ಸಿಯೋಲ್: ಪುಲ್ವಾಮಾ ದಾಳಿಯ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಪಾಕ್ ವಿರುದ್ಧ ಆಕ್ರೊಶ ಭುಗಿಲೆದ್ದಿರುವಂತೆಯೇ, ದೇಶವಾಸಿಗಳಲ್ಲಿ ದೇಶಪ್ರೆಮವೂ ಸಹ ಜಾಗೃತಿಯಾಗಿದ್ದು, ಎಲ್ಲೆಲ್ಲೂ ಭಾರತ್ ಮಾತಾ ಕಿ ಜೈ ಘೋಷಣೆಗಳು ಕೇಳ ಬರುತ್ತಿವೆ. ಅಂತೆಯೇ, ನಿನ್ನೆ ತಡರಾತ್ರಿ ದಕ್ಷಿಣ ಕೊರಿಯಾದ ಸಿಯೋಲ್’ನಲ್ಲೂ ಸಹ ಇದೇ ಘೋಷಣೆ ಮೊಳಗಿತ್ತು. ಯಾಕೆ ಗೊತ್ತಾ? ಮುಂದೆ ಓದಿ.
ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಅಧಿಕೃತ ಭೇಟಿಯಾಗಿ ದಕ್ಷಿಣ ಕೊರಿಯಾಗೆ ತೆರಳಿದ್ದಾರೆ. ಇಲ್ಲಿನ ರಾಜಧಾನಿ ಸಿಯೋಲ್’ನ ಲೊಟ್ಟೆ ಎಂಬ ಹೊಟೇಲ್’ವೊಂದರಲ್ಲಿ ಮೋದಿಯವರಿಗೆ ತಂಗುವ ವ್ಯವಸ್ಥೆಯನ್ನು ಮಾಡಲಾಗಿದೆ.
South Korea: Prime Minister Narendra Modi greets members of the Indian community at Lotte Hotel in Seoul. He is on a two-day visit to the country. pic.twitter.com/g2u1cYZWGV
— ANI (@ANI) February 21, 2019
ನಿನ್ನೆ ತಡರಾತ್ರಿ(ಭಾರತೀಯ ಕಾಲಮಾನ) ಪ್ರಧಾನಿ ಮೋದಿಯವರನ್ನು ಕಂಡು ಅಭಿನಂದಿಸಲು ನೂರಾರು ಸಂಖ್ಯೆಯಲ್ಲಿ ಅನಿವಾಸಿ ಭಾರತೀಯರು ಹೊಟೇಲ್ ಬಳಿ ಜಮಾಯಿಸಿದ್ದರು. ಇವರನ್ನೆಲ್ಲಾ ಕಂಡು ಮಾತನಾಡಿಸುವ ಸಲುವಾಗಿ ಮೋದಿಯವರು ಆಗಮಿಸಿದ ವೇಳೆ ಸಂಭ್ರಮಗೊಂಡ ಜನರು ಭಾರತ್ ಮಾತಾ ಕೀ ಕೈ, ಹರ ಹರ ಮಹಾದೇವ್, ವಂದೇ ಮಾತರಂ, ಮೋದಿ ಮೋದಿ ಮೋದಿ ಎಂಬ ಘೋಷಣೆಯನ್ನು ಕೂಗಿದರು.
ಹಿಂದಿನ ದಿನಗಳಲ್ಲಿ ವಿದೇಶಗಳಿಗೆ ಮೋದಿ ಭೇಟಿ ನೀಡಿ ಅನಿವಾಸಿ ಭಾರತೀಯರನ್ನು ಭೇಟಿಯಾದ ವೇಳೆ ಸಾಮಾನ್ಯವಾಗಿ ಮೋದಿ ಮೋದಿ ಮೋದಿ ಎಂಬ ಘೋಷಣೆ ಕೂಗುತ್ತಿದ್ದರು. ಆದರೆ, ಪುಲ್ವಾಮಾ ದಾಳಿಯಾದ ನಂತರ ಇಡಿಯ ಭಾರತ ಮಾತ್ರವಲ್ಲ, ವಿದೇಶದಲ್ಲಿರುವ ಅನಿವಾಸಿ ಭಾರತೀಯರಲ್ಲೂ ಸಹ ದೇಶಭಕ್ತಿ ಜಾಗೃತವಾಗಿದೆ. ಹೀಗಾಗಿ, ಭಾರತ್ ಮಾತಾ ಕೀ ಕೈ, ಹರ ಹರ ಮಹಾದೇವ್, ವಂದೇ ಮಾತರಂ, ಮೋದಿ ಮೋದಿ ಮೋದಿ ಘೋಷಣೆಗಳನ್ನು ಕೂಗುವ ಮೂಲಕ ದೇಶಭಕ್ತಿಯನ್ನು ಪ್ರದರ್ಶಿಸಿದ್ದಾರೆ.
ವೀಡಿಯೋ ನೋಡಿ:
#WATCH South Korea: Prime Minister Narendra Modi greets members of the Indian community at Lotte Hotel in Seoul. He is on a two-day visit to the country. pic.twitter.com/qTUCUEq7tc
— ANI (@ANI) February 21, 2019
Discussion about this post