ನವದೆಹಲಿ: ಎರಡು ಕಡೆಯಲ್ಲಿ ಲೋಕಸಭಾ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಯೋಗ ಕ್ಲೀನ್ ಚಿಟ್ ನೀಡಿದೆ.
ಎಪ್ರಿಲ್ 23ರಂದು ಪ್ರಧಾನಿ ಮೋದಿ ಅಹ್ಮದಾಬಾದ್’ನಲ್ಲಿ ನಡೆದಿದ್ದ ರೋಡ್ ಷೋ ಸಂದರ್ಭದ ಭಾಷಣ ಮತ್ತು ಎಪ್ರಿಲ್ 9ರಂದು ಚಿತ್ರದುರ್ಗದಲ್ಲಿ ನಡೆದ ಪ್ರಚಾರ ಸಮಾವೇಶದಲ್ಲಿ ಮಾಡಿದ್ದ ಭಾಷಣಗಳಿಗೆ ಸಂಬಂಧಿಸಿದಂತೆ ಮೋದಿ ವಿರುದ್ಧ ದೂರು ದಾಖಲಾಗಿತ್ತು.
ಈ ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೋದಿಯವರಿಗೆ ಕ್ಲೀನ್’ಚಿಟ್ ನೀಡಿರುವ ಚುನಾವಣಾ ಆಯೋಗ, ಇದರಲ್ಲಿ ನೀತಿ ಸಂಹಿತೆ ಉಲ್ಲಂಘಿಸುವ ಯಾವುದೇ ಅಂಶಗಳಿಲ್ಲ ಎಂದು ಸ್ಪಷ್ಟಪಡಿಸಿದೆ.
ಮೋದಿ ವಿರುದ್ಧ ದಾಖಲಾಗಿರುವ ಪ್ರಕರಣಗಳ ಪೈಕಿ ಇನ್ನೂ 2 ಪ್ರಕರಣಗಳ ವಿಚಾರಣೆ ಬಾಕಿ ಇದ್ದು, ಈ ಪ್ರಕರಣಗಳ ತೀರ್ಪನ್ನು ಆಯೋಗ ಇನ್ನೂ ಘೋಷಿಸಿಲ್ಲ.
Discussion about this post