ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ತ್ರಿಮತಸ್ಥ ಬ್ರಾಹ್ಮಣರಲ್ಲಿ ಯಾವುದೇ ರೀತಿಯ ಬೇಧವಿಲ್ಲದೇ ಎಲ್ಲರನ್ನೂ ಒಗ್ಗೂಡಿಸುವ ಕಾರ್ಯಗಳು ಗಂಭೀರವಾಗಿ ಆರಂಭವಾಗಬೇಕು ಎಂದು ಮಂತ್ರಾಲಯ ಶ್ರೀ ರಾಘವೇಂದ್ರ ಮಠದ ಡಾ. ಶ್ರೀ ಸುಬುದೇಂಧ್ರ ತೀರ್ಥ ಶ್ರೀಪಾದಂಗಳವರು ಕರೆ ನೀಡಿದರು.
ಜಯನಗರದ 5ನೆಯ ಬ್ಲಾಕ್’ನಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಅಖಿಲ ಕರ್ನಾಟಕ ಮಾಧ್ವ ಬ್ರಾಹ್ಮಣ ಮಹಾಸಭಾ ವತಿಯಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಡಾ. ಶ್ರೀಸುಬುಧೇಂದ್ರ ತೀರ್ಥ ಶ್ರೀಪಾದಂಗಳವರಿಗೆ ಗೌರವ ಡಾಕ್ಟರೇಟ್ ಸಂದ ಹಿನ್ನೆಲೆಯಲ್ಲಿ ಹಾಗೂ ಸಮಾಜ ಕಲ್ಯಾಣಕ್ಕಾಗಿ ಅಖಂಡ ಶ್ರಮಿಸುತ್ತಿರುವ ಕಾರಣದಿಂದ ಅಖಿಲ ಕರ್ನಾಟಕ ಮಾಧ್ವ ಮಹಾಸಭಾ ಸಂಸ್ಥಾಪಕರಾದ ಡಾ.ರಾಮಚಂದ್ರ ಅವರು ಹಾಗೂ ಅಧ್ಯಕ್ಷರಾದ ಡಾ.ಮುರಳಿಧರ್ ಅವರು ಮತ್ತು ಪ್ರಧಾನ ಕಾರ್ಯದರ್ಶಿಗಳಾದ ಡಾ.ಪಂ. ಶ್ರೀಪ್ರಸನ್ನಾಚಾರ್ಯ ಕಟ್ಟಿಯವರು ಶ್ರೀಗಳನ್ನು ಸನ್ಮಾನಿಸಿದರು.

ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್.ಕೆ. ವಾದೀಂದ್ರ ಆಚಾರ್ಯರು ಮತ್ತು ಶ್ರೀಮಠದ ಪ್ರಧಾನ ಪುರೋಹಿತರಾದ ನಂದಕಿಶೋರ್ ಆಚಾರ್ ಉಪಸ್ಥಿತರಿದ್ದರು.
ಶ್ರೀಗಳ ಆಶೀರ್ವಾದ ಪಡೆದ ಡಿಸಿಎಂ
ಶ್ರೀಮಠಕ್ಕೆ ಭೇಟಿ ನೀಡಿದ ಡಿಸಿಎಂ ಗೋವಿಂದ ಕಾರಜೋಳ ಅವರು ಶ್ರೀಗಳ ಆರ್ಶೀವಾದ ಪಡೆದರು.
ಇನ್ನು, ಯುವ ಬರಹಗಾರ ತೀರ್ಥಹಳ್ಳಿ ಅನಂತ ಕಲ್ಲಾಪುರ ಅವರು ಶ್ರೀಗಳಿಂದ ಆರ್ಶೀವಾದ ಪಡೆದರು.
(ವರದಿ: ತೀರ್ಥಹಳ್ಳಿ ಅನಂತ ಕಲ್ಲಾಪುರ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news







Discussion about this post