No Result
View All Result
ಒಂದು ವರ್ಷ ಪೂರ್ಣಗೊಳಿಸಿದ ಹೆಣ್ಣೂರು ಸ್ಪರ್ಶ್ ಆಸ್ಪತ್ರೆ | ಮಲ್ಟಿಸ್ಪೆಷಾಲಿಟಿ ಆರೈಕೆಯ ಪ್ರತಿಬಿಂಬ
English Articles

Hennur Sparsh Hospital Completes One Year | A Reflection of Multispecialty Care

by ಕಲ್ಪ ನ್ಯೂಸ್
May 25, 2026
0

Kalpa Media House  |  Bengaluru  | SPARSH Hospital, Hennur Road has completed one year of operations, with its first-year clinical...

Read moreDetails
ಸ್ಯಾಂಡಲ್ವುಡ್ ಸಲಗ-ರಚಿತಾ ರಾಮ್ ನಟಿಸಿರುವ ‘ಲ್ಯಾಂಡ್ ಲಾರ್ಡ್’ ಇದೇ ಶನಿವಾರ ಜೀ ಕನ್ನಡದಲ್ಲಿ

Duniya Vijay, Rachita Ram & Raj B. Shetty’s Landlord Premieres This Saturday on Zee Kannada

May 22, 2026
ನೇಮಕಾತಿ ಪ್ರಕ್ರಿಯೆ ಕಠಿಣ | ತೆರೆಮರೆಯ ಪ್ರತಿಭೆಗಳನ್ನು ಹುಡುಕಲು ಎಐ ಮೊರೆ: ಲಿಂಕ್ಡ್‌ ಇನ್

LinkedIn shares Bengaluru’s Top Companies for career growth in 2026

May 20, 2026
GE Aerospace to Invest ₹100 Crore in Pune Facility, Boosting India Manufacturing

GE Aerospace to Invest ₹100 Crore in Pune Facility, Boosting India Manufacturing

May 20, 2026
Marriott Bonvoy Expands ICC Partnership to Include Women’s T20 World Cup 2026

Marriott Bonvoy Expands ICC Partnership to Include Women’s T20 World Cup 2026

May 19, 2026
  • Advertise With Us
  • Grievances
  • About Us
  • Contact Us
Monday, June 1, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಪ್ರತೀಕಾರಕ್ಕೆ ಮೋದಿ ಸರ್ಕಾರ 11 ದಿನ ಕಾದಿದ್ದು ಯಾತಕ್ಕಾಗಿ ಗೊತ್ತಾ?

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
February 26, 2019
in Special Articles
0
ಪ್ರತೀಕಾರಕ್ಕೆ ಮೋದಿ ಸರ್ಕಾರ 11 ದಿನ ಕಾದಿದ್ದು ಯಾತಕ್ಕಾಗಿ ಗೊತ್ತಾ?
Share on FacebookShare on TwitterShare on WhatsApp

ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಪಾಕಿಸ್ಥಾನದ ಜೈಷ್ ಉಗ್ರರು ದಾಳಿ ನಡೆಸಿ ನಮ್ಮ 42 ಯೋಧರನ್ನು ಬಲಿ ಪಡೆದ 11 ದಿನಗಳ ನಂತರ ಪ್ರತೀಕಾರ ತೆಗೆದುಕೊಂಡಿರುವ ಭಾರತ, ಸುಮಾರು 300ಕ್ಕೂ ಅಧಿಕ ಉಗ್ರರನ್ನು ವಾಯು ದಾಳಿ ನಡೆಸಿ ನಾಶ ಮಾಡಿದೆ.

ಪುಲ್ವಾಮಾ ದಾಳಿ ಹಿನ್ನೆಲೆಯಲ್ಲಿ ಅತ್ಯಂತ ವ್ಯವಸ್ಥಿತತವಾಗಿ ಯೋಜನೆ ರೂಪಿಸಿ, ಇಂದು ನಸುಕಿನಲ್ಲಿ ಎಲ್’ಒಸಿಯಲ್ಲಿರುವ ಜೈಷ್ ಉಗ್ರರ ಕ್ಯಾಂಪ್’ಗಳ ಮೇಲೆ ಯಶಸ್ವಿಯಾಗಿ ದಾಳಿ ನಡೆಸಿರುವ ವಾಯು ಸೇನೆ 21 ನಿಮಿಷಗಳಲ್ಲಿ 300ಕ್ಕೂ ಅಧಿಕ ಉಗ್ರರನ್ನು ಹತ್ಯೆ ಮಾಡಿದೆ. ಅತ್ಯಂತ ವ್ಯವಸ್ಥಿತವಾಗಿ ದಾಳಿ ಯೋಜನೆ ರೂಪಿಸಿದ್ದ ಭಾರತ 21 ನಿಮಿಷಗಳಲ್ಲಿ ದಾಳಿಯನ್ನು ಮುಕ್ತಾಯಗೊಳಿಸಿದ್ದು, ಇದಕ್ಕಾಗಿ 12 ಮಿರಾಜ್ ಯುದ್ದ ವಿಮಾನಗಳನ್ನು ಬಳಕೆ ಮಾಡಿಕೊಂಡಿದೆ. ಭಾರತೀಯ ಪಡೆಗಳು ನಡೆಸಿದ ವಾಯು ದಾಳಿಗೆ ಬಲಾಕೋಟ್’ನ ಮೂರು ಭಾಗಗಳು ಸರ್ವನಾಶವಾಗಿದ್ದು, ನಸುಕಿನ 3.48ಕ್ಕೆ ಈ ಬೆಳವಣಿಗೆ ನಡೆದಿದೆ.

ಪುಲ್ವಾಮಾದಲ್ಲಿ ಉಗ್ರರ ದಾಳಿ ನಡೆದು 42 ಯೋಧರು ವೀರಸ್ವರ್ಗ ಸೇರಿದ ಘಟನೆಯ ನಂತರ ಯಾವುದೇ ಸೇನಾ ದಾಳಿ ನಡೆಸದ ಮೋದಿ ಸರ್ಕಾರದ ವಿರುದ್ಧ ನಾಯಿ ನರಿಗಳೆಲ್ಲಾ ಬಾಯಿಗೆ ಬಂದಂತೆ ಮಾತನಾಡಿದ್ದವು.

ಜನ ಸಾಮಾನ್ಯರು ಮಾತನಾಡುವಂತೆ ಅಥವಾ ಪ್ರತಿಪಕ್ಷಗಳು ರಾಜಕೀಯ ಮಾತನಾಡುವಂತೆ ಪುಲ್ವಾಮಾ ದಾಳಿ ನಡೆದಾಕ್ಷಣ ಒಂದು ಜವಾಬ್ದಾರಿಯ ಕೇಂದ್ರ ಸರ್ಕಾರ ಏಕಾಏಕಿ ಬೀದಿ ರೌಡಿ ರೀತಿಯಲ್ಲಿ ಮುಗಿಬೀಳಲು ಸಾಧ್ಯವಿಲ್ಲ.

ಒಂದು ಬೃಹತ್ ದೇಶ ಶತ್ರು ರಾಷ್ಟçದ ಮೇಲೆ ಇಂತಹ ಒಂದು ದಾಳಿ ನಡೆಸುತ್ತದೆ ಎಂದರೆ ಅದಕ್ಕೆ ಅದರದ್ದೆ ಆದ ಒಂದು ವ್ಯವಸ್ಥಿತ ಸಿದ್ದತೆ ಅಗತ್ಯವಿರುತ್ತದೆ.

ಪುಲ್ವಾಮಾ ದಾಳಿ ನಡೆದ ನಂತರ ಮೋದಿ ಸರ್ಕಾರ ಹಾಗೂ ಸೇನಾ ಪಡೆಗಳು ಮಾಡಿದ ಮೊಟ್ಟ ಮೊದಲ ಕೆಲಸವೆಂದರೆ ಎಲ್ಲ ಭಾಗದಲ್ಲಿರುವ ಗಡಿಯನ್ನು ಬಿಗಿಗೊಳಿಸುವ ಜೊತೆಯಲ್ಲಿ, ವಾಯಪಡೆ ಹಾಗೂ ನೌಕಾಪಡೆಗಳ ಭದ್ರತೆಯನ್ನು ಬಿಗಿಗೊಳಿಸಿದ್ದು.


ಇದಾದ ನಂತರ, ಭಾರತೀಯ ಸೇನೆ, ಗೃಹ ಸಚಿವಾಲಯ ಹಾಗೂ ರಕ್ಷಣಾ ಇಲಾಖೆಗಳು ಪ್ರಧಾನಿಯವರೊಂದಿಗೆ ನಿರಂತರವಾಗಿ ಸಭೆ ನಡೆಸಿ, ಪ್ರತಿದಾಳಿ ಹೇಗಿರಬೇಕು ಎಂಬ ರೂಪುರೇಷೆ ಸಿದ್ದಪಡಿಸಿವೆ. ಇದಕ್ಕೂ ಮೊದಲಾಗಿ, ಗುಪ್ತಚರ ಇಲಾಖೆ, ಸೇನಾ ಗುಪ್ತಚರ ಇಲಾಖೆ, ಸ್ಯಾಟಲೈಟ್’ಗಳನ್ನು ಬಳಕೆ ಮಾಡಿಕೊಂಡು, ಉಗ್ರರ ಅಡಗುತಾಣಗಳ ಕುರಿತಾಗಿ ಇಂಚಿಂಚೂ ಮಾಹಿತಿ ಕಲೆ ಹಾಕಲಾಗಿದೆ.

ಇದೇ ವೇಳೆ ಅತ್ಯಂತ ಪ್ರಮುಖ ಬೆಳವಣಿಗೆ ಎಂದರೆ, ಒಂದು ವೇಳೆ ನಾವೇನಾದರೂ ಉಗ್ರರ ವಿರುದ್ಧ ದಾಳಿ ನಡೆಸಿದರೆ ಅದಕ್ಕೆ ಪ್ರತಿಯಾಗಿ ಪಾಕ್ ಸರ್ಕಾರ ಹಾಗೂ ಉಗ್ರರು ಭಾರತದ ಮೇಲೂ ಸಹ ದಾಳಿ ನಡೆಸುವ ಎಲ್ಲ ಸಾಧ್ಯತೆಗಳೂ ಇವೆ. ಹೀಗಾಗಿ, ದೇಶದ ಭದ್ರತೆಯ ದೃಷ್ಠಿಯಿಂದ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಸೇನೆ ಮಾಡಿಕೊಂಡಿತ್ತು.

ಇದಕ್ಕಾಗಿ ಪ್ರಮುಖವಾಗಿ ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿಯಲ್ಲಿ ಕಳೆದ ಎಂಟು ದಿನಗಳಿಂದಲೇ ಅತ್ಯಂತ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು.

ಒಂದು ವೇಳೆ ಭಾರತ ದಾಳಿ ನಡೆಸಿದರೆ, ಕಾಶ್ಮೀರದ ಒಳಗೆ ಅಡಗಿರಬಹುದಾದ ಉಗ್ರರು ಹಾಗೂ ಉಗ್ರರ ಬೆಂಬಲಿಗ ಸ್ಥಳೀಯರು ದೇಶದ ಒಳಗೆ ಅನಾಹುತ ಸೃಷ್ಠಿಸಬಹುದು. ಇದನ್ನರಿತ ಕೇಂದ್ರ ಸರ್ಕಾರ ಸೇನೆ ಹಾಗೂ ಕಾಶ್ಮೀರ ಪೊಲೀಸರಿಗೆ ಸ್ವತಂತ್ರ ನೀಡಿ, ಕಲ್ಲುತೂರಾಟಗಾರರನ್ನು ಹತ್ತಿಕ್ಕಲು, ಅಗತ್ಯಬಿದ್ದರೆ ಗುಂಡಿಕ್ಕಿ ಕೊಲ್ಲಲು ಆದೇಶ ನೀಡಿತ್ತು.

ಇದರ ಬೆನ್ನಲ್ಲೆ, ಮೂರು ದಿನಗಳ ಹಿಂದೆ ಅಂದರೆ ಫೆ.23ರಂದು ಜಮ್ಮು ಕಾಶ್ಮೀರದಲ್ಲಿ ಭದ್ರತೆಯನ್ನು ಬಿಗಿಗೊಳಿಸಿದ್ದ ಕೇಂದ್ರ ಸರ್ಕಾರ ಇದಕ್ಕಾಗಿ ಹೆಚ್ಚುವರಿಯಾಗಿ ಪ್ಯಾರಾ ಮಿಲಿಟರಿಯ 100ಕ್ಕೂ ಅಧಿಕ ಭಾರೀ ಪಡೆಗಳನ್ನು ನಿಯೋಜನೆ ಮಾಡಿದ್ದು ಗಮನಿಸಬೇಕಾದ ಅಂಶ.

ಇನ್ನು, ಗಡಿ ಪ್ರದೇಶದಲ್ಲಿ ವಾಸವಾಗಿರುವ ಬಹುತೇಕ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಿರುವ ಸೇನೆ, ಯಾವುದೇ ನಾಗರಿಕರ ಪ್ರಾಣಹಾನಿಯಾಗದಂತೆ ಮುಂಜಾಗ್ರತಾ ಕ್ರಮಕೈಗೊಂಡಿದೆ.

ಇದರ ಜೊತೆಯಲ್ಲಿ ಸೇನೆ, ವಾಯುಪಡೆ ಹಾಗೂ ನೌಕಾಪಡೆಗಳಲ್ಲಿ ಅನಧಿಕೃತವಾಗಿ ಹೈ ಅಲರ್ಟ್ ಘೋಷಣೆ ಮಾಡಿದ್ದ ಕೇಂದ್ರ ಸರ್ಕಾರ ಎಂತಹುದ್ದೆ ಸಂದರ್ಭಗಳನ್ನು ಎದುರಿಸಲು ಸನ್ನದ್ಧವಾಗಿಸಿಕೊಂಡಿದೆ.

ವಿಂಗ್ ಕಮಾಂಡರ್ ಭಕ್ಷಿ ಅವರ ಹೇಳಿಕೆಯಂತೆ ಭಾರತದ ಇಂದಿನ ದಾಳಿಯಿಂದ ಒಂದು ವೇಳೆ ಪಾಕ್ ಸೇನೆ ಅಥವಾ ಉಗ್ರರು ಪ್ರತಿದಾಳಿ ನಡೆಸಿದರೆ ಅದನ್ನು ಎದುರಿಸಲು ಅಗತ್ಯವಾಗಿರುವ ಎಲ್ಲ ರೀತಿಯ ಭದ್ರತಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.

ಉಗ್ರರಿಗೆ ಸಹಕಾರ ನೀಡುತ್ತಿರುವ ಒಂದು ಪರಮಾಣು ಬಾಂಬ್ ಹೊಂದಿರುವ ರಾಷ್ಟದ ವಿರುದ್ಧ ದಾಳಿ ನಡೆಸಬೇಕು ಎಂದರೆ, ಶತ್ರುಗಳೂ ಸಹ ನಮ್ಮ ಮೇಲೆ ಪ್ರತಿದಾಳಿ ನಡೆಸುವ ಎಲ್ಲ ಸಾಧ್ಯತೆ, ಅದರ ಪರಿಣಾಮಗಳು ಹಾಗೂ ಅದನ್ನು ಎದುರಿಸಲೂ ಅಥವಾ ಹತ್ತಿಕ್ಕಲು ಅಗತ್ಯವಾಗಿರುವ ಸಕಲ ಸಿದ್ದತೆಯನ್ನು ಮಾಡಿಕೊಳ್ಳಬೇಕಾದ್ದು ಸರ್ಕಾರದ ಕರ್ತವ್ಯ.

ಇಂತಹ ವ್ಯವಸ್ಥಿತ ಸಿದ್ದತೆಯನ್ನು ಮಾಡಿಕೊಂಡಿರುವ ಮೋದಿ ಸರ್ಕಾರ ಹಾಗೂ ಭಾರತೀಯ ಸೇನೆ, ಪುಲ್ವಾಮಾ ದಾಳಿ ನಡೆದ 11 ದಿನಗಳ ನಂತರ ಪ್ರತಿದಾಳಿ ನಡೆಸಿ, ಉಗ್ರರನ್ನು ಹೊಡೆದು ಹಾಕುವ ಜೊತೆಯಲ್ಲಿ ನಮ್ಮ ಸೇನೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಂಡಿರುವುದು ಹೆಮ್ಮೆಯ ಸಂಗತಿ..

Tags: India_Attack_on_LoCIndian_Air_ForceindianarmyIndiastrikesbackKalpa NewsKannadaNewsLoCPulwama terror attackPulwama_terror_attackಮಿರಾಜ್_ವಿಮಾನವಾಯು_ಸೇನೆ
Share197Tweet123Send
Previous Post

Video: ಭಾರತೀಯ ಸೇನೆ ದಾಳಿಗೆ ನೂರಾರು ಪ್ರಮುಖ ಉಗ್ರರು ಮಟಾಷ್: ಕೇಂದ್ರ ಹೇಳಿಕೆ

Next Post

ಕಥೆ ನಿರ್ಮಲಾ, ಚಿತ್ರಕಥೆ ಧೋವಲ್, ನಿರ್ದೇಶನ ಮೋದಿ & ಆಕ್ಷನ್- ದಿ ಇಂಡಿಯನ್ ಆರ್ಮಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಕಥೆ ನಿರ್ಮಲಾ, ಚಿತ್ರಕಥೆ ಧೋವಲ್, ನಿರ್ದೇಶನ ಮೋದಿ & ಆಕ್ಷನ್- ದಿ ಇಂಡಿಯನ್ ಆರ್ಮಿ

ಕಥೆ ನಿರ್ಮಲಾ, ಚಿತ್ರಕಥೆ ಧೋವಲ್, ನಿರ್ದೇಶನ ಮೋದಿ & ಆಕ್ಷನ್- ದಿ ಇಂಡಿಯನ್ ಆರ್ಮಿ

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಬಸ್ಸು – ಬೈಕ್‌ ನಡುವೆ ಡಿಕ್ಕಿ, ಭೀಕರ ಅಪಘಾತದಲ್ಲಿ ಓರ್ವ ಸಾವು

ಬಸ್ಸು – ಬೈಕ್‌ ನಡುವೆ ಡಿಕ್ಕಿ, ಭೀಕರ ಅಪಘಾತದಲ್ಲಿ ಓರ್ವ ಸಾವು

June 1, 2026
ಶಿವಮೊಗ್ಗದಲ್ಲಿ ರಾತ್ರಿ ಪೊಲೀಸರಿಂದ ಲಾಠಿ ಚಾರ್ಜ್

ಶಿವಮೊಗ್ಗದಲ್ಲಿ ರಾತ್ರಿ ಪೊಲೀಸರಿಂದ ಲಾಠಿ ಚಾರ್ಜ್

June 1, 2026
ದಾಸ ಸಾಹಿತ್ಯದ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆಯಲಿ: ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ

ದಾಸ ಸಾಹಿತ್ಯದ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆಯಲಿ: ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ

June 1, 2026
ಬಂದೂಕಿನಿಂದ ಗುಂಡು ಹಾರಿಸಿಕೊಂಡು ವ್ಯಕ್ತಿ ಸಾವು

ಬಂದೂಕಿನಿಂದ ಗುಂಡು ಹಾರಿಸಿಕೊಂಡು ವ್ಯಕ್ತಿ ಸಾವು

June 1, 2026
ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕ ಸ್ನೇಹಿ ಸೌಲಭ್ಯ ಇಲಾಖೆಯ ಪ್ರಮುಖ ಧ್ಯೇಯ: ಬೇಲಾ ಮೀನಾ

ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕ ಸ್ನೇಹಿ ಸೌಲಭ್ಯ ಇಲಾಖೆಯ ಪ್ರಮುಖ ಧ್ಯೇಯ: ಬೇಲಾ ಮೀನಾ

May 28, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL