ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ರೌಡಿ ಶೀಟರ್ ಮಾರ್ಕೆಟ್ ಲೋಕಿ ಪ್ರಕರಣದಲ್ಲಿ ಬಂಧಿತನಾಗಿದ್ದ ರೌಡಿ ಸೈನಾದಿ ಲಕ್ಷ್ಮಣ ಮೇಲೆ ಪೊಲೀಸರು ಫೈರಿಂಗ್ ನಡೆಸಿರುವ ಘಟನೆ ಇಂದು ಸಂಜೆ ನಡೆದಿದೆ.
ಗಿರಿ ಹತ್ಯೆ ಪ್ರಕರಣದಲ್ಲಿ ಲಕ್ಷ್ಮಣನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿತ್ತು. ಇಂದು ಆತನನ್ನು ಶಿವಮೊಗ್ಗಕ್ಕೆ ಕರೆ ತರುವ ವೇಳೆ ಹರಿಗೆ ಬಳಿಯ ಹಳೆಯ ಶುಗರ್ ಫ್ಯಾಕ್ಟರಿ ಎದುರಿನ ಬಗ್ಗೆ ಬಳಿ ಬಹಿರ್ದೆಸೆಗೆ ತೆರಗಳುವುದಾಗಿ ಕೇಳಿದ್ದಾನೆ. ಇದಕ್ಕಾಗಿ ವಾಹನ ನಿಲ್ಲಿಸಿದ ಪೊಲೀಸರು ಆತನನ್ನು ಮೂತ್ರ ವಿಸರ್ಜನೆಗೆ ಬಿಟ್ಟಿದ್ದಾರೆ. ಆದರೆ, ಈ ವೇಳೆ ಪರಾರಿಯಾಗಲು ಆತ ಯತ್ನಿಸಿದ್ದು, ಹಿಡಿಯಲು ಪೊಲೀಸರು ಯತ್ನಿಸಿದ್ದಾರೆ. ಆದರೆ, ಪೊಲೀಸರ ಮೇಲೆಯೇ ಆಕ್ರಮಣಕ್ಕೆ ಮುಂದಾದ ಹಿನ್ನೆಲೆಯಲ್ಲಿ ವಿಧಿಯಿಲ್ಲದೇ ಆತನ ಕಾಲಿಗೆ ಗುಂಡು ಹಾರಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಸೈಬರ್ ಕ್ರೈಂನ ಸಿಪಿಐ ಕೆ.ಟಿ. ಗುರುರಾಜ್ ಅವರಿಗೆ ಸಣ್ಣ ಪ್ರಮಾಣದಲ್ಲಿ ಗಾಯಗಳಾಗಿದ್ದು, ಮುಖ್ಯಪೇದೆ ಹರ್ಷ ಅವರಿಗೆ ಗಂಭೀರ ಪ್ರಮಾಣದ ಗಾಯಗಳಾಗಿವೆ ಎಂದು ಹೇಳಲಾಗಿದೆ. ನಿಜಕ್ಕೂ ಪೊಲೀಸರ ಧೈರ್ಯ ಹಾಗೂ ಸಾಹಸ ಪ್ರಶಂಸನೀಯವಾದುದು.
ಘಟನೆ ನಡೆದ ಪ್ರದೇಶದಲ್ಲಿ ಸಾವಿರಾರು ಸಂಖ್ಯೆಯನ್ನು ಜನರು ನೆರೆದಿದ್ದು, ಇವರನ್ನು ನಿಯಂತ್ರಿಸುವುದೇ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು. ಅಲ್ಲದೇ, ವಾಹನ ಸಂಚಾರಕ್ಕೂ ಸಹ ಕೆಲಕಾಲ ತೊಂದರೆಯಾಗಿತ್ತು.
ಇನ್ನು, ಮ್ಯಾಕ್ಸ್ ಆಸ್ಪತ್ರೆಗೆ ಸೈನಾದಿಯನ್ನು ದಾಖಲಿಸಿ ಎಂಆರ್’ಐ, ಎಕ್ಸ್’ರೇ ಪರೀಕ್ಷೆ ಮಾಡಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಈ ವೇಳೆ ಮಾಧ್ಯಮದವರನ್ನು ಕಂಡ ಕೂಡಲೇ ಮಾತನಾಡಿದ ಆತ, ಪೊಲೀಸರು ನನ್ನ ತಲೆಗೇ ಗುಂಡಿಟ್ಟಿದ್ದಾರೆ ಎಂದುಕೊಂಡಿದ್ದೆ. ಆದರೆ, ನನ್ನ ಕಾಲಿಗೆ ಹೊಡೆದಿದ್ದಾರೆ. ನಾನು ನನ್ನ ಅಣ್ಣನಿಗಾಗಿ ದುನಿಯಾ ಮಾಡಲು ಸಿದ್ದನಿದ್ದೇನೆ ಎಂದು ಗರ್ವದ ಮಾತನಾಡಿದ್ದಾನೆ.
Get in Touch With Us info@kalpa.news Whatsapp: 9481252093
Discussion about this post