ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ನಗರದ ಏಳು ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ಮೌಲ್ಯಮಾಪನ ಕಾರ್ಯ ಆರಂಭವಾಗಿದ್ದು, ಜುಲೈ 23ರವರೆಗೆ ನಡೆಯಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಮೇಶ್ ತಿಳಿಸಿದ್ದಾರೆ.
ಕಸ್ತೂರಬಾ ಬಾಲಿಕಾ ಪ್ರೌಢಶಾಲೆ, ಶಿವಮೊಗ್ಗ, ಕರ್ನಾಟಕ ಪಬ್ಲಿಕ್ ಶಾಲೆ, ಲೋಯೊಲಾ ಪ್ರೌಢಶಾಲೆ, ಸೆಕ್ರೆಡ್‌ಹಾರ್ಟ್ ಪ್ರೌಢಶಾಲೆ, ಡಿ.ವಿ.ಎಸ್ ಸಂಯುಕ್ತ ಪ್ರೌಢಶಾಲೆ, ಮೇರಿ ಇಮ್ಯಾಕ್ಯುಲೇಟ್ ಬಾಲಿಕಾ ಪ್ರೌಢಶಾಲೆ, ರಾಷ್ಟ್ರೀಯ ಬಾಲಕರ ಪ್ರೌಢಶಾಲೆಯಲ್ಲಿ ಮೌಲ್ಯಮಾಪನ ಆರಂಭವಾಗಿದ್ದು, ಎಲ್ಲಾ ಕೇಂದ್ರಗಳ ಸುತ್ತ ಜಿಲ್ಲಾಧಿಕಾರಿ ಅವರು 144 ಸೆಕ್ಷನ್ ಜಾರಿಗೊಳಿಸಿದ್ದಾರೆ.
ಸುಮಾರು 2400 ಶಿಕ್ಷಕರು ಮೌಲ್ಯಮಾಪನ ಕಾರ್ಯದಲ್ಲಿ ತೊಡಗಿದ್ದು, ವಿವಿಧ ತಾಲೂಕುಗಳಿಂದ ಬರುವ ಶಿಕ್ಷಕರಿಗೆ ಅವರ ಕೋರಿಕೆ ಮೇರೆಗೆ ಸುಮಾರು 50 ಖಾಸಗಿ ಶಾಲೆಗಳ ಬಸ್‌ಗಳ ವ್ಯವಸ್ಥೆ ಮಾಡಿಕೊಡಲಾಗಿದೆ ಕೇಂದ್ರದಲ್ಲಿ 150 ಶಿಕ್ಷಕರಿಗೆ 01 ಆರೋಗ್ಯ ತಪಾಸಣಾ ಕೌಂಟರ್ ಏರ್ಪಡಿಸಿದ್ದು ಎಲ್ಲಾ ಶಿಕ್ಷಕರೂ ತಪಾಸಣೆಗೆ ಒಳಪಡುವುದು ಕಡ್ಡಾಯವಾಗಿದೆ. ಇಲಾಖಾ ಮಾರ್ಗಸೂಚಿ ಪ್ರಕಾರ ಭೌತಿಕ ಅಂತರವನ್ನು ಕಾಯ್ದುಕೊಳ್ಳಲು ಸೂಚಿಸಲಾಗಿದೆ. ಕೇಂದ್ರಗಳ ಸುತ್ತ ಪೋಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಮೌಲ್ಯಮಾಪನ ಕಾರ್ಯದ 03 ದಿನಗಳ ಮೊದಲು ಮಹಾನಗರ ಪಾಲಿಕೆ ವತಿಯಿಂದ ಎಲ್ಲಾ ಕೇಂದ್ರಗಳನ್ನು ಸ್ಯಾನಿಟೈಸ್ ಮಾಡಲಾಗಿದ್ದು, ಮೌಲ್ಯಮಾಪನದ ದಿನ ಪ್ರತಿದಿನ ಸಂಜೆ ಸ್ಯಾನಿಟೈಸ್ ಮಾಡಲು ಸೂಚಿಸಲಾಗಿದೆ. ಶಿಕ್ಷಕರು ಸ್ವಂತ ಉಪಹಾರ ಮತ್ತು ನೀರಿನ ವ್ಯವಸ್ಥೆ, ಮಾಸ್ಕ್ ವೈಯಕ್ತಿಕ ಸ್ಯಾನಿಟೈಸರ್ ತರಲು ಸೂಚಿಸಲಾಗಿದೆ. ಮೌಲ್ಯಮಾಪನ ಕಾರ್ಯ ಸುಗಮವಾಗಿ ಹಾಗೂ ಸುರಕ್ಷಿತವಾಗಿ ನಡೆಯುವಂತೆ ಎಲ್ಲಾ ವ್ಯವಸ್ಥೆಗಳನ್ನು ಎಸ್.ಓ.ಪಿ ಅನ್ವಯ ಕಲ್ಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.
Get In Touch With Us info@kalpa.news Whatsapp: 9481252093
Discussion about this post