ಈರೋಡ್: ವರನಟ ದಿವಂಗತ ಡಾ. ರಾಜ್‌ಕುಮಾರ್ ಅವರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ 9 ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.
ಈ ಕುರಿತಂತೆ ಇಂದು ತೀರ್ಪು ನೀಡಿರುವ ಈರೋಡ್ ಜಿಲ್ಲಾ ನ್ಯಾಯಾಲಯ, ಆರೋಪಿಗಳ ವಿರುದ್ಧ ಪೊಲೀಸ್ ಇಲಾಖೆ ಹಾಗೂ ಪ್ರಾಸಿಕ್ಯೂಶನ್ ಸೂಕ್ತ ಸಾಕ್ಷಾಧಾರಗಳನ್ನು ಸಲ್ಲಿಸುವಲ್ಲಿ ಹಾಗೂ ಸಾಬೀತುಪಡಿಸುವಲ್ಲಿ ವಿಫಲವಾಗಿದೆ ಎಂದು, ಆರೋಪಿಗಳನ್ನು ಖುಲಾಸೆಗೊಳಿಸಿದೆ.
2000ರ ಜುಲೈ 30ರಂದು ನರಹಂತಕ ವೀರಪ್ಪನ್ ಹಾಗೂ ತಂಡ ವರನಟ ರಾಜ್ ಕುಮಾರ್ ಅವರನ್ನು ತಮಿಳುನಾಡಿನ ಗಾಜನೂರಿನ ತೋಟದ ಮನೆಯಿಂದ ಅಪಹರಿಸಿತ್ತು. 108 ದಿನಗಳ ನಂತರ ರಾಜ್ ಹಾಗೂ ಇತರರನ್ನು ವೀರಪ್ಪನ್ ಬಿಡುಗಡೆ ಮಾಡಿದ್ದ.
Discussion about this post