ನವದೆಹಲಿ: ನಾಳೆಯ ಸ್ವತಂತ್ರೊ್ಯೀತ್ಸವಕ್ಕೆ ಇಡಿಯ ದೇಶವೇ ಸಿದ್ದವಾಗುತ್ತಿದ್ದು, ತಮ್ಮ ಪ್ಯಾರೇ ದೇಶವಾಸಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಭರ್ಜರಿ ಕೊಡುಗೆ ಘೋಷಣೆ ಮಾಡಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
ನಾಳೆ ನಡೆಯಲಿರುವ ಸ್ವತಂತ್ರೊ್ಯೀತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕೆಂಪು ಕೋಟೆಯ ಮೇಲೆ ತಮ್ಮ ಈ ಅವಧಿಯ ಕೊನೆಯ ಧ್ವಜಾರೋಹಣ ಹಾಗೂ ಭಾಷಣ ಮಾಡಲಿರುವ ಮೋದಿ, ದೇಶದ ಜನರಿಗೆ ಮಹತ್ವದ ಆರೋಗ್ಯ ಕೊಡುಗೆಗಳನ್ನು ನೀಡಲಿದ್ದಾರೆ ಎನ್ನಲಾಗಿದೆ.
ಪ್ರಮುಖವಾಗಿ, ದೇಶದ 10 ಕೋಟಿ ಕುಟುಂಬಗಳ 50 ಕೋಟಿ ಜನರಿಗೆ ಆರೋಗ್ಯ ವಿಮೆ ಒದಗಿಸುವ ವಿಶ್ವದ ಅತಿದೊಡ್ಡ ಯೋಜನೆಯೆಂದೇ ಹೇಳಲಾಗುತ್ತಿರುವ ಆಯುಷ್ಮಾನ್ ಭಾರತ್ ಯೋಜನೆಯನ್ನು ಘೋಷಣೆ ಮಾಡುವ ಸಾಧ್ಯತೆ ಇದೆ.
ದೇಶವಾಸಿಗಳ ಆರೋಗ್ಯದ ಕುರಿತಾಗಿ ಮೊದಲಿನಿಂದಲೂ ಕಾಳಜಿ ವಹಿಸುತ್ತಿರುವ ಪ್ರಧಾನಿ ಮೋದಿ ಅವರ ಕನಸಿನ ಯೋಜನೆ ಇದಾಗಿದ್ದು, ಈ ಅವಧಿಯ ತಮ್ಮ ಕೊನೆಯ ಭಾಷಣದಲ್ಲಿ ಘೋಷಣೆ ಮಾಡುವ ನಿರೀಕ್ಷೆಯಿದೆ.
ಈ ಮಹತ್ವದ ಯೋಜನೆ ಮೊದಲ ಹಂತದಲ್ಲಿ 11 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಗೆ ಬರಲಿದ್ದು, ಈ ಯೋಜನೆ ಅಡಿಯಲ್ಲಿ ಕುಟುಂಬವೊಂದಕ್ಕೆ ರೂ. 5 ಲಕ್ಷ ಮೌಲ್ಯದ ಆರೋಗ್ಯ ವಿಮೆ ಒದಗಿಸಲಾಗುತ್ತದೆ.
ಈ ಯೋಜನೆಯಲ್ಲಿ 100 ಆಸ್ಪತ್ರೆಗಳಿದ್ದು, ಇದರಲ್ಲಿ ಬಹುತೇಕ ಆಸ್ಪತ್ರೆಗಳು ಸರ್ಕಾರಿ ವಲಯದ್ದಾಗಿದ್ದು, ಮೊದಲಿಗೆ ಶಸ್ತ್ರಚಿಕಿತ್ಸೆಗಳು ಹಾಗೂ ಇತರೆ ವೈದ್ಯಕೀಯ ಚಿಕಿತ್ಸಾ ಸೇವೆಗಳನ್ನು ಆರಂಭಿಸಲಾಗುತ್ತದೆ.
ಪಟ್ಟಿಯಲ್ಲಿ 1000 ವೈದ್ಯಕೀಯ ಸ್ಥಿತಿಗಳಿಗೆ ಚಿಕಿತ್ಸೆಗಳನ್ನು ನೀಡಲಾಗುತ್ತದೆ. ಆದರೆ, ಎಲ್ಲಾ ಆಸ್ಪತ್ರೆಗಳಲ್ಲೂ ಈ ಚಿಕಿತ್ಸೆಗಳನ್ನು ನೀಡಲಾಗುವುದಿಲ್ಲ. ಆಯಾ ರೋಗಗಳಿಗೆ, ಆಯಾ ಆಸ್ಪತ್ರೆಗಳಲ್ಲಿ ಮಾತ್ರ ಚಿಕಿತ್ಸೆಗಳನ್ನು ನೀಡಲಾಗುತ್ತದೆ ಎಂಬುದರ ಮಾಹಿತಿಗಳನ್ನು ಪಟ್ಟಿಯಲ್ಲಿ ನೀಡಲಾಗಿರುತ್ತದೆ.
Discussion about this post