ಸದ್ದಿಲ್ಲದೇ ಚಿತ್ರೀಕರಣ ಪೂರೈಸಿರುವ `ಯದಾ ಯದಾ ಹಿ ಧರ್ಮಸ್ಯ’ ವಿರಾಜ್ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನದಲ್ಲಿ ಮೂಡಿ ಬಂದು ಇದೀಗ ತಾಂತ್ರಿಕ ಕೌಶಲ್ಯವನ್ನು ಸಿದ್ದ ಮಾಡಿಕೊಳ್ಳುತ್ತಿದೆ. ಸದ್ಯಕ್ಕೆ ಡಿ ಟಿ ಎಸ್ ಅಳವಡಿಸಲಾಗುತ್ತಿದೆ. ಸಾಹಸಮಯವಾದ ಚಿತ್ರದಲ್ಲಿ ಪ್ರೀತಿಯ ಎಳೆ, ಮಾಧುರ್ಯದ ಸೆಲೆಯನ್ನೂ ಸಹ ಅಳವಡಿಸಲಾಗಿದೆ.
ವಿಜಯ ರಾಘವೇದ್ರ ಮುಖ್ಯ ಪಾತ್ರದಲ್ಲಿ ನೆಗಟಿವ್ ಶೇಡ್ ಅಲ್ಲಿ ಮತ್ತು ಡೈಲಾಗ್ ಕಿಂಗ್ ಸಾಯಿಕುಮಾರ್ ಖಳ ನಾಯಕನ ಪಾತ್ರ ಮಾಡಿದ್ದಾರೆ.
ಅಕ್ಷರ ಪ್ರೊಡಕ್ಷನ್ ಅಡಿಯಲ್ಲಿ ಇಂದೋರ್ ಮೂಲದ ಅಕ್ಷರ ತಿವಾರಿ ಚಿತ್ರದ ನಿರ್ಮಾಣ ಮಾಡಿದ್ದಾರೆ. ಇವರ ಜೊತೆ ವಿಶಾಲ್ ತಿವಾರಿ ಸಹ ನಿರ್ಮಾಪಕರು.
`ಯದಾ ಯದಾ ಹಿ ಧರ್ಮಸ್ಯ’ ಪೋಷಕ ಪಾತ್ರಗಳಲ್ಲಿ ಶ್ರಾವ್ಯ, ಸಾಧು ಕೋಕಿಲ, ಉಮೇಶ್, ಗಡ್ಡಪ್ಪ, ಪ್ರಥಮ್, ಪದ್ಮ ವಾಸಂತಿ ಇದ್ದಾರೆ. ಜೂಡಾ ಸ್ಯಾಂಡಿ ಮತ್ತು ಪರಾಗ್ ಅವರು ಐದು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿರಾಜ್, ಗಿರಿದೇವ್ ಮತ್ತು ಮೋಹನ್ ಗೀತ ಸಾಹಿತ್ಯ ಒದಗಿಸಿದ್ದಾರೆ. ಕೆ ಎಂ ಪ್ರಾಕಾಶ್ ಸಂಕಲನ, ಸ್ಟಾರ್ ನಾಗಿ ಮತ್ತು ಮನು ನೃತ್ಯ ಸಂಯೋಜನೆ, ವಿಜಯ್, ಮಾಸ್ ಮಾದ, ವಿನೋದ್ ಸಾಹಸ ಒದಗಿಸಿದ್ದಾರೆ.
`ಯದಾ ಯದಾ ಹಿ ಧರ್ಮಸ್ಯ’ ಚಿತ್ರಕ್ಕೆ 56 ದಿವಸಗಳಲ್ಲಿ ಬೆಂಗಳೂರು, ಮುರುಡೇಶ್ವರ, ಗೋಕರ್ಣ, ಸಕಲೇಶಪುರ, ಗೋವಾ, ಕೇರಳ ಮುಂತಾದ ಸ್ಥಳಗಳಲ್ಲಿ ಚಿತ್ರೀಕರಣ ಮಾಡಿದ್ದಾರೆ.
ಸದ್ಯಕ್ಕೆ ಸೆನ್ಸಾರ್ ಮುಂದೆ ಬರಲು ತಯಾರಾಗುತ್ತಿದೆ. ಚಿತ್ರ ಫೆಬ್ರವರಿ ತಿಂಗಳಿನಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ.
Discussion about this post