ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಫೇಸ್’ಬುಕ್’ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಹಿನ್ನೆಲೆಯಲ್ಲಿ ಕಾವಲ್’ಬೈರಸಂಧ್ರದಲ್ಲಿ ಆರಂಭವಾದ ಗಲಭೆ ಪರಿಸ್ಥಿತಿ ಕೈಮೀರುವ ಹಂತಕ್ಕೆ ತಲುಪಿದೆ.
ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಯ ಮೇಲೆ ದಾಳಿಯಿಂದ ಆರಂಭವಾದ ಗಲಭೆ ಕ್ಷಣ ಮಾತ್ರದಲ್ಲಿ ಬಡಾವಣೆಯಾದ್ಯಂತ ವ್ಯಾಪಿಸಿದ್ದು, ಗಲಭೆಕೋರರು ಸಿಕ್ಕ ಸಿಕ್ಕ ವಾಹನಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ.
ಕೆಜೆ ಹಳ್ಳಿ ಹಾಗೂ ಡಿಜೆ ಹಳ್ಳಿ ಪೊಲೀಸ್ ಠಾಣೆಗಳಿಗೆ ನುಗ್ಗಿದ ಗಲಭೆಕೋರರು ಇಡಿಯ ಠಾಣೆಯಲ್ಲಿ ಧ್ವಂಸ ಮಾಡಿದ್ದು, ಐಪಿಎಸ್ ಅಧಿಕಾರಿಯ ಕಾರನ್ನೇ ಪುಡಿ ಪುಡಿ ಮಾಡಿದ್ದಾರೆ.
ರಸ್ತೆಯಲ್ಲಿ ಸಿಕ್ಕ ಸಿಕ್ಕ ವಾಹನಗಳಿಗೆ ಬೆಂಕಿ ಹಚ್ಚುತ್ತಿರುವ ಪುಂಡರು, ಇಡಿಯ ಪ್ರದೇಶದಲ್ಲಿ ಭಯದ ವಾತಾವರಣ ಸೃಷ್ಠಿಸಿದ್ದಾರೆ.
ಒಂದು ಹಂತಕ್ಕೆ ಪೊಲೀಸರ ಮೇಲೂ ಭಾರೀ ದಾಳಿ ನಡೆದಿದ್ದು, ಟಿಯರ್ ಗ್ಯಾಸ್ ಸಿಡಿಸಿದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿಲ್ಲ.
ಪತ್ರಕರ್ತರ ಮೇಲೂ ಹಲ್ಲೆ
ಇನ್ನು, ಗಲಭೆ ವೇಳೆ ವಿದ್ಯುನ್ಮಾನ ಮಾಧ್ಯಮದ ವರದಿಗಾರರ ಮೇಲೂ ಸಹ ಗಲಭೆಕೋರರು ಹಲ್ಲೆ ನಡೆಸಿದ್ದು, ಸುವರ್ಣ ನ್ಯೂಸ್’ಗೆ ಸೇರಿದ ಕ್ಯಾಮರಾವನ್ನು ಪುಡಿಗಟ್ಟಿದ್ದಾರೆ.
ಸ್ಥಳದಲ್ಲಿದ್ದ ಪತ್ರಕರ್ತರಿಗೆ ವರದಿ ಮಾಡದಂತೆ ಬೆದರಿಕೆ ಒಡ್ಡಿದ ಘಟನೆಯೂ ಸಹ ನಡೆದಿದೆ.
Get In Touch With Us info@kalpa.news Whatsapp: 9481252093
Discussion about this post