No Result
View All Result
b-y-raghavendra-freedom-fighters-independence-day
English Articles

Remembering Freedom Fighters Is the Duty of Every Indian: MP B.Y. Raghavendra

by kalpa News
August 17, 2026
0

Kalpa Media House  | SHIKARIPURA  | Remembering the freedom fighters who fought against British rule, made immense sacrifices and secured...

Read moreDetails
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
  • Advertise With Us
  • Grievances
  • About Us
  • Contact Us
Saturday, August 22, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಗಾಂಧರ್ವ ವಿಧಿಯಿಂದ ವಿವಾಹವಾದರೂ ಅಪಮಾನ ಹೆಣ್ಣಿಗೇ, ಎಚ್ಚರ ಪೋಷಕರೇ

kalpa News by kalpa News
October 7, 2018
in Special Articles
0
Share on FacebookShare on TwitterShare on WhatsApp

ಪ್ರೇಮ ವಿವಾಹವೆಂಬುದು ಆದಿಕಾಲದಿಂದಲೂ ನಡೆಯುತ್ತಲೇ ಬಂದಿದೆ… ಕಾಲ ಕಾಲಕ್ಕೆ ಹೆಚ್ಚುತ್ತಿದೆಯೇ ವಿನಹ ಕಡಿಮೆಯಾಗುವುದಿಲ್ಲ… ಕಾಳಿದಾಸನ ಅಭಿಜ್ಞಾನ ಶಾಕುಂತಲದ ಮುಖ್ಯ ಪಾತ್ರವೇ ಪ್ರೇಮದ ಪರಿಣಾಮವಾಗಿ ಸೊಗಸಾಗಿ ಮೂಡಿದೆ…  ಲೈಲಾ ಮಜ್ನು… ರೋಮಿಯೋ-ಜೂಲಿಯಟ್ ಇವರೆಲ್ಲರ ಉದಾಹರಣೆ ಕಣ್ಣ ಮುಂದಿದೆ.

ವಿಶ್ವಾಮಿತ್ರ ಮೇನಕೆಯ ಪುತ್ರಿಯಾದ ಶಾಕುಂತಲೆಯು ಕಣ್ವರ ಸಾಕುಮಗಳಾಗಿ ಮುದ್ದಿನಿಂದ ತಪೋ ವನದಲ್ಲಿ ಬೆಳದರೂ ಸಹ ದುಷ್ಯಂತ ಮಹಾರಾಜನ ಪ್ರೇಮಪಾಶದೊಳಗೆ ಸಿಲುಕಿ ಗಾಂಧರ್ವ ವಿಧಿಯಿಂದ ಮದುವೆಯಾದರೂ ಅದು ಸಮಾಜದ ದೃಷ್ಟಿಗೆ ಗೋಚರಿಸದೆ ಅಪಮಾನಕ್ಕೆ ಒಳಗಾಗಿ ನೋವನ್ನು ಅನುಭವಿಸಿದ್ದು ಹೆಣ್ಣೇ ಅಲ್ಲವೇ… ಇಲ್ಲಿ ದೂರ್ವಾಸರ ಶಾಪವೋ ಹೆಣ್ಣಿನ ಅಸಹಾಯಕತೆ ಯೋ ಒಟ್ಟಿನಲ್ಲಿ ಹೆಣ್ಣಿನ ಸಂಕಟಕ್ಕೆ ಕೊನೆ ಇದೆಯೇ???

ಪ್ರೇಮವಿವಾಹಗಳು ಯಶಸ್ವಿ ಯಾಗೋದು ಕಡಿಮೆ…ಅಲ್ಲಿ ಹಿರಿಯರ ಒಪ್ಪಿಗೆ ಹಾಗೂ ಭದ್ರತೆಯ ರಕ್ಷಾಕವಚವಿಲ್ಲದೆ ಎಷ್ಟೋ ಮುಗ್ಧ ಹೆಣ್ಣುಮಕ್ಕಳು ಈ ಕೂಪದಲ್ಲಿ ಬಿದ್ದು ಹೇಳ ಹೆಸರಿಲ್ಲದಂತೆ ಕಣ್ಮರೆಯಾಗುತ್ತಿರುವುದು ಕಳವಳಕಾರಿಯಾದ ವಿಷಯವಾಗಿದೆ….

ಲವ್ ಜಿಹಾದ್: ಮನೋಕಾಮನೆಯ ಆಮಿಷ

ಮುಖ್ಯವಾಗಿ ಲವ್ ಜಿಹಾದ್ ಆಗಿರಬಹುದು ಅನ್ಯ ಕೋಮಿನ ವ್ಯಕ್ತಿಯ ಜೊತೆಗೆ ವಯೋಸಹಜ ಮನೋಕಾಮನೆಯ ಆಮಿಷಕ್ಕೆ ಬಲಿಯಾಗಿ ತಮ್ಮ ಜೀವನಕ್ಕೆ ಕಂಟಕ ತಂದುಕೊಳ್ಳುವುದಲ್ಲದೆ ಹೆತ್ತವರ ಕನಸಿಗೂ ಕೊಳ್ಳಿ ಇಟ್ಟು ಬೆನ್ನು ಹಾಕಿ ನಡೆದುಬಿಡುತ್ತಾರೆ…

ಇದರಿಂದಾಗಿ ಹೆತ್ತವರ ಸ್ಥಾನಮಾನಕ್ಕೆ ಸಮಾಜದಲ್ಲಿ ಕುಂದುಂಟಾಗುವುದಲ್ಲದೆ ಅವರ ವ್ಯವಹಾರ ಮತ್ತು ಮನೆಯೊಳಗಿನ ಸಂಬಂಧಗಳ ಮೇಲೆ ಮಾರಕ ಪರಿಣಾಮ ಬೀರುವುದಲ್ಲದೆ ಮಾನಸಿಕವಾಗಿ ಕುಗ್ಗುವಂತಾಗುತ್ತದೆ…ಅದೇ ಜಾತಿಯಾದರೆ ಅಷ್ಟು ಸಮಸ್ಯೆಯಾಗದೇ ಹೆತ್ತವರು ಒಪ್ಪಿಕೊಂಡು ಮಕ್ಕಳನ್ನು ಹರಸಿ ಸುಮ್ಮನಾಗಬಹುದು..

ಅದೇ ಬೇರೆ ಬೇರೆ ಜಾತಿಯಾದರೆ ಇತ್ತ ಹೆಣ್ಣು ಮಗಳ ಬಾಳೂ ಕೂಡಾ ಒಂದೆರಡು ವರ್ಷ ತಾತ್ಕಾಲಿಕ ಸುಖದಂತೆ ಅನಿಸಿ ಮಗುವಾದ ನಂತರ ಹುಡುಗ ಮತ್ತೊಂದು ಹುಡುಗಿಯ ಜೊತೆ ಸಂಬಂಧಕ್ಕೆ ಹಾತೊರೆದು ಇವಳಿಂದ ವಿಮುಖಳಾದಾಗ ಅವಳಿಗೆ ಹೆತ್ತವರ ಬೆಂಬಲವೂ ಸಿಗದೆ ಅತಂತ್ರಳಾಗಿ ಹೊಸ ಬದುಕಿಗೆ ಒಗ್ಗಿಕೊಳ್ಳಲೇಬೇಕಾಗುತ್ತದೆ.

ಮೊದಲ ಬಾಣಂತನವೆಂಬುದು ತವರಿನ ಮನೆಯವರಿಗೂ ಮತ್ತು ಚೊಚ್ಚಲ ಬಸುರಿಗೂ ಸಂಭ್ರಮವಿದ್ದಂತೆ. ಆ ಸಂಭ್ರಮ ಇಲ್ಲಿ ಮರೀಚಿಕೆಯಾಗುವುದರ ಜೊತೆಗೆ ಈಕೆಯ ಆಶಾಗೋಪುರಕ್ಕೆ ತೆರೆ ಬೀಳುವುದು.. ನಂತರ ಮಗುವನ್ನು ಶಾಲೆಗೆ ಸೇರಿಸಬೇಕಾದ ಸಂದರ್ಭದಲ್ಲಿ ಜಾತಿಯ ಪೆಡಂಭೂತವು ಬೃಹದಾಕಾರವಾಗಿ ಕಾಡುವುದು. ಇದರಿಂದಾಗಿ ದಂಪತಿಗಳ ಮಧ್ಯೆ ಸಾಮರಸ್ಯ ಕೆಡುವುದು.. ಅನ್ಯ ಕೋಮಿನವರಾದರೆ ಇಬ್ಬರಿಗೂ ಅವರದೇ ಜಾತಿಯ ಹೆಸರು ಮುಖ್ಯವಾದರೂ ತಂದೆಯ ಜಾತಿಯೇ ದಾಖಲಿಸಬೇಕಾದ ಅನಿವಾರ್ಯ ಸ್ಥಿತಿ ಎದುರಾದಾಗ ಗೊಂದಲವಾಗುವುದು…

ಒಂದೋ ಆಕೆ ಓದಿದ್ದರೆ ಸಣ್ಣ ಪುಟ್ಟ ಕೆಲಸ ಮಾಡಿಯೋ ಯಾರದೋ ಮನೆಯ ಚಾಕರಿ ಮಾಡಿಯೋ ಮಗುವನ್ನು ಒಬ್ಬಂಟಿ ಪಾಲಕಳಾಗಿ ಬೆಳಸಬೇಕಾಗುತ್ತದೆ…ಅಗ ಒಂಟಿ ಹೆಂಗಸಿನೆಡೆಗೆ ಸಮಾಜದ ಕಾಮುಕರ ದಂಡು ದೃಷ್ಟಿ ನೆಟ್ಟು ಬದುಕು ದುಸ್ತರವಾಗುತ್ತದೆ…

ಎಷ್ಟೋ ಕಡೆ ಆಕೆ ಬೆಲೆವೆಣ್ಣಾಗಿ ಬದುಕಬೇಕಾದ ಅನಿವಾರ್ಯತೆಗೆ ಗಂಡನೆನೆಸಿಕೊಂಡವನೇ ದಬ್ಬಿ ಹಣ ತೆಗೆದುಕೊಂಡು ಪರಾರಿಯಾಗಿರುತ್ತಾನೆ… ಇಲ್ಲವೇ ಈಕೆ ಜೀವನ ಕೊನೆಗಾಣಿಸಿಕೊಂಡ ಉದಾಹರಣೆ ಬೇಕಾದಷ್ಟಿದೆ…

ಈ ಪರಿಸ್ಥಿತಿಗೆ ಕಾರಣ ಯಾರು???

ಹೆತ್ತವರ ಆತಿಯಾದ ಪ್ರೀತಿ ಅಥವಾ ನಿರ್ಲಕ್ಷ್ಯ ಕಾರಣವೇ???
ಮಕ್ಕಳಿಗೆ ನೀಡಿದ ಅತೀಯಾದ ಸ್ವೇಚ್ಚಾಚಾರದ ಸ್ವಾತಂತ್ರ್ಯ ಕಾರಣವಾಯಿತೇ???
ಅನರಕ್ಷತೆ ಬಡತನ ಕಾರಣವಾಯಿತೇ???
ಮಕ್ಕಳ ಅತೀಯಾದ ಜಾಲತಾಣಗಳ ಬಳಕೆ ಕಾರಣವಾಯಿತೇ???
ಮಕ್ಕಳ ಮೇಲಿನ ಹಿರಿಯರ ಬಿಗಿ ಹಿಡಿತ ಕೈ ಜಾರಿತೇ???

ಪ್ರೇಮವೆಂಬುದು ಈಗೀಗ ಪ್ರೌಢಶಾಲೆಯಲ್ಲಿಯೇ ಆಕರ್ಷಣೆಯಾಗಿ ಮಕ್ಕಳ ಗುರಿ ಸಾಧನೆಗೆ ತೊಡಕಾಗಿದೆ. ಅವರ ವಿದ್ಯಾಭ್ಯಾಸ ಕುಂಠಿತಗೊಂಡು ಇಹ ಭೋಗದೆಡೆಗೆ ಮನ ತಿರುಗಿ ದೇಶದ ಅಭಿವೃದ್ದಿಗೆ ಕೊಡುಗೆಯಾಗಬೇಕಾದವರು ಪ್ರೇಮದ ಅಮಲೇರಿಸಿಕೊಂಡು ಈ ಮಾಯೆಯ ಜಾಲದೊಳಗೆ ಸಿಲುಕಿ ಒದ್ದಾಡುತ್ತಿದ್ದಾರೆ.

ಇದಕ್ಕೆ ಪರಿಹಾರವೆಂದರೆ ಆದಷ್ಟೂ ಮಕ್ಕಳನ್ನು ಸಂಸ್ಕಾರದ ಕಡೆ ಮನ ಹರಿಯುವಂತೆ ವಾಲಿಸಿ ಅವರ ಚಲನವಲನದ ಕಡೆ ಗಮನ ಇಡಬೇಕು.. ಮುಖ್ಯವಾಗಿ ಅವರ ಸ್ನೇಹ ವಲಯದ ಕಡೆ ಗಮನ ಇಡಬೇಕು. ಇವೆಲ್ಲಕಿಂತ ಮಿಗಿಲಾಗಿ ನಮ್ಮ ಪ್ರೀತಿಯನ್ನು ಹಣದ ರೂಪದಲ್ಲಿ ಅಳೆಯದೆ ಅವರ ಮನದ ಮಾತಿಗೆ ಕಿವಿಯಾಗಲೇಬೇಕು ಮತ್ತು ಅವರ ಶಾಲೆಯ ಆಗು ಹೋಗುಗಳನ್ನು ಅವರ ಬಾಯಿಂದಲೇ ಕೇಳಿ ತಿಳಿಯಬೇಕು. ಆಗ ಮಕ್ಕಳ ಗಮನ ಎತ್ತ ಸಾಗುತ್ತಿದೆ ಎಂದು ಸುಲಭವಾಗಿ ಅರ್ಥೈಸಬಹುದು.

ಇದಕ್ಕೂ ಮೀರಿದ ಮಾತೆಂದರೆ ಮುಳ್ಳಿನ ಮೇಲೆ ಬಟ್ಟೆ ಬಿದ್ದರೂ, ಬಟ್ಟೆಯ ಮೇಲೆ ಮುಳ್ಳು ಬಿದ್ದರೂ ಜೋಪಾನವಾಗಿ ಬಟ್ಟೆಯನ್ನು ಹರಿಯದಂತೆ ಬಿಡಿಸಬೇಕು. ಅದು ಎಲ್ಲರ ಬಾಳಿನಲ್ಲಿಯೂ ಬರುವ ಸವಾಲೂ ಕೂಡ ಹೌದು…

ನೀವೇನಂತೀರಿ?
ಧನ್ಯವಾದಗಳು…

ಲೇಖನ: ಆರ್. ವಿಜಯಾ

Tags: Inter caste marriageLove Marriagelove-jihadMarriageTeenage Loveಗಾಂಧರ್ವ ವಿವಾಹ
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಮೋದಿಗೆ ಯಾರು ಹಿತವರು ಈರ್ವರೊಳೊಗೆ? ಪುಟಿನ್ನೋ, ಟ್ರಂಪೋ?

Next Post

ಉತ್ತಮ ಬದುಕಿಗೆ ಆಲೋಚನೆಗಳು ಉನ್ನತವಾಗಿರಬೇಕು: ಪಾರ್ಥಸಾರಧಿ

kalpa News

kalpa News

Next Post

ಉತ್ತಮ ಬದುಕಿಗೆ ಆಲೋಚನೆಗಳು ಉನ್ನತವಾಗಿರಬೇಕು: ಪಾರ್ಥಸಾರಧಿ

Leave a Reply Cancel reply

Your email address will not be published. Required fields are marked *

No Result
View All Result
b-y-raghavendra-freedom-fighters-independence-day
English Articles

Remembering Freedom Fighters Is the Duty of Every Indian: MP B.Y. Raghavendra

by kalpa News
August 17, 2026
0

Kalpa Media House  | SHIKARIPURA  | Remembering the freedom fighters who fought against British rule, made immense sacrifices and secured...

Read moreDetails
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL