ಜಾಗತಿಕ ಉಗ್ರರ ಕಾರ್ಖಾನೆಯಾಗಿರುವ ಪಾಪಿ ಪಾಕಿಸ್ಥಾನದ ನೀಚಕೃತ್ಯಕ್ಕೆ ತಕ್ಕುದಾದ ಉತ್ತರ ನೀಡಲೇಬೇಕು ಎಂಬ ಕಾರಣದಿಂದ ಕೆರಳಿದ್ದ ಭಾರತ, ಇಂದು ನಸುಕಿನಲ್ಲಿ ಪಾಕಿಸ್ಥಾನದ ಬಾಲ್ಕೋಟ್ ಸೇರಿ ಮೂರು ಸ್ಥಳಗಳ ಮೇಲೆ ದಾಳಿ ನಡೆಸಿ ನೂರಾರು ಉಗ್ರರನ್ನು ಕೊಂದಿದೆ.
ಪುಲ್ವಾಮಾದಲ್ಲಿ ಸಿಆರ್’ಪಿಎಫ್ ಯೋಧರ ಮೇಲೆ ದಾಳಿ ನಡೆಸಿದ ಜೈಷ್ ಉಗ್ರರನ್ನು ಸದೆಬಡಿಯಲೇ ಬೇಕು ಎಂಬ ಕಿಚ್ಚಿನಿಂದ ಇಂದಿನ ಕಾರ್ಯಾಚರಣೆಯ ರೂಪುರೇಷೆ ಸಿದ್ದಗೊಂಡಿತ್ತು. ಫೆ.15ರಂದು ಈ ವಿಚಾರ ಪ್ರಧಾನಿಯವರ ಮುಂದೆ ಪ್ರಸ್ತಾಪವಾಗಿ, ಅನುಮೋದನೆಗೊಂಡ ನಂತರ ಆರಂಭವಾಗಿದ್ದೆ ಮಾಹಿತಿ ಸಂಗ್ರಹ ಕಾರ್ಯ. ಡ್ರೋಣ್ ಹಾಗೂ ಸ್ಯಾಟಲೈಟ್ ಬಳಸಿ ಉಗ್ರರ ಅಡಗುತಾಣಗಳ ಕುರಿತಾಗಿ ಮಾಹಿತಿ ಸಂಗ್ರಹಿಸಿದ್ದು ಒಂದೆಡೆಯಾದರೆ, ಗುಪ್ತಚರ ಇಲಾಖೆಯ ಮೂಲಕ ಮಾಹಿತಿ ಕಲೆ ಹಾಕಿದ್ದು ಇನ್ನೊಂದು ಭಾಗ.
ಈ ಹಂತದಲ್ಲಿ ಅಂದರೆ ಮಾಹಿತಿ ಕಲೆ ಹಾಕಿದ ನಂತರ ಪಾಕಿಸ್ಥಾನದ ಪರಿಧಿಯಲ್ಲಿರುವ ಬಾಲ್ಕೋಟ್ ಸೇರಿದಂತೆ ಮೂರು ಸ್ಥಳಗಳನ್ನು ಗುರುತಿಸಲಾಯಿತು. ಇದರಲ್ಲಿ ಪ್ರಮುಖವಾದ ಸ್ಥಳ ಬಾಲ್ಕೋಟ್’ನ್ನೆ ಮುಖ್ಯ ಗುರಿಯನ್ನಾಗಿಸಿಕೊಳ್ಳಲು ಕಾರಣವಿದೆ. ಏನದು? ಮುಂದೆ ಓದಿ.
ಈ ಬಾಲ್ಕೋಟ್ ಎಂಬುದು ಪಾಕಿಸ್ಥಾನದ ಖೈಬರ್-ಪಖ್ತುನ್ಖ್ವಾ ಎಂಬ ಪ್ರಾಂತ್ಯದಲ್ಲಿರುವ ಒಂದು ಪ್ರದೇಶ. ಹಿಂದೆ ಇಲ್ಲಿದ್ದ ಜನವಸತಿ ಪ್ರದೇಶ 2005ರಲ್ಲಿ ಸಂಭವಿಸಿದ ಪ್ರಬಲ ಭೂಕಂಪನದಿಂದ ನಾಶವಾಗಿ ಹೋಗಿದೆ. ಆದರೆ, ಅಲ್ಲಿಂದ ಈ ಪ್ರದೇಶ ಭಯೋತ್ಪಾದಕರ ನೆಚ್ಚಿನ ತಾಣವೇ ಆಗಿದೆ. ಒಂದು ರೀತಿಯಲ್ಲಿ ಭಯೋತ್ಪಾದಕರನ್ನು ತಯಾರು ಮಾಡುವ ಕಾರ್ಖಾನೆಯೂ ಹೌದು.
ಈ ಬಾಲ್ಕೋಟ್ ಪ್ರದೇಶ ಕುರಿತಂತೆ ವಿಕಿಲೀಕ್ಸ್ ಸೇರಿದಂತೆ ಪ್ರಮುಖ ಸಂಸ್ಥೆಗಳು ಮಾಹಿತಿ ಬಹಿರಂಗ ಪಡಿಸಿದ್ದು, ಜಗತ್ತಿಗೆ ಕಾಡುತ್ತಿರುವ ಮೋಸ್ಟ್ ಟೆರರ್ ಕೃತ್ಯಗಳು ಹುಟ್ಟುತ್ತಿರುವುದು ಇಲ್ಲಿಯೇ ಎಂದಿದೆ. ಈ ಪ್ರದೇಶಕ್ಕೆ ಸಂಬಂಧಿಸಿದಂತೆ ನೋಡುವುದಾದರೆ, ಇಲ್ಲಿ ಒಂದಲ್ಲ, ಎರಡಲ್ಲ ಹತ್ತಾರು ಭಯೋತ್ಪಾದಕರ ತಯಾರಿಕಾ ಕಾರ್ಖಾನೆಗಳಿವೆ. ಅದು ಎಂದು ಉಗ್ರ ಸಂಘಟನೆಗಳು ಅಮೆರಿಕಾ, ಯುಕೆ ಹಾಗೂ ಭಾರತದಂತಹ ರಾಷ್ಟಗಳನ್ನು ಟಾರ್ಗೆಟ್ ಮಾಡಿರುವುವವು. ಅಮೆರಿಕಾದಲ್ಲಿ ನಡೆದ ಸೆ.11ರ ದಾಳಿಯ ಪ್ಲಾನ್ ಸಿದ್ದವಾಗಿದ್ದೇ ಈ ಸ್ಥಳದಿಂದ. ಅಲ್ಲದೇ, ಒಸಾಮಾ ಬಿನ್ ಲಾಡೆನ್ ಸಹ ಇದೇ ಸ್ಥಳದಲ್ಲಿ ತನ್ನ ಅಡಗುತಾಣವನ್ನು ಮಾಡಿಕೊಂಡಿದ್ದ. ಅಬೊಟಾಬಾದ್ನಿಂದ ಕೇವಲ 62.5 ಕಿ.ಮೀ. ದೂರದಲ್ಲಿದ್ದು, ಅಲ್ಲಿ ಒಸಾಮಾ ಬಿನ್ ಲಾಡೆನ್ನನ್ನು ಕೊಲ್ಲಲಾಗಿದೆ.
ಆನಂತರ ಜೈಷ್ ಉಗ್ರ ಸಂಘಟನೆ ಸೇರಿದಂತೆ ಹಲವು ಮೋಸ್ಟ್ ವಾಂಟೆಡ್ ಉಗ್ರರು ತಮ್ಮ ಕಾರ್ಯಾಚರಣೆಯ ಕ್ಷೇತ್ರವನ್ನಾಗಿ ಮಾಡಿಕೊಂಡಿರುವುದು ಇದೇ ಸ್ಥಳವನ್ನು.
ಇನ್ನು, ಜೈಷ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್’ಗೂ ಸಹ ಇದು ಅತ್ಯಂತ ಪ್ರೀತಿಯ ಸ್ಥಳವಾಗಿದ್ದು, ತನ್ನ ಸದಸ್ಯರಿಗೆ ತರಬೇತಿ ನೀಡುವುದು, ಜಗತ್ತನ್ನು ಹಾಳು ಮಾಡುವ ಕುತಂತ್ರವನ್ನು ರೂಪಿಸುವುದು ಬಹುತೇಕ ಇಲ್ಲಿಯೇ. ಆತ ನಿರಂತರವಾಗಿ ಇಲ್ಲಿ ಇರುವುದಿಲ್ಲ ಎಂದಾದರೂ ನಿಯಮಿತವಾಗಿ ಈ ಸ್ಥಳಕ್ಕೆ ಭೇಟಿ ನೀಡುತ್ತಲೇ ಇರುತ್ತಾನೆ. ಐಸಿ -814 ಹೈಜಾಕಿಂಗ್ ಸಂಚಿಕೆಯ ನಂತರ ಜೆಎಂನ ತರಬೇತಿ ಕೇಂದ್ರವನ್ನು ಅಝರ್ ಸ್ಥಾಪಿಸಿದ.
ಬಾಲ್ಕೋಟ’ನಲ್ಲಿ ಜಿಹಾದಿ ಭಯೋತ್ಪಾದಕರು ತರಬೇತಿ ಪಡೆದ ಜೆಎಂನಿಂದ ಹಲವಾರು ಭಯೋತ್ಪಾದಕ ದಾಳಿಗಳು ನಡೆಸಿವೆ. ಜಮ್ಮು ಮತ್ತು ಕಾಶ್ಮೀರ ರಾಜ್ಯ ಶಾಸಕಾಂಗ ಸಭೆಯಲ್ಲಿ ನಡೆದ 2001 ರ ಭಯೋತ್ಪಾದನಾ ದಾಳಿಯಂತಹ ಪಾಕಿಸ್ತಾನಿ ಭಯೋತ್ಪಾದಕರ ಪ್ರಮುಖ ದಾಳಿಗಳಲ್ಲಿ ಒಂದು.
ಪಠಾಣ್’ಕೋಟ್ ಭಯೋತ್ಪಾದನಾ ದಾಳಿಯ ಐಎನ್’ಎ ತನಿಖೆಯ ಸಂದರ್ಭದಲ್ಲಿ, ಮೊಘಲ್ ಮತ್ತು ಮೌಲ್ವಿಯಾ ಅವರು ಅಝರ್ ಮತ್ತು ರೌಫ್ ಅಸ್ಗರ್ ಅವರ ಧ್ವನಿಗಳನ್ನು ಗುರುತಿಸಲು ತನಿಖಾ ಸಂಸ್ಥೆಗೆ ಸಹಾಯ ಮಾಡಿದ್ದರು. ಇದಲ್ಲದೆ, ಉತ್ತರ ಕಾಶ್ಮೀರದಲ್ಲಿ 2016 ರಲ್ಲಿ ಪಾಕಿಸ್ಥಾನಿ ಭಯೋತ್ಪಾದಕನನ್ನು ಬಂಧಿಸಲಾಯಿತು. ಆದ್ದರಿಂದ, ಬಾಲ್ಕೋಟ್ ಜಿಹಾದಿ ಭಯೋತ್ಪಾದನೆಯ ಸಂತಾನೋತ್ಪತ್ತಿಯ ಪ್ರದೇಶ ಎಂದು ಸ್ಪಷ್ಟವಾಗಿದೆ. ಭಾರತದ ಗಡಿ ದಾಳಿಯ ಭಯೋತ್ಪಾದಕ ದಾಳಿಯನ್ನು ನಡೆಸಲು ತರಬೇತಿ ಕೇಂದ್ರವನ್ನು ಸಕ್ರಿಯವಾಗಿ ಬಳಸಲಾಗುತ್ತದೆ.
ಇನ್ನು, ಪುಲ್ವಾಮಾ ದಾಳಿಗೆ ಭಾರತ ತನ್ನ ಲಾಂಚ್ ಪ್ಯಾಡ್’ಗಳನ್ನು ನಾಶಪಡಿಸಬಹುದು ಎಂಬ ಆತಂಕ ಪಾಕಿಸ್ಥಾನಕ್ಕೆ ಕಾಡುತ್ತಿತ್ತು. ಹೀಗಾಗಿ, ಪುಲ್ವಾಮಾ ಭಯೋತ್ಪಾದನಾ ದಾಳಿಯ ನಂತರ ಪಾಕಿಸ್ಥಾನ ತನ್ನ ಭಯೋತ್ಪಾದಕ ಉಡಾವಣೆಯ ಸ್ಥಳಗಳನ್ನು ಎಲ್’ಒಸಿ ಬಳಿ ಬಾಲ್ಕೋಟ್’ಗೆ ಸಮೀಪದಲ್ಲಿ ಸ್ಥಳಾಂತರಿಸಿದೆ ಎಂದು ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಬುದ್ದಿವಂತಿಕೆ ಉಪಯೋಗಿಸಿದ ಭಾರತ ಬಾಲ್ಕೋಟ್ ನೆಲೆಗಳ ಮೇಲೆ ದಾಳಿ ನಡೆಸಿದರೆ ಉಗ್ರರ ಅಡಗುತಾಣಗಳನ್ನೂ ನಾಶ ಮಾಡಬಹುದು, ಪಾಪಿ ಪಾಕಿಸ್ಥಾನದ ಲಾಂಚ್ ಪ್ಯಾಡ್’ಗಳನ್ನು ಹೊಡೆದುರುಳಿದಂತಾಗುತ್ತದೆ ಎಂದು ಯೋಚಿಸಿ, ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಹೊಡೆಯುವಲ್ಲಿ ಈ ಪ್ರದೇಶವನ್ನೆ ಆಯ್ಕೆ ಮಾಡಿಕೊಂಡಿದೆ.
ಅಲ್ಲದೇ, ಹಿಜ್ಬುಲ್ ಉಗ್ರ ಸಂಘಟನೆಯ ಮುಖಂಡರು ಹಾಗೂ ಸದಸ್ಯರೂ ಸಹ ಇಲ್ಲಿಯೇ ತಮ್ಮ ನೆಲೆಗಳನ್ನು ಸ್ಥಾಪಿಸಿದ್ದಾರೆ. ಅಂತೆಯೇ, ಈ ಎಲ್ಲಾ ಉಗ್ರರಿಗೆ ಸಹಕಾರ ಹಾಗೂ ಭದ್ರತೆ ನೀಡುವ ಪಾಕಿಸ್ಥಾನ ಸೇನೆಯ ಒಂದಷ್ಟು ತಂಡ ಇಲ್ಲಿಂದ ಕೊಂಚ ದೂರದಲ್ಲೇ ತನ್ನ ಕ್ಯಾಂಪ್ ಹೊಂದಿದೆ.
ಪ್ರಮುಖವಾಗಿ ಪುಲ್ವಾಮಾ ದಾಳಿ ನಡೆಸಿದ್ದು ಜೈಷ್ ಉಗ್ರ ಸಂಘಟನೆ. ಇದರ ಬೃಹತ್ ನೆಲೆ ಇರುವುದೂ ಸಹ ಇಲ್ಲೇ. ಹೀಗಾಗಿ, ಭಾರತ ಇಂದಿನ ತನ್ನ ದಾಳಿಗೆ ಬಾಲ್ಕೋಟನ್ನೇ ಪ್ರಮುಖ ಗುರಿಯನ್ನಾಗಿಸಿಕೊಂಡಿತ್ತು.
ಇದರ ಹೊರತಾಗಿ ಉಗ್ರರು ಹೆಚ್ಚು ಚಟುವಟಿಕೆಯನ್ನು ಹೊಂದಿರುವ ಚಕೋಟಿ ಹಾಗೂ ಮುಜಾಫರಾಬಾದ್’ಗಳಲ್ಲೂ ಸಹ ಜೈಷ್ ಉಗ್ರ ಸಂಘಟನೆಯ ಪಾಪದ ಪಿಂಡವಿದೆ. ಈ ಹಿನ್ನೆಲೆಯಲ್ಲಿ ಬಾಲ್ಕೋಟನ್ನು ಪ್ರಮುಖ ಗುರಿಯನ್ನಾಗಿಸಿಕೊಂಡ ಭಾರತೀಯ ವಾಯುಸೇನೆ ಈ ಮೂರು ಸ್ಥಳಗಳ ಮೇಲೆ ದಾಳಿ ನಡೆಸಿ 245 ಉಗ್ರರನ್ನು ಬಲಿ ಹಾಕುವಲ್ಲಿ ಯಶಸ್ವಿಯಾಗಿದೆ.
Discussion about this post