥವಾ ಪುರಾಣೇತಿಹಾಸಕಾಲದಲ್ಲಾಗಲೀ ಗುರುಶಿಷ್ಯರಲ್ಲಿ ಒಂದು ಆತ್ಮೀಯತೆಯ ಸಂಬಂಧವಿತ್ತು. ಅಲ್ಲಿ ಕೊಟ್ಟು ತೆಗೆದುಕೊಳ್ಳುವ ವ್ಯಾಪಾರೀಮನೋಭಾವವಿರಲಿಲ್ಲ. ಲೋಕಕಲ್ಯಾಣಾಕಾಂಕ್ಷೆಯಿಂದಲೇ ಗುರುಗಳು ಶಿಷ್ಯರಿಗೆ ವಿದ್ಯಾದಾನವನ್ನು ಮಾಡುತ್ತಿದ್ದರು; ಶಿಷ್ಯರಾದರೂ ಅದೇ ಭಾವನೆಯಿಂದಲೇ ಕಲಿತು ಸಾಧನೆ ಮಾಡುತ್ತಿದ್ದರು. ಆಗ ಯಾಕೆ-ಇತ್ತೀಚೆಗೆ ಕೆಲವು ದಶಕಗಳ ಹಿಂದಿನವರೆಗೂ ಯೋಗವು ಸಾಗಿಬಂದ ರೀತಿಯನ್ನು ನೋಡಿದರೆ ಈ ಗುರುಶಿಷ್ಯ ಬಾಂಧವ್ಯದಲ್ಲಿ ಒಂದು ಆದರ್ಶವಾದ ಪ್ರೇಮ ಸಂಬಂಧವಿತ್ತು. ಅಲ್ಲೆಲ್ಲೂ ಕೊಟ್ಟುಕೊಳ್ಳುವ ವ್ಯಾಪಾರೀ ಧರ್ಮವು ಇಣಿಕಿಹಾಕಿದಂತೆ ಕಾಣುವುದಿಲ್ಲ. ಆದುದರಿಂದಲೇ ನಶಿಸಿಯೇ ಹೋಗಬೆಕಾಗಿದ್ದ ಯೋಗವಿದ್ಯೆಯು ಮಾನ್ಯತೆಯನ್ನು ಹೊಂದಿದರೂ ಅದು ಬೇಸಿಗೆಯ ಕ್ಷೀಣನದಿಯಂತೆ ಹರಿಯುತ್ತಲೇ ಬಂದಿದೆ. ಈ ಮಧ್ಯಕಾಲದಲ್ಲೇ ಅದು ಸಮುದ್ರೋಲ್ಲಂಘನ ಮಾಡಿ ತನ್ನ ಉಜ್ವಲ ಕೀರ್ತಿಯನ್ನು ವಿದೇಶಗಳಲ್ಲೂ ಹರಡಿತ್ತು ಎಂಬುದು ಇಲ್ಲಿ ನೆನೆಪಿಸಿಕೊಳ್ಳತಕ್ಕ ವಿಚಾರ. ಶ್ರೀ ವಿವೇಕಾನಂದರು, ಶ್ರೀ ರಾಮತೀರ್ಥರೇ ಮೊದಲಾದ ಸನ್ಯಾಸಿಗಳು ವಿದೇಶಗಳಲ್ಲಿ ಭಾರತೀಯ ಸಂಸ್ಕೃತಿಯನ್ನೂ, ಯೋಗವಿದ್ಯೆಯನ್ನೂ ಪ್ರಚಾರಪಡಿಸುವುದರಲ್ಲಿ ಅತಿ ಮುಖ್ಯವಾದ ಪಾತ್ರವನ್ನು ವಹಿಸಿದ್ದಾರೆ. ಇದೇ ಕಾಲದಲ್ಲಿ ತಮ್ಮ ತಮ್ಮ ಕ್ಷೇತ್ರದಲ್ಲಿ ಶ್ರಮಿಸಿದ್ದಾರೆ. ಇದಕ್ಕೆ ವ್ಯಾಪಕವಾದ ಪುನಶ್ಚೇತನವನ್ನಿತ್ತು ಯೋಗವಿದ್ಯೆಯ ಕೀರ್ತಿಪತಾಕೆಯನ್ನು ವಿಶ್ವದಾದ್ಯಂತ ಹಾರಿಸಿದವರೆಂದರೆ ಶ್ರೀ ರಮಣಮಹರ್ಷಿಗಳು ಮತ್ತು ಶ್ರೀ ಅರವಿಂದರು. ಇವರು ಕ್ಷೀಣಿಸುತ್ತಿದ್ದ ಯೋಗ ವಿದ್ಯೆಯ ದೀಪಜ್ಯೋತಿಗೆ ತೈಲವನ್ನೆರೆದು ಅದು ಪ್ರಜ್ವಲಿಸಿ ಉರಿಯುವಂತೆ ಮಾಡಿದರು. ಹೀಗಾಗಿ ವಿದೇಶದ ಆಸ್ತಿಕರನೇಕರು ಭಾರತದ ಕಡೆಗೆ ಆಶಾಭಾವನೆಯಿಂದ ನೋಡುವಂತಾಯ್ತು. ಅವರಲ್ಲನೇಕರಿಗೆ ಯೋಗವಿದ್ಯೆಯ ಸಂಬಂಧದಲ್ಲಿ ಅದರ ಸಾಧನೆಯ ವಿಚಾರದಲ್ಲಿ ವಿಶೇಷ ಆಸಕ್ತಿಯುಂಟಾಯಿತು. ಬಾಹ್ಯ ಸುಖಸಂಪತ್ತಿನಲ್ಲಿ ಭೋಗೈಶ್ವರ‌್ಯಗಳಲ್ಲಿ ಶಾಶ್ವತ ಸುಖಕಾಣದ ಅವರು ಭಾರತೀಯ ಸಂಸ್ಕೃತಿಯಲ್ಲಿ, ಯೋಗವಿದ್ಯೆಯಲ್ಲಿ ಆನಂದವನ್ನು ಕಂಡು ಇದಕ್ಕೆ ಮಾರುಹೋದರು. ಈ ಕಾಲದಲ್ಲೇ ರಾಮಕೃಷ್ಣಮಿಶನ್‌ನವರೂ ಇನ್ನೂ ಕೆಲವು ಆಧ್ಯಾತ್ಮಿಕ ಮಹದ್ವ್ಯಕ್ತಿಗಳೂ ಅಲ್ಲಿ ಅಪಾರ ಕೆಲಸವನ್ನು ಮಾಡಿದ್ದುಂಟು.

ಆದರೆ ಇಡೀ ಕಾಳಿನ ಜೊತೆಯಲ್ಲಿ ಜೊಳ್ಳೂ ತೂರಿ ಬಂದಂತೆ ಈ ಕಾಲದಲ್ಲೇ ಅನೇಕ ವ್ಯಾಪಾರೀ ಮನೋಭಾವದ ಯೋಗಶಿಕ್ಷಕರು ಕೇವಲ ಹಣಗಳಿಸುವ ದೃಷ್ಟಿಯಿಂದ ವಿದೇಶ ಸಂಚಾರ ಕೈಗೊಂಡು ಯೋಗಶಿಕ್ಷಣದ ನೆಪದಲ್ಲಿ ಧನಸಂಪಾದನೆಗೆ ನಿಂತಿರುವುದು ತೀರ ಶೋಚನೀಯವಾದ ವಿಚಾರ. ಅಂತೂ ಯಾವುದೋ ರೀತಿಯಲ್ಲಿ ಇಂದು ಯೋಗವಿದ್ಯೆಯ ಮಾತೃಸ್ಥಾನವಾದ ಭಾರತದಲ್ಲಿದು ನಶಿಸುತ್ತಿದ್ದರೂ ವಿದೇಶಗಳಲ್ಲದು ವ್ಯಾಪಕವಾಗಿ ಬೆಳೆಯುತ್ತಿದೆ ಎಂಬುದಂತೂ ತೀರಸತ್ಯ. ಇಂಥಲ್ಲಿ ನಮ್ಮಿಂದಲೇ ಕಲಿತ ಯೋಗವಿದ್ಯೆಗೆ ವಿಜ್ಞಾನದ ಲೇಪನವನ್ನಿತ್ತು ತಿರುಗಿ ನಮಗೇ ಮರಳಿಸುವ ಪ್ರಯತ್ನ ನಡೆದಿದೆ… ಅದರಲ್ಲಿಯೇ ಆಗಲೀ ಎಲ್ಲಿಯೇ ಆಗಲಿ ಈ ಹಿಂದಿನ ಗುರುಶಿಷ್ಯ ಬಾಂಧವ್ಯವಳಿದು ಅಲ್ಲಿ ಕೊಟ್ಟುಕೊಳ್ಳುವ ಮಾರುಕಟ್ಟೆಯ ಧರ್ಮವು ಕಾಣಿಸಿಕೊಂಡಿರುವುದು ತೀರ ಶೋಚನೀಯವೆಂದು ಹೇಳದೆ ವಿಧಿಯಿಲ್ಲ. ಅದೊಂದು ಮುಖ-ಇದೊಂದು ಮುಖ. ಇದು ಪ್ರಾಚೀನಕಾಲದಿಂದ ಯೋಗವು ನಡೆದುಬಂದ ದಾರಿ. ಇದೇ ಯೋಗದ ವಿರಾಟ್ ಸ್ವರೂಪ.

ವಾಸ್ತವಿಕವಾಗಿ ಯೋಗ ಮಾರ್ಗದಿಂದ ಐಹಿಕಾಭ್ಯುದಯ ಮತ್ತು ಆಮುಷ್ಮಿಕಶ್ರೇಯಸ್ಸು ಇವೆರಡನ್ನು ಧಾರಾಳವಾಗಿ ಸಾಧಿಸಬಹುದಾಗಿದೆ. ಅಭ್ಯಾಸ ಪ್ರಧಾನವಾದ ಯೋಗ ಮಾರ್ಗದಿಂದ ಅದ್ಭುತ ಮಹಿಮೆಯನ್ನೂ ಮೋಕ್ಷಸಾಮ್ರಾಜ್ಯವನ್ನೂ ಸಾಧಿಸಿದ ಅನೇಕ ಮಹಾನುಭಾವರುಗಳು ಇದ್ದಾರೆ. ಯೋಗಪ್ರಸ್ಥಾನ ಪ್ರಾಚೀನವಾದುದೆಂಬ ಪ್ರತೀತಿಯೂ ಪುರಾಣಗಳಲ್ಲಿ ಪ್ರಸಿದ್ಧವಾಗಿದೆ. ರಾಮಾಯಣದಲ್ಲಿ ಲಕ್ಷ್ಮಣನೂ ಯೋಗಮಾರ್ಗದಿಂದಲೇ ಸ್ವಸ್ಥಾನವಾದ ವೈಕುಂಠವನ್ನು ಸೇರಿದನೆಂಬ ಐತಿಹ್ಯವಿದೆ. ಭಾರತ ಭಾಗವತಗಳಲ್ಲಿ ಬಲರಾಮ, ಶ್ರೀಕೃಷ್ಣ, ವಿದುರ ಮೊದಲಾದವರು ಯೋಗಾರೂಢರಾಗಿಯೇ ಪರಂಧಾಮವನ್ನೈದಿದರೆಂದಿದೆ. ‘‘ಯೋಗೇನಾಂ ತೇತನುತ್ಯಜಾಮ್’’ ಯೋಗಶಾಸ್ತ್ರವೆಂಬುದು ಒಂದು ದೇಶಕ್ಕಾಗಲೀ ಒಂದು ಜನಾಂಗಕ್ಕಾಗಲೀ ಅಥವಾ ಒಂದು ಧರ್ಮಕ್ಕಾಗಲಿ ಸಂಬಂಧಪಟ್ಟ ವಿಷಯವಲ್ಲ. ಇದು ಇಡೀ ಜಗತ್ತಿನ ಜನಕ್ಕೆ ಸಂಬಂಧಪಟ್ಟ ವಿಷಯವಾಗಿದ್ದು ಭರತಖಂಡದ ಪ್ರಮುಖ ವಿಜ್ಞಾನಗಳಲ್ಲೊಂದಾಗಿದೆ. ಭಾರತದ ವೈದ್ಯ ವಿಜ್ಞಾನವಾದ ಆಯುರ್ವೆದಶಾಸ್ತ್ರವೂ ಯೋಗಶಾಸ್ತ್ರವೂ ಮೊತ್ತಮೊದಲಿಗೆ ಈ ದೇಶದಲ್ಲೇ ಉತ್ಪತ್ತಿಯಾದುವು ಎಂತಲೂ ಈ ಶಾಸ್ತ್ರಗಳ ಪೂರ್ವ ಇತಿಹಾಸವೂ ಇನ್ನಾವ ದೇಶಗಳಲ್ಲಿ ದೊರೆಯಲಾರವು ಎಂಬುದ ತಿಳಿದು ಬಂದಿದೆ. ಆದರೆ ಸಹಸ್ರಾರು ವರುಷಗಳ ಹಿಂದೆಯೇ ಅನೇಕ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಯೋಗಾಭ್ಯಾಸವು ಪ್ರಚಾರದಲ್ಲಿದ್ದ ಉದಾಹರಣೆಗಳು ದೊರಕಿವೆ. ಪ್ರಾಯಶಃ ಕೆಲವು ಸಾವಿರ ವರ್ಷಗಳ ಹಿಂದೆಯೇ ಈ ವಿಜ್ಞಾನವು ಬೇರೆ ಬೇರೆ ರಾಷ್ಟ್ರಗಳಿಗೆ ಹರಡಿರಬಹುದು.

ಪೂರ್ವಕಾಲದಲ್ಲಿ ಸಾಮಾನ್ಯವಾಗಿ ಸನ್ಯಾಸವನ್ನು ಸ್ವೀಕರಿಸಿದ ವ್ಯಕ್ತಿಗಳೆ ಯೋಗಾಭ್ಯಾಸ ಮಾಡಿಕೊಂಡಿದ್ದು ಪ್ರಾಪಂಚಿಕ ವ್ಯವಹಾರಗಳಿಂದ ದೂರವಾಗೆ ಉಳಿಯುತ್ತಿದ್ದರು. ಇದನ್ನೆಲ್ಲಾ ನೋಡಿದ ಜನಸಾಮಾನ್ಯರು ಯೋಗಾಭ್ಯಾಸ ಮಾಡುವುದರಲ್ಲಾಗಲೀ ಈ ಬಗ್ಗೆ ವಿಷಯಗಳನ್ನು ತಿಳಿದುಕೊಳ್ಳುವುದಲ್ಲಾಗಲೀ ಆಸಕ್ತಿ ತೋರಿಸುತ್ತಿರಲಿಲ್ಲ.

ಸುಮಾರು ಐವತ್ತು ವರ್ಷಗಳ ಹಿಂದೆ ಯೋಗಶಾಸ್ತ್ರದ ಬಗ್ಗೆ ಮಾತನಾಡುವ ಹಾಗೂ ಅಭ್ಯಾಸ ಮಾಡುವ ಜನ ಅತೀ ವಿರಳವಾಗಿದ್ದರು, ಯೋಗವೆಂಬ ಶಬ್ದ ಕೇಳುತ್ತಲೇ ಜನಸಾಮಾನ್ಯರು ಇದು ಸನ್ಯಾಸಕ್ಕೆ ಸಂಬಂಧಪಟ್ಟ ವಿಷಯವೆಂದು ತಿಳಿದು ದೂರ ಸರಿಯುತ್ತಿದ್ದರು. ಈ ಶಾಸ್ತ್ರವನ್ನು ತಿಳಿದು ಅಭ್ಯಾಸದಲ್ಲಿಟ್ಟುಕೊಂಡಿದ್ದ ಅನೇಕರು ಇತರರಿಗೆ ಈ ಶಾಸ್ತ್ರದ ಬಗ್ಗೆ ಮಾಹಿತಿ ಕೊಡದೆ ಇದೊಂದು ಗುಪ್ತ ವಿಜ್ಞಾನವೆಂದುಕೊಂಡು ಈ ಬಗ್ಗೆ ವಿಚಾರಿಸಿದ ಜನರ ಮನಸ್ಸಿನಲ್ಲಿ ಭಯವುಂಟಾಗುವ ರೀತಿಯಲ್ಲಿ ಬೋಧಿಸುತ್ತಿದ್ದರು. ಈ ಅನುಭವವನ್ನು ಪಡೆದವರಲ್ಲಿ ನಾನು ಒಬ್ಬ ಇದರಿಂದಾಗಿ ಸಾಮಾನ್ಯ ಜನರು ಈ ವಿಜ್ಞಾನದಿಂದ ದೂರವಾಗಿರುತ್ತಿದ್ದರು.

ಆಧುನಿಕ ಕಾಲದಲ್ಲಿ ಯೋಗವು ವಿಶ್ವದಲ್ಲೆಲ್ಲಾ ಪ್ರಚಾರವಾಗಿರುವುದನ್ನೂ, ದಿನೇ ದಿನೇ ಈ ವಿಜ್ಞಾನವು ಪ್ರಖ್ಯಾತಿಗೆ ಬರುತ್ತಿರುವುದನ್ನೂ ನೋಡುತ್ತಿದ್ದೇವೆ. ಸೂಕ್ಷ್ಮವಾಗಿ ನೋಡುತ್ತಾ ಹೋದರೆ ಯೋಗದ ಮಾತೃಭೂಮಿಯಾದ ಭಾರತದಲ್ಲಿ ಇರುವುದಕ್ಕಿಂತ ಹೆಚ್ಚು ಯೋಗ ಪ್ರಚಾರ ಅಭ್ಯಾಸಗಳನ್ನು ಇತರ ಅನೇಕ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ನೋಡಬಹುದು. ಅಲ್ಲದೆ ಅನೇಕ ಕಡೆಗಳಲ್ಲಿ ಬೃಹದ್ ಯೋಗ ಸಮ್ಮೇಳನಗಳಾಗುತ್ತಿರುವುದೂ ಕಂಡು ಬರುತ್ತಿದೆ.

ಆಫ್ರಿಕಾ, ಸುಜರ್‌ಲ್ಯಾಂಡ್, ಜರ್ಮನಿ, ಇಟಲಿ, ಫ್ರಾನ್ಸ್‌ ಮತ್ತು ಇಂಗ್ಲೆಂಡ್ ದೇಶಗಳಲ್ಲಿ ಅನೇಕ ಯೋಗ ಕೇಂದ್ರಗಳನ್ನೂ, ಕೆಲವು ಆಸ್ಪತ್ರೆಗಳಲ್ಲಿ ನಡೆಸಲ್ಪಡುತ್ತಿರುವ ಯೋಗ ಚಿಕಿತ್ಸೆಗಳನ್ನೂ, ನೂರಾರು ಯೋಗ ಅಧ್ಯಾಪಕರುಗಳನ್ನೂ ಮತ್ತು ಸಾವಿರಾರು ಯೋಗವಿದ್ಯಾರ್ಥಿಗಳನ್ನು ಕಂಡ ನನಗೆ ಆತ್ಯಾಶ್ಚರ್ಯವಾಗಿದೆ, ಇದೇ ರೀತಿಯಲ್ಲಿ ಮಂದೋತ್ತಿದ್ದ ಅನೇಕ ಪಾಶ್ಚಾತ್ಯ ದೇಶಗಳಲ್ಲೂ ಸಾಕಷ್ಟು ಯೋಗಕೇಂದ್ರಗಳಿವೆ ಎಂಬುದನ್ನು ತಿಳಿದಿದ್ದೇನೆ.

ಭಾರತದಲ್ಲಿ ಮಾನವನು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕ್ರಮಬದ್ಧವಾಗಿ ಹೊಂದಿರಬೇಕಾದ ಅಗತ್ಯಗಳ ಬಗ್ಗೆ ಅನೇಕ ಸಾವಿರ ವರ್ಷಗಳ ಹಿಂದೆಯೇ ಆರ್ಯುವೇದ ಮತ್ತು ಯೋಗಶಾಸ್ತ್ರಗಳು ಬೋಧಿಸಿದ ವಿಚಾರಗಳು ಇಂದಿಗೂ ಅನ್ವಯಿಸುತ್ತಿವೆ. ಮನುಷ್ಯನು ನಿರೋಗಿಯಾಗಿ ಬಾಳಬೇಕಾದರೆ ಕೇವಲ ಐಶ್ವರ್ಯ ಉನ್ನತ ಅಧಿಕಾರ ಎಲ್ಲಾ ತರದ ಸೌಕರ್ಯಗಳಿಂದ ಕೂಡಿರುವುದು ಇವು ಯಾವುದೂ ಸಾಲದೆಂಬುದು ಖಚಿತ. ದೇಹದ ಸ್ಥಿತಿಗತಿಗಳು ಸಮವಾಗಿದ್ದು ಆಗ್ನಿಯು ಕ್ರಮವಾಗಿ ತಿಂದ ಆಹಾರಗಳನ್ನು ಜೀರ್ಣಿಸಿ ಮಲಮೂತ್ರಗಳ ವಿಸರ್ಜನೆಗಳು ಕ್ರಮವಾಗಿ ನಡೆಯುತ್ತಿದ್ದು, ದೇಹದ ಧಾತುಗಳು ಸುಸೂತ್ರವಾಗಿದ್ದು ಮನಸ್ಸು ಪ್ರಫುಲ್ಲವಾಗಿದ್ದರೆ ಮಾತ್ರ ಮನುಷ್ಯನು ಸುಖಿಯೂ ಆರೋಗ್ಯವಂತನೂ ಎಂತ ಎನ್ನಿಸಿಕೊಳ್ಳುವನು.

ಈ ರೀತಿಯ ಆರೋಗ್ಯ ಮತ್ತು ಮನಃಸಂತೋಷವನ್ನುಂಟು ಮಾಡಿಕೊಳ್ಳಬೇಕಾದಲ್ಲಿ ಆರ್ಯುವೇದಶಾಸ್ತ್ರದಲ್ಲಿ ವಿವರಿಸಿದ ಸ್ವಸ್ಥವೃತ್ತ ತತ್ತ್ವವನ್ನೂ ಯೋಗಶಾಸ್ತ್ರದಲ್ಲಿ ವಿವರಿಸಿದ ತತ್ತ್ವಗಳನ್ನೂ ಪರಿಪಾಲಿಸಿದಲ್ಲಿ ಮಾತ್ರ ಸಾಧ್ಯ.

ಇಂದಿನ ಕಾಲದಲ್ಲಿ ಪ್ರಪಂಚದಲ್ಲೆಲ್ಲಾ ಬಹುಭಾಗ ಜನರು ಕೃತಕ ಜೀವನಗಳನ್ನೇ ನಡೆಸುತ್ತಿರುವುದು ಕಂಡುಬರುತ್ತದೆ. ಭಾರತದಲ್ಲಂತೂ ಕೋಟ್ಯಾಂತರ ಜನಸಮೂಹ ಆಹಾರ ಬಟ್ಟೆ ಮತ್ತು ಇನ್ನಿತರ ಸೌಕರ್ಯಗಳಿಲ್ಲದೆ ನರಳುತ್ತಿದ್ದರೂ ಸಾವಿರಾರು ಜನರು ತುಂಬಿದ ಐಶ್ವರ್ಯದಿಂದ ಕೂಡಿದ್ದು ಜಗತ್ತನೇ ಮರೆತಿರುವುದೂ ಕಂಡುಬರುತ್ತಿದೆ. ಈ ಮೇಲೆ ವಿವರಿಸಿದ ಕಾರಣಗಳಿಂದಾಗಿ ಬಹುಭಾಗ ಜನರಲ್ಲಿ ಶಿಸ್ತಿನ ಜೀವನದ ಅಭ್ಯಾಸವೇ ಕುಂಠಿತವಾಗಿದೆ. ಇದರಿಂದಾಗಿ ಜನರು ಅನಗತ್ಯವಾದ ಅಭ್ಯಾಸಗಳಿಗೆ ಬಲಿಬಿದ್ದು ರೋಗ ಪೀಡಿತರಾಗಿ ನರಳುತ್ತಿರುವುದನ್ನೂ ಎಲ್ಲೆಲ್ಲೂ ನೋಡಬಹುದಾಗಿದೆ.

ವಿಜ್ಞಾನಯುಗವೆಂತ ಕರೆಯಲ್ಪಡುತ್ತಿರುವ ಈ ಆಧುನಿಕ ಕಾಲದಲ್ಲಿ ಮಾನವನು ದುರಭ್ಯಾಸಗಳಿಂದ ದೂರಸರಿದು ಸುಖಿಯಾಗಿ ಬಾಳಬೇಕಾದರೆ ಯೋಗಾಭ್ಯಾಸ ಒಂದೇ ದಾರಿ ಎಂದರೆ ಅತಿಶಯೋಕ್ತಿಯಾಗಲಾರದು. ಯೋಗದಲ್ಲಿ ಹೇಳಿರುವ ಅಷ್ಟ ಅಂಗಗಳ ಪೈಕಿ ಪ್ರಪ್ರಥಮದ ನಾಲ್ಕು ಭಾಗಗಳನ್ನು ಶಿಸ್ತಿನಿಂದ ಅಭ್ಯಾಸ ಮಾಡುತ್ತಾ ಬಂದಲ್ಲಿ ಸುಖಿಯಾಗಿ ಬಾಳಬಹುದೆಂಬುದು ನಿಃಸಂಶಯ.

ವಿವೇಕಾನಂದರು ಹೇಳಿದ್ದಾರೆ. ‘‘Yoga is not competition but-co-operation’’. ಇಲ್ಲಿ ಸಮನ್ವಯ ತರುವುದು ಹೇಗೆ? ಅದಕ್ಕೆ ಒಂದು ತಂಡವನ್ನು ರಚನೆ ಮಾಡುವುದು, ಅದರಲ್ಲಿ ಎಲ್ಲ ವಯೋಮಾನದವರು ಇರಬೇಕು. (ಸಣ್ಣವರು, ದೊಡ್ಡವರು, ಹೆಣ್ಣು ಗಂಡು). ಹೀಗೆ ತಂಡಗಳನ್ನು ಮಾಡಿ ಯೋಗದ ಪ್ರದರ್ಶನ ಮಾಡಬೇಕು. ನಂತರ ಸ್ಪರ್ಧೆಯ ಮೂಲಕ ತಾಲ್ಲೂಕು, ಜಿಲ್ಲೆ ಹೀಗೆ ಬೇರೆ ಬೇರೆ ಹಂತಗಳವರೆಗೂ ಹೋಗಬೇಕು. ಹೀಗೆ ವಿಶ್ವ ಯೋಗದಿನವೂ ಹಳ್ಳಿ ಹಳ್ಳಿಗಳಿಗೂ ಹೋಗಿ ತಲುಪಬೇಕು. ಇದರಲ್ಲಿ ತಂಡದ ಕಾರ್ಯಕ್ಕೂ ಅಂಕಗಳಿರುತ್ತವೆ. ಮತ್ತು ಈ ಒಂದು ತಂಡದಲ್ಲಿ ಎಲ್ಲ ವಯೋಮಾನದವರು ಇರುವ ಕಾರಣದಿಂದ ಅನ್ಯೋನ್ಯತೆ ಮತ್ತು ಒಗ್ಗಟ್ಟು ಎರಡು ಇರುತ್ತದೆ.ಈ ವಿಶ್ವಯೋಗ ದಿನಾಚರಣೆಗೆ ಪ್ರಧಾನಿ ಮೋದಿಯವರು ತುಂಬಾ ಪ್ರೋತ್ಸಾಹವನ್ನು ನೀಡುತ್ತಿದ್ದಾರೆ. ಈ ಒಂದು ದಿನ ವಿಶ್ವದಲ್ಲೇ ಯೋಗವನ್ನು ಹರಡಲು ಇದೊಂದು ಸದವಕಾಶ…

ಶೃತಿಶಾಸ್ತ್ರ ಪುರಾಣಗಳಲ್ಲಿ, ಭಗವದ್ಗೀತೆ ಮತ್ತು ಇತಿಹಾಸಗಳಲ್ಲಿ ಕೂಡ ಯೋಗಕ್ಕೆ ಸಂಬಂಧಪಟ್ಟ ಉಲ್ಲೇಖಗಳಿರುವುದನ್ನು ನೋಡಿದರೆ ಇದಕ್ಕೆ ಸುಮಾರು ನಾಲ್ಕೈದು ಸಾವಿರ ವರ್ಷಗಳ ಹಿನ್ನೆಲೆ ಇರುವಂತೆ ಕಾಣುತ್ತದೆ. ಆದರೂ ಈ ಒಂದು ವಿದ್ಯೆಯು ಯಾವುದೇ ಒಂದು ವ್ಯಕ್ತಿಗೆ, ಸಮಾಜಕ್ಕೆ, ಪಗಂಡಕ್ಕೆ, ಜಾತಿಗೆ, ಧರ್ಮಕ್ಕೆ ಅಥವಾ ರಾಷ್ಟ್ರಕ್ಕೆ ಸೀಮಿತವಾದುದಿಲ್ಲ. ಇದು ಇಡಿಯ ವಿಶ್ವಕ್ಕೆ ಪ್ರಾಚೀನ ಋಷಿಮುನಿಗಳು ನೀಡಿರುವ ಒಂದು ವರಪ್ರಸಾದ. ಹಾಗಾದರೆ ಈ ಮಹಾವಿದ್ಯೆಯು ಎಲ್ಲಿಂದ ಪ್ರಾರಂಭವಾಯ್ತು? ಅದರ ಕರ್ತೃಗಳಾರು? ಅದು ಹೇಗೆ ಬೆಳೆದು ಬಂತು? ಅದರಲ್ಲಿರುವ ಅಂತಹ ಅಂತಃಶಕ್ತಿ ಏನು? ಇವೇ ಮೊದಲಾದ ಪ್ರಶ್ನೆಗಳು ಸಾಮಾನ್ಯವಾಗಿ ನಮ್ಮ ಮುಂದೆ ಬರುತ್ತವೆ.

ಪ್ರಾಚೀನ ಮಹರ್ಷಿಗಳು- ಯೋಗೀಶ್ವರಂ ಶಿವಂ ವಂದೇ-ವಂದೇ ಯೋಗೇಶ್ವರಂ ಹರಿಮ್‌ ಎಂದರು- ಎಂದರೆ ಶ್ರೀಮನ್ನಾರಯಣನನ್ನು ಮತ್ತು ಶ್ರೀ ರುದ್ರನನ್ನು (ಶಂಕರನನ್ನು) ಯೋಗಿಗಳೆಲ್ಲರ ಯೋಗೇಶ್ವರರು ಎಂಬುದಾಗಿಯೂ ಅಲ್ಲದೇ ಇವರೇ ಮೊತ್ತ ಮೊದಲನೆಯ ಯೋಗಾಚಾರ್ಯರೆಂಬುದಾಗಿಯೂ ಮಹರ್ಷಿಗಳೆಲ್ಲರ ಅಭಿಪ್ರಾಯ. ಮೂಲತಃ ಶಂಕರ-ನಾರಾಯಣರಲ್ಲಿ ಯಾವ ಭೇದವಿಲ್ಲದಿದ್ದರೂ ಅನೂಚಾನವಾಗಿ ಇವರೀರ್ವರ ಹೆಸರಿನಲ್ಲೂ ಒಂದೊಂದು ಯೋಗ ಸಂಪ್ರದಾಯವು ನಡೆದುಕೊಂಡು ಬಂದಿರುವುದು ರೂಢಿಯಲ್ಲಿದೆ. ಹೀಗಾಗಿ ಕೆಲ ಕೆಲವು ಉಪನಿಷತ್ತುಗಳಲ್ಲಿ ಶ್ರೀಮನ್ನಾರಾಯಣನೇ ಯೋಗದ ಮೂಲ ಆಚಾರ್ಯನೆಂದು ಪ್ರತಿಪಾದಿಸಿದರೆ ಇನ್ನು ಕೆಲವು ಉಪನಿಷತ್ತುಗಳಲ್ಲಿ ರುದ್ರನನ್ನೇ ಯೋಗದ ಮೂಲ ಆಚಾರ್ಯನೆಂಬುದಾಗಿ ನಿರೂಪಿಸಲಾಗಿದೆ. ಆದರೂ ಉಪನಿಷತ್ತುಗಳಲ್ಲಿ ವಿಷ್ಣು (ನಾರಾಯಣ) ಮತ್ತು ಶಂಕರರಿಂದಲೇ ಹಿರಣ್ಯಗರ್ಭನೆಂನ್ನಿಸಿಕೊಂಡಿರುವ ಬ್ರಹ್ಮನಿಗೆ ಯೋಗಪದೇಶವಾಯಿತೆಂದೂ ಮತ್ತು ಆತನು ಅನೇಕ ಋಷಿಮಹರ್ಷಿಗಳಾದ ಯೋಗಾಚಾರ್ಯರುಗಳಿಂದ ಆ ಯೋಗವಿದ್ಯೆಯನ್ನು ಪ್ರಚುರಪಡಿಸಿದನೆಂದೂ ತಿಳಿಯುತ್ತದೆ.

ವೇದೋಪನಿಷತ್ತುಗಳ ಕಾಲದಲ್ಲಾಗಲೀ ಅಥವಾ ಪುರಾಣೇತಿಹಾಸಕಾಲದಲ್ಲಾಗಲೀ ಗುರುಶಿಷ್ಯರಲ್ಲಿ ಒಂದು ಆತ್ಮೀಯತೆಯ ಸಂಬಂಧವಿತ್ತು. ಅಲ್ಲಿ ಕೊಟ್ಟು ತೆಗೆದುಕೊಳ್ಳುವ ವ್ಯಾಪಾರೀಮನೋಭಾವವಿರಲಿಲ್ಲ. ಲೋಕಕಲ್ಯಾಣಾಕಾಂಕ್ಷೆಯಿಂದಲೇ ಗುರುಗಳು ಶಿಷ್ಯರಿಗೆ ವಿದ್ಯಾದಾನವನ್ನು ಮಾಡುತ್ತಿದ್ದರು; ಶಿಷ್ಯರಾದರೂ ಅದೇ ಭಾವನೆಯಿಂದಲೇ ಕಲಿತು ಸಾಧನೆ ಮಾಡುತ್ತಿದ್ದರು. ಆಗ ಯಾಕೆ-ಇತ್ತೀಚೆಗೆ ಕೆಲವು ದಶಕಗಳ ಹಿಂದಿನವರೆಗೂ ಯೋಗವು ಸಾಗಿಬಂದ ರೀತಿಯನ್ನು ನೋಡಿದರೆ ಈ ಗುರುಶಿಷ್ಯ ಬಾಂಧವ್ಯದಲ್ಲಿ ಒಂದು ಆದರ್ಶವಾದ ಪ್ರೇಮ ಸಂಬಂಧವಿತ್ತು. ಅಲ್ಲೆಲ್ಲೂ ಕೊಟ್ಟುಕೊಳ್ಳುವ ವ್ಯಾಪಾರೀ ಧರ್ಮವು ಇಣಿಕಿಹಾಕಿದಂತೆ ಕಾಣುವುದಿಲ್ಲ. ಆದುದರಿಂದಲೇ ನಶಿಸಿಯೇ ಹೋಗಬೆಕಾಗಿದ್ದ ಯೋಗವಿದ್ಯೆಯು ಮಾನ್ಯತೆಯನ್ನು ಹೊಂದಿದರೂ ಅದು ಬೇಸಿಗೆಯ ಕ್ಷೀಣನದಿಯಂತೆ ಹರಿಯುತ್ತಲೇ ಬಂದಿದೆ. ಈ ಮಧ್ಯಕಾಲದಲ್ಲೇ ಅದು ಸಮುದ್ರೋಲ್ಲಂಘನ ಮಾಡಿ ತನ್ನ ಉಜ್ವಲ ಕೀರ್ತಿಯನ್ನು ವಿದೇಶಗಳಲ್ಲೂ ಹರಡಿತ್ತು ಎಂಬುದು ಇಲ್ಲಿ ನೆನೆಪಿಸಿಕೊಳ್ಳತಕ್ಕ ವಿಚಾರ. ಶ್ರೀ ವಿವೇಕಾನಂದರು, ಶ್ರೀ ರಾಮತೀರ್ಥರೇ ಮೊದಲಾದ ಸನ್ಯಾಸಿಗಳು ವಿದೇಶಗಳಲ್ಲಿ ಭಾರತೀಯ ಸಂಸ್ಕೃತಿಯನ್ನೂ, ಯೋಗವಿದ್ಯೆಯನ್ನೂ ಪ್ರಚಾರಪಡಿಸುವುದರಲ್ಲಿ ಅತಿ ಮುಖ್ಯವಾದ ಪಾತ್ರವನ್ನು ವಹಿಸಿದ್ದಾರೆ. ಇದೇ ಕಾಲದಲ್ಲಿ ತಮ್ಮ ತಮ್ಮ ಕ್ಷೇತ್ರದಲ್ಲಿ ಶ್ರಮಿಸಿದ್ದಾರೆ. ಇದಕ್ಕೆ ವ್ಯಾಪಕವಾದ ಪುನಶ್ಚೇತನವನ್ನಿತ್ತು ಯೋಗವಿದ್ಯೆಯ ಕೀರ್ತಿಪತಾಕೆಯನ್ನು ವಿಶ್ವದಾದ್ಯಂತ ಹಾರಿಸಿದವರೆಂದರೆ ಶ್ರೀ ರಮಣಮಹರ್ಷಿಗಳು ಮತ್ತು ಶ್ರೀ ಅರವಿಂದರು. ಇವರು ಕ್ಷೀಣಿಸುತ್ತಿದ್ದ ಯೋಗ ವಿದ್ಯೆಯ ದೀಪಜ್ಯೋತಿಗೆ ತೈಲವನ್ನೆರೆದು ಅದು ಪ್ರಜ್ವಲಿಸಿ ಉರಿಯುವಂತೆ ಮಾಡಿದರು. ಹೀಗಾಗಿ ವಿದೇಶದ ಆಸ್ತಿಕರನೇಕರು ಭಾರತದ ಕಡೆಗೆ ಆಶಾಭಾವನೆಯಿಂದ ನೋಡುವಂತಾಯ್ತು.

ಅವರಲ್ಲನೇಕರಿಗೆ ಯೋಗವಿದ್ಯೆಯ ಸಂಬಂಧದಲ್ಲಿ ಅದರ ಸಾಧನೆಯ ವಿಚಾರದಲ್ಲಿ ವಿಶೇಷ ಆಸಕ್ತಿಯುಂಟಾಯಿತು. ಬಾಹ್ಯ ಸುಖಸಂಪತ್ತಿನಲ್ಲಿ ಭೋಗೈಶ್ವರ‌್ಯಗಳಲ್ಲಿ ಶಾಶ್ವತ ಸುಖಕಾಣದ ಅವರು ಭಾರತೀಯ ಸಂಸ್ಕೃತಿಯಲ್ಲಿ, ಯೋಗವಿದ್ಯೆಯಲ್ಲಿ ಆನಂದವನ್ನು ಕಂಡು ಇದಕ್ಕೆ ಮಾರುಹೋದರು. ಈ ಕಾಲದಲ್ಲೇ ರಾಮಕೃಷ್ಣಮಿಶನ್‌ನವರೂ ಇನ್ನೂ ಕೆಲವು ಆಧ್ಯಾತ್ಮಿಕ ಮಹದ್ವ್ಯಕ್ತಿಗಳೂ ಅಲ್ಲಿ ಅಪಾರ ಕೆಲಸವನ್ನು ಮಾಡಿದ್ದುಂಟು.

ಆದರೆ ಇಡೀ ಕಾಳಿನ ಜೊತೆಯಲ್ಲಿ ಜೊಳ್ಳೂ ತೂರಿ ಬಂದಂತೆ ಈ ಕಾಲದಲ್ಲೇ ಅನೇಕ ವ್ಯಾಪಾರೀ ಮನೋಭಾವದ ಯೋಗಶಿಕ್ಷಕರು ಕೇವಲ ಹಣಗಳಿಸುವ ದೃಷ್ಟಿಯಿಂದ ವಿದೇಶ ಸಂಚಾರ ಕೈಗೊಂಡು ಯೋಗಶಿಕ್ಷಣದ ನೆಪದಲ್ಲಿ ಧನಸಂಪಾದನೆಗೆ ನಿಂತಿರುವುದು ತೀರ ಶೋಚನೀಯವಾದ ವಿಚಾರ. ಅಂತೂ ಯಾವುದೋ ರೀತಿಯಲ್ಲಿ ಇಂದು ಯೋಗವಿದ್ಯೆಯ ಮಾತೃಸ್ಥಾನವಾದ ಭಾರತದಲ್ಲಿದು ನಶಿಸುತ್ತಿದ್ದರೂ ವಿದೇಶಗಳಲ್ಲದು ವ್ಯಾಪಕವಾಗಿ ಬೆಳೆಯುತ್ತಿದೆ ಎಂಬುದಂತೂ ತೀರಸತ್ಯ. ಇಂಥಲ್ಲಿ ನಮ್ಮಿಂದಲೇ ಕಲಿತ ಯೋಗವಿದ್ಯೆಗೆ ವಿಜ್ಞಾನದ ಲೇಪನವನ್ನಿತ್ತು ತಿರುಗಿ ನಮಗೇ ಮರಳಿಸುವ ಪ್ರಯತ್ನ ನಡೆದಿದೆ…

ಅದರಲ್ಲಿಯೇ ಆಗಲೀ ಎಲ್ಲಿಯೇ ಆಗಲಿ ಈ ಹಿಂದಿನ ಗುರುಶಿಷ್ಯ ಬಾಂಧವ್ಯವಳಿದು ಅಲ್ಲಿ ಕೊಟ್ಟುಕೊಳ್ಳುವ ಮಾರುಕಟ್ಟೆಯ ಧರ್ಮವು ಕಾಣಿಸಿಕೊಂಡಿರುವುದು ತೀರ ಶೋಚನೀಯವೆಂದು ಹೇಳದೆ ವಿಧಿಯಿಲ್ಲ. ಅದೊಂದು ಮುಖ-ಇದೊಂದು ಮುಖ. ಇದು ಪ್ರಾಚೀನಕಾಲದಿಂದ ಯೋಗವು ನಡೆದುಬಂದ ದಾರಿ. ಇದೇ ಯೋಗದ ವಿರಾಟ್ ಸ್ವರೂಪ.

ವಾಸ್ತವಿಕವಾಗಿ ಯೋಗ ಮಾರ್ಗದಿಂದ ಐಹಿಕಾಭ್ಯುದಯ ಮತ್ತು ಆಮುಷ್ಮಿಕಶ್ರೇಯಸ್ಸು ಇವೆರಡನ್ನು ಧಾರಾಳವಾಗಿ ಸಾಧಿಸಬಹುದಾಗಿದೆ. ಅಭ್ಯಾಸ ಪ್ರಧಾನವಾದ ಯೋಗ ಮಾರ್ಗದಿಂದ ಅದ್ಭುತ ಮಹಿಮೆಯನ್ನೂ ಮೋಕ್ಷ ಸಾಮ್ರಾಜ್ಯವನ್ನೂ ಸಾಧಿಸಿದ ಅನೇಕ ಮಹಾನುಭಾವರುಗಳು ಇದ್ದಾರೆ. ಯೋಗಪ್ರಸ್ಥಾನ ಪ್ರಾಚೀನವಾದುದೆಂಬ ಪ್ರತೀತಿಯೂ ಪುರಾಣಗಳಲ್ಲಿ ಪ್ರಸಿದ್ಧವಾಗಿದೆ. ರಾಮಾಯಣದಲ್ಲಿ ಲಕ್ಷ್ಮಣನೂ ಯೋಗಮಾರ್ಗದಿಂದಲೇ ಸ್ವಸ್ಥಾನವಾದ ವೈಕುಂಠವನ್ನು ಸೇರಿದನೆಂಬ ಐತಿಹ್ಯವಿದೆ.

ಭಾರತ ಭಾಗವತಗಳಲ್ಲಿ ಬಲರಾಮ, ಶ್ರೀಕೃಷ್ಣ, ವಿದುರ ಮೊದಲಾದವರು ಯೋಗಾರೂಢರಾಗಿಯೇ ಪರಂಧಾಮವನ್ನೈದಿದರೆಂದಿದೆ. ‘‘ಯೋಗೇನಾಂ ತೇತನುತ್ಯಜಾಮ್’’. ಯೋಗಶಾಸ್ತ್ರವೆಂಬುದು ಒಂದು ದೇಶಕ್ಕಾಗಲೀ ಒಂದು ಜನಾಂಗಕ್ಕಾಗಲೀ ಅಥವಾ ಒಂದು ಧರ್ಮಕ್ಕಾಗಲಿ ಸಂಬಂಧಪಟ್ಟ ವಿಷಯವಲ್ಲ. ಇದು ಇಡೀ ಜಗತ್ತಿನ ಜನಕ್ಕೆ ಸಂಬಂಧಪಟ್ಟ ವಿಷಯವಾಗಿದ್ದು ಭರತಖಂಡದ ಪ್ರಮುಖ ವಿಜ್ಞಾನಗಳಲ್ಲೊಂದಾಗಿದೆ. ಭಾರತದ ವೈದ್ಯ ವಿಜ್ಞಾನವಾದ ಆಯುರ್ವೆದಶಾಸ್ತ್ರವೂ ಯೋಗಶಾಸ್ತ್ರವೂ ಮೊತ್ತಮೊದಲಿಗೆ ಈ ದೇಶದಲ್ಲೇ ಉತ್ಪತ್ತಿಯಾದುವು ಎಂತಲೂ ಈ ಶಾಸ್ತ್ರಗಳ ಪೂರ್ವ ಇತಿಹಾಸವೂ ಇನ್ನಾವ ದೇಶಗಳಲ್ಲಿ ದೊರೆಯಲಾರವು ಎಂಬುದ ತಿಳಿದು ಬಂದಿದೆ. ಆದರೆ ಸಹಸ್ರಾರು ವರುಷಗಳ ಹಿಂದೆಯೇ ಅನೇಕ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಯೋಗಾಭ್ಯಾಸವು ಪ್ರಚಾರದಲ್ಲಿದ್ದ ಉದಾಹರಣೆಗಳು ದೊರಕಿವೆ. ಪ್ರಾಯಶಃ ಕೆಲವು ಸಾವಿರ ವರ್ಷಗಳ ಹಿಂದೆಯೇ ಈ ವಿಜ್ಞಾನವು ಬೇರೆ ಬೇರೆ ರಾಷ್ಟ್ರಗಳಿಗೆ ಹರಡಿರಬಹುದು.

ಪೂರ್ವಕಾಲದಲ್ಲಿ ಸಾಮಾನ್ಯವಾಗಿ ಸನ್ಯಾಸವನ್ನು ಸ್ವೀಕರಿಸಿದ ವ್ಯಕ್ತಿಗಳೆ ಯೋಗಾಭ್ಯಾಸಮಾಡಿಕೊಂಡಿದ್ದು ಪ್ರಾಪಂಚಿಕ ವ್ಯವಹಾರಗಳಿಂದ ದೂರವಾಗೆ ಉಳಿಯುತ್ತಿದ್ದರು. ಇದನ್ನೆಲ್ಲಾ ನೋಡಿದ ಜನಸಾಮಾನ್ಯರು ಯೋಗಾಭ್ಯಾಸ ಮಾಡುವುದರಲ್ಲಾಗಲೀ ಈ ಬಗ್ಗೆ ವಿಷಯಗಳನ್ನು ತಿಳಿದುಕೊಳ್ಳುವುದಲ್ಲಾಗಲೀ ಆಸಕ್ತಿ ತೋರಿಸುತ್ತಿರಲಿಲ್ಲ.

ಸುಮಾರು ಐವತ್ತು ವರ್ಷಗಳ ಹಿಂದೆ ಯೋಗಶಾಸ್ತ್ರದ ಬಗ್ಗೆ ಮಾತನಾಡುವ ಹಾಗೂ ಅಭ್ಯಾಸ ಮಾಡುವ ಜನ ಅತೀ ವಿರಳವಾಗಿದ್ದರು, ಯೋಗವೆಂಬ ಶಬ್ದ ಕೇಳುತ್ತಲೇ ಜನಸಾಮಾನ್ಯರು ಇದು ಸನ್ಯಾಸಕ್ಕೆ ಸಂಬಂಧಪಟ್ಟ ವಿಷಯವೆಂದು ತಿಳಿದು ದೂರ ಸರಿಯುತ್ತಿದ್ದರು. ಈ ಶಾಸ್ತ್ರವನ್ನು ತಿಳಿದು ಅಭ್ಯಾಸದಲ್ಲಿಟ್ಟುಕೊಂಡಿದ್ದ ಅನೇಕರು ಇತರರಿಗೆ ಈ ಶಾಸ್ತ್ರದ ಬಗ್ಗೆ ಮಾಹಿತಿ ಕೊಡದೆ ಇದೊಂದು ಗುಪ್ತ ವಿಜ್ಞಾನವೆಂದುಕೊಂಡು ಈ ಬಗ್ಗೆ ವಿಚಾರಿಸಿದ ಜನರ ಮನಸ್ಸಿನಲ್ಲಿ ಭಯವುಂಟಾಗುವ ರೀತಿಯಲ್ಲಿ ಬೋಧಿಸುತ್ತಿದ್ದರು. ಈ ಅನುಭವವನ್ನು ಪಡೆದವರಲ್ಲಿ ನಾನು ಒಬ್ಬ ಇದರಿಂದಾಗಿ ಸಾಮಾನ್ಯ ಜನರು ಈ ವಿಜ್ಞಾನದಿಂದ ದೂರವಾಗಿರುತ್ತಿದ್ದರು.

ಆಧುನಿಕ ಕಾಲದಲ್ಲಿ ಯೋಗವು ವಿಶ್ವದಲ್ಲೆಲ್ಲಾ ಪ್ರಚಾರವಾಗಿರುವುದನ್ನೂ, ದಿನೇ ದಿನೇ ಈ ವಿಜ್ಞಾನವು ಪ್ರಖ್ಯಾತಿಗೆ ಬರುತ್ತಿರುವುದನ್ನೂ ನೋಡುತ್ತಿದ್ದೇವೆ. ಸೂಕ್ಷ್ಮವಾಗಿ ನೋಡುತ್ತಾ ಹೋದರೆ ಯೋಗದ ಮಾತೃಭೂಮಿಯಾದ ಭಾರತದಲ್ಲಿ ಇರುವುದಕ್ಕಿಂತ ಹೆಚ್ಚು ಯೋಗ ಪ್ರಚಾರ ಅಭ್ಯಾಸಗಳನ್ನು ಇತರ ಅನೇಕ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ನೋಡಬಹುದು. ಅಲ್ಲದೆ ಅನೇಕ ಕಡೆಗಳಲ್ಲಿ ಬೃಹದ್ ಯೋಗ ಸಮ್ಮೇಳನಗಳಾಗುತ್ತಿರುವುದೂ ಕಂಡು ಬರುತ್ತಿದೆ.
ಆಫ್ರಿಕಾ, ಸುಜರ್‌ಲ್ಯಾಂಡ್, ಜರ್ಮನಿ, ಇಟಲಿ, ಫ್ರಾನ್ಸ್‌ ಮತ್ತು ಇಂಗ್ಲೆಂಡ್ ದೇಶಗಳಲ್ಲಿ ಅನೇಕ ಯೋಗ ಕೇಂದ್ರಗಳನ್ನೂ, ಕೆಲವು ಆಸ್ಪತ್ರೆಗಳಲ್ಲಿ ನಡೆಸಲ್ಪಡುತ್ತಿರುವ ಯೋಗ ಚಿಕಿತ್ಸೆಗಳನ್ನೂ, ನೂರಾರು ಯೋಗ ಅಧ್ಯಾಪಕರುಗಳನ್ನೂ ಮತ್ತು ಸಾವಿರಾರು ಯೋಗವಿದ್ಯಾರ್ಥಿಗಳನ್ನು ಕಂಡ ನನಗೆ ಆತ್ಯಾಶ್ಚರ್ಯವಾಗಿದೆ, ಇದೇ ರೀತಿಯಲ್ಲಿ ಮಂದೋತ್ತಿದ್ದ ಅನೇಕ ಪಾಶ್ಚಾತ್ಯ ದೇಶಗಳಲ್ಲೂ ಸಾಕಷ್ಟು ಯೋಗಕೇಂದ್ರಗಳಿವೆ ಎಂಬುದನ್ನು ತಿಳಿದಿದ್ದೇನೆ.

ಭಾರತದಲ್ಲಿ ಮಾನವನು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕ್ರಮಬದ್ಧವಾಗಿ ಹೊಂದಿರಬೇಕಾದ ಅಗತ್ಯಗಳ ಬಗ್ಗೆ ಅನೇಕ ಸಾವಿರ ವರ್ಷಗಳ ಹಿಂದೆಯೇ ಆರ್ಯುವೇದ ಮತ್ತು ಯೋಗಶಾಸ್ತ್ರಗಳು ಬೋಧಿಸಿದ ವಿಚಾರಗಳು ಇಂದಿಗೂ ಅನ್ವಯಿಸುತ್ತಿವೆ. ಮನುಷ್ಯನು ನಿರೋಗಿಯಾಗಿ ಬಾಳಬೇಕಾದರೆ ಕೇವಲ ಐಶ್ವರ್ಯ ಉನ್ನತ ಅಧಿಕಾರ ಎಲ್ಲಾ ತರದ ಸೌಕರ್ಯಗಳಿಂದ ಕೂಡಿರುವುದು ಇವು ಯಾವುದೂ ಸಾಲದೆಂಬುದು ಖಚಿತ. ದೇಹದ ಸ್ಥಿತಿಗತಿಗಳು ಸಮವಾಗಿದ್ದು ಆಗ್ನಿಯು ಕ್ರಮವಾಗಿ ತಿಂದ ಆಹಾರಗಳನ್ನು ಜೀರ್ಣಿಸಿ ಮಲಮೂತ್ರಗಳ ವಿಸರ್ಜನೆಗಳು ಕ್ರಮವಾಗಿ ನಡೆಯುತ್ತಿದ್ದು, ದೇಹದ ಧಾತುಗಳು ಸುಸೂತ್ರವಾಗಿದ್ದು ಮನಸ್ಸು ಪ್ರಫುಲ್ಲವಾಗಿದ್ದರೆ ಮಾತ್ರ ಮನುಷ್ಯನು ಸುಖಿಯೂ ಆರೋಗ್ಯವಂತನೂ ಎಂತ ಎನ್ನಿಸಿಕೊಳ್ಳುವನು.

ಈ ರೀತಿಯ ಆರೋಗ್ಯ ಮತ್ತು ಮನಃಸಂತೋಷವನ್ನುಂಟುಮಾಡಿಕೊಳ್ಳಬೇಕಾದಲ್ಲಿ ಆರ್ಯುವೇದಶಾಸ್ತ್ರದಲ್ಲಿ ವಿವರಿಸಿದ ಸ್ವಸ್ಥವೃತ್ತ ತತ್ತ್ವವನ್ನೂ ಯೋಗಶಾಸ್ತ್ರದಲ್ಲಿ ವಿವರಿಸಿದ ತತ್ತ್ವಗಳನ್ನೂ ಪರಿಪಾಲಿಸಿದಲ್ಲಿ ಮಾತ್ರ ಸಾಧ್ಯ.

ಇಂದಿನ ಕಾಲದಲ್ಲಿ ಪ್ರಪಂಚದಲ್ಲೆಲ್ಲಾ ಬಹುಭಾಗ ಜನರು ಕೃತಕ ಜೀವನಗಳನ್ನೇ ನಡೆಸುತ್ತಿರುವುದು ಕಂಡುಬರುತ್ತದೆ. ಭಾರತದಲ್ಲಂತೂ ಕೋಟ್ಯಾಂತರ ಜನಸಮೂಹ ಆಹಾರ ಬಟ್ಟೆ ಮತ್ತು ಇನ್ನಿತರ ಸೌಕರ್ಯಗಳಿಲ್ಲದೆ ನರಳುತ್ತಿದ್ದರೂ ಸಾವಿರಾರು ಜನರು ತುಂಬಿದ ಐಶ್ವರ್ಯದಿಂದ ಕೂಡಿದ್ದು ಜಗತ್ತನೇ ಮರೆತಿರುವುದೂ ಕಂಡುಬರುತ್ತಿದೆ. ಈ ಮೇಲೆ ವಿವರಿಸಿದ ಕಾರಣಗಳಿಂದಾಗಿ ಬಹುಭಾಗ ಜನರಲ್ಲಿ ಶಿಸ್ತಿನ ಜೀವನದ ಅಭ್ಯಾಸವೇ ಕುಂಠಿತವಾಗಿದೆ. ಇದರಿಂದಾಗಿ ಜನರು ಅನಗತ್ಯವಾದ ಅಭ್ಯಾಸಗಳಿಗೆ ಬಲಿಬಿದ್ದು ರೋಗ ಪೀಡಿತರಾಗಿ ನರಳುತ್ತಿರುವುದನ್ನೂ ಎಲ್ಲೆಲ್ಲೂ ನೋಡಬಹುದಾಗಿದೆ.

ವಿಜ್ಞಾನಯುಗವೆಂತ ಕರೆಯಲ್ಪಡುತ್ತಿರುವ ಈ ಆಧುನಿಕ ಕಾಲದಲ್ಲಿ ಮಾನವನು ದುರಭ್ಯಾಸಗಳಿಂದ ದೂರಸರಿದು ಸುಖಿಯಾಗಿ ಬಾಳಬೇಕಾದರೆ ಯೋಗಾಭ್ಯಾಸ ಒಂದೇ ದಾರಿ ಎಂದರೆ ಅತಿಶಯೋಕ್ತಿಯಾಗಲಾರದು. ಯೋಗದಲ್ಲಿ ಹೇಳಿರುವ ಅಷ್ಟ ಅಂಗಗಳ ಪೈಕಿ ಪ್ರಪ್ರಥಮದ ನಾಲ್ಕು ಭಾಗಗಳನ್ನು ಶಿಸ್ತಿನಿಂದ ಅಭ್ಯಾಸ ಮಾಡುತ್ತಾ ಬಂದಲ್ಲಿ ಸುಖಿಯಾಗಿ ಬಾಳಬಹುದೆಂಬುದು ನಿಃಸಂಶಯ.

Get In Touch With Us info@kalpa.news Whatsapp: 9481252093

Tags: bhagavad gitaDr Gururaj PoshettihalliInternational Yoga DayKannada News WebsiteLatest News KannadaMalnadShivamoggaSpecial ArticleYogaಭಗವದ್ಗೀತೆವಿವೇಕಾನಂದ
Share198Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಗ್ರಹಣ ಫಲ: ಯಾರಿಗೆ ಶುಭ? ಯಾರಿಗೆ ಅಶುಭ? ಇಲ್ಲಿದೆ ಮಾಹಿತಿ

Next Post

ಸೂರ್ಯಗ್ರಹಣ: ಪ್ರಕೃತಿಯ ಕೌತುಕ ಸ್ಪಷ್ಟವಾಗಿ ಲೈವ್ ನೋಡಿ

kalpa News

kalpa News

Next Post
ಸೂರ್ಯಗ್ರಹಣ: ಪ್ರಕೃತಿಯ ಕೌತುಕ ಸ್ಪಷ್ಟವಾಗಿ ಲೈವ್ ನೋಡಿ

ಸೂರ್ಯಗ್ರಹಣ: ಪ್ರಕೃತಿಯ ಕೌತುಕ ಸ್ಪಷ್ಟವಾಗಿ ಲೈವ್ ನೋಡಿ

Leave a Reply Cancel reply

Your email address will not be published. Required fields are marked *

No Result
View All Result
Indian Railway PM Modi to Inaugurate 4 Modern Railway Stations in Karnataka
English Articles

Indian Railway | PM Modi To Launch 4 Stations In Karnataka

by kalpa News
July 16, 2026
0

Kalpa Media House  |  Bengaluru  | Indian Railways continues its transformative journey with a strong focus on modernization and global...

Read moreDetails
SWR to run special trains for Good Friday, Easter rush

Indian Railway | Danapur and Bengaluru Special Trains Extension

July 16, 2026
Shivamogga's Sri Raghavendra Swamy Mutt Becomes First In South India To Receive Three ISO Certifications

Shivamogga | Raghavendra Swamy Mutt Becomes First In South India To Receives 3 ISO Certification

July 16, 2026
Mysore - Shivamogga - Talguppa Train Indian Railway

Indian Railway | Visakhapatnam– Bengaluru–Visakhapatnam Special Train Extension

July 16, 2026
Amrit Bharat Station Scheme

Hubballi Division Hosts Student Competitions to Promote Amrit Bharat Station Scheme

July 16, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!