ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಭಾರೀ ವಿವಾದ ಸೃಷ್ಠಿಸಿರುವ ಡ್ರಗ್ಸ್ ವಿಚಾರ ಇಂದು ಭಾರೀ ಚರ್ಚೆಯಾಗಿರುವ ಬೆನ್ನಲ್ಲೇ ಚಿತ್ರರಂಗದ ಪರ ಬ್ಯಾಟಿಂಗ್ ಮಾಡಿರುವ ನವರಸ ನಾಯಕ ಜಗ್ಗೇಶ್, ಕೆಲವು ತಲೆಮಾಸಿದವರ ತಪ್ಪಿಗೆ ಇಡೀ ಚಿತ್ರರಂಗ ಎನ್ನಬೇಡಿ, ಪ್ರಾಮಾಣಿಕರು ನೊಂದಿದ್ದಾರೆ ಎಂದು ಮಾಧ್ಯಮಗಳಿಗೆ ಕಿವಿ ಮಾತು ಹೇಳಿದ್ದಾರೆ.
ಈ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ಅವರು, ನಾನು ನಟನಾಗಿ ಅಲ್ಲ ಒಬ್ಬ ತಂದೆಸ್ಥಾನದಲ್ಲಿ ನಿಂತು ನನ್ನ ಕಲಾಬಂಧುಗಳಿಗೆ ಹೇಳುವುದೊಂದೆ ನೀವು ಚೆನ್ನಾಗಿದ್ದರೆ ಮಾತ್ರ ದುನಿಯ be careful!
ನಾನು ನಟನಾಗಿ ಅಲ್ಲ ಒಬ್ಬ ತಂದೆಸ್ಥಾನದಲ್ಲಿ ನಿಂತು ನನ್ನ ಕಲಾಬಂಧುಗಳಿಗೆ ಹೇಳುವುದೊಂದೆ ನೀವು ಚನ್ನಾಗಿದ್ದೀರ ಮಾತ್ರ ದುನಿಯ be careful!
ಯಾರೊ ಕೆಲ ತಲೆಮಾಸಿದವರ ತಪ್ಪಿಗೆ ಇಡಿಚಿತ್ರರಂಗ ಎನ್ನಬೇಡಿ #ಮಾಧ್ಯಮಮಿತ್ರರೆ!ಹಾದಿ ತಪ್ಪಿದವರ ಬಹಿರಂಗಪಡಿಸಿ ಬುದ್ಧಿಕಲಿಸಿ!ಕೆಲವರ ತಪ್ಪಿಗೆ ಚಿತ್ರರಂಗದ ಪ್ರಾಮಾಣಿಕ ಕಲಾವಿದರು ನೊಂದಿದ್ದಾರೆ!ವಿನಂತಿ🙏— ನವರಸನಾಯಕ ಜಗ್ಗೇಶ್ (@Jaggesh2) August 30, 2020
ಯಾರೊ ಕೆಲ ತಲೆಮಾಸಿದವರ ತಪ್ಪಿಗೆ ಇಡಿ ಚಿತ್ರರಂಗ ಎನ್ನಬೇಡಿ ಮಾಧ್ಯಮ ಮಿತ್ರರೆ! ಹಾದಿ ತಪ್ಪಿದವರ ಬಹಿರಂಗಪಡಿಸಿ ಬುದ್ಧಿಕಲಿಸಿ! ಕೆಲವರ ತಪ್ಪಿಗೆ ಚಿತ್ರರಂಗದ ಪ್ರಾಮಾಣಿಕ ಕಲಾವಿದರು ನೊಂದಿದ್ದಾರೆ! ವಿನಂತಿ ಎಂದಿದ್ದಾರೆ.
Sri Huccharaya Swamy Temple, Shikaripura | ಶ್ರೀ ಹುಚ್ಚರಾಯ ಸ್ವಾಮಿ ದೇವಾಲಯ, ಶಿಕಾರಿಪುರ
ದೇವಾಲಯ ಪರಿಚಯ ಕುರಿತಾಗಿ ನಿರಂತರ ಮಾಹಿತಿ ಪಡೆಯಲು ಕಲ್ಪ ಯೂಟ್ಯೂಬ್ ಚಾನಲ್’ಗೆ Free subscribe ಆಗಿ, ಲೈಕ್ ಮಾಡಿ ಹಾಗೂ ಶೇರ್ ಮಾಡಿ
ಇಂದು ಮಾಧ್ಯಮ ಮಿತ್ರರು ಮನೆಯ ಹತ್ತಿರ ಬಂದಿದ್ದರಂತೆ ಕ್ಷಮೆಯಿರಲಿ ನಾನು ಊರಿಗೆ ಹೋಗಿರುವೆ! ನಿಮ್ಮ ಪ್ರೀತಿಗೆ ಧನ್ಯವಾದ! ಇಂದು ಏನೆ ಮಾತಾಡಿದರು ಅದಕ್ಕೆ ನೂರು ತರಹ ಪರವಿರೋಧ ಚರ್ಚೆಯಾಗುತ್ತದೆ! ಯಾಕೆ ಬೇಕು ಉಪ್ಪುತಿಂದವರು ನೀರು ಕುಡಿಯಲಿ! ಬದುಕುವ ಹಟವಿದ್ದವರು ಹಿಮಾಲಯ ಏರುತ್ತಾರೆ! ಬದುಕು ಹಗುರವಾಗಿ ಕಂಡವರು ಸ್ಮಶಾನ ಸೇರುತ್ತಾರೆ! ಅವರವರ ಹಣೆಬರಹ! ಎಂದು ಕಿಡಿ ಕಾರಿದ್ದಾರೆ.
30ಸಿನಿಮ ನಟಿಸಿದರು ನಿರ್ಮಾಪಕ ಮನೆ ಮುಂದೆ ಭಿಕ್ಷುಕರಂತೆ ಸಂಭಾವನೆಗೆ ಕಾದು!
ಕೊಟ್ಟಕ್ಷಣ ರೇಷನ್ ಅಂಗಡಿ ಮುಂದೆ ಅಕ್ಕಿಸೀಮೆಎಣ್ಣೆಗೆ ಕ್ಯೂನಿಂತವರು ನಾವು!ಇಂದು 2ಸಿನಿಮಾಗೆ ಕುಬೇರನ ಮಕ್ಕಳು!
ಹೇಗೆ ಇಂಥcatch ನನಗೆ 57ವರ್ಷಕ್ಕು ಅರ್ಥವಾಗಿಲ್ಲಾ!
ಇದೆ 2015ರಿಂದ ಮೋಜು ಮಸ್ತಿ ಕುಸ್ತಿ ಸಿನಿಮ ಜೀವನ!ಅಂದು ಒಂದು ಮಾತಿಗೆ ಅಳುತ್ತಿದ್ದೆವು ಇಂದು🖕— ನವರಸನಾಯಕ ಜಗ್ಗೇಶ್ (@Jaggesh2) August 30, 2020
30 ಸಿನಿಮಾ ನಟಿಸಿದರು ನಿರ್ಮಾಪಕ ಮನೆ ಮುಂದೆ ಭಿಕ್ಷುಕರಂತೆ ಸಂಭಾವನೆಗೆ ಕಾದು! ಕೊಟ್ಟ ಕ್ಷಣ ರೇಷನ್ ಅಂಗಡಿ ಮುಂದೆ ಅಕ್ಕಿಸೀಮೆ ಎಣ್ಣೆಗೆ ಕ್ಯೂ ನಿಂತವರು ನಾವು! ಇಂದು 2 ಸಿನಿಮಾಗೆ ಕುಬೇರನ ಮಕ್ಕಳು! ಹೇಗೆ ಇಂಥ catch ನನಗೆ 57 ವರ್ಷಕ್ಕು ಅರ್ಥವಾಗಿಲ್ಲಾ. ಇದೇ 2015ರಿಂದ ಮೋಜು ಮಸ್ತಿ ಕುಸ್ತಿ ಸಿನಿಮಾ ಜೀವನ! ಅಂದು ಒಂದು ಮಾತಿಗೆ ಅಳುತ್ತಿದ್ದೆವು ಇಂದು ಎಂದಿದ್ದಾರೆ.
ಅಪ್ಪನಿಗೆ 1981ರಲ್ಲಿ 5,000 ಸಾಲ ಕೇಳಿದಕ್ಕೆ ಸಾರ್ವಜನಿಕವಾಗಿ ಚಪ್ಪಲಿಯಲ್ಲಿ ಹೊಡೆದು ತಾಕತ್ತಿದ್ದರೆ ಹೋಗಿ ದುಡಿ ಎಂದು ಹೊರ ದೂಡಿದ!ಹಟಕ್ಕೆ ಬಿದ್ದು ದುಡಿಮೆಗೆ ಮದ್ರಾಸಿಗೆ ಹೋದೆ! ಅಪಮಾನ ಮಾಡಿ ಅಂದು ಅಪ್ಪ ನನಗೆ ಜೀವನ ಕಲಿಸಿದ! ಇಂದು ಮಕ್ಕಳ ಹಾಗೆ ಬೆಳೆಸುವ ತಂದೆಯು ಇಲ್ಲಾ ತಲೆಮಾರು ಇಲ್ಲ! ಈಗ ಎಲ್ಲ ಕ್ಷೇತ್ರ ಏನಿದ್ದರು ನಾನು ನನ್ನಿಷ್ಟದ ಜೀವನ! ನನ್ನಕನಸು ಅನ್ನ ಜೀವನ ಅಂತ ಬಂದವರ ಕಾಲಮಾನದವ ನಾನು! ಬಣ್ಣ ಹಚ್ಚುವ ಮುನ್ನ ಶಾರದೆ ಸ್ಮರಿಸಿ ಬಣ್ಣಕ್ಕೆ ಮುಖ ಕೊಡುತ್ತಿದ್ದೆವು! ಕಲಾವಿದರು ಅಂತ ಯಾರಾದರು ಕರೆದರೆ ಊಟಕ್ಕೆ ಹೋಗಿ 2 pegಗೆ ಸೀಮಿತವಾಗಿತ್ತು ನಮ್ಮಕಾಲ! ಇಂದು ನಶೆ ಸದ್ದಿನದೆ ಚರ್ಚೆ ಆಗಿಬಿಟ್ಟಿದೆ! ಇದರ ಬಗ್ಗೆ ಮಾತಾಡಿದರೆ ಸಾಕು ಪರವಿರೋಧದ ಅನಿಷ್ಟ ಮನದ ನೆಮ್ಮದಿಗೆ ಭಂಗ! ನಿಮ್ಮ ಹಣೆಬರಹ ಎಂದು ಸಾತ್ವಿಕ ಸಿಟ್ಟನ್ನು ಹೊರಹಾಕಿದ್ದಾರೆ.
Get In Touch With Us info@kalpa.news Whatsapp: 9481252093
Discussion about this post