ಕಲ್ಪ ಮೀಡಿಯಾ ಹೌಸ್ | ಬೆಂಗಳೂರು/ಮಂಗಳೂರು |
ಸಕಲೇಶಪುರ #Sakhaleshpur ಮತ್ತು ಸುಬ್ರಹ್ಮಣ್ಯ ರೋಡ್ (ಘಾಟ್ ಸೆಕ್ಷನ್) ನಡುವಿನ ರೈಲ್ವೆ ವಿದ್ಯುದ್ದೀಕರಣ ಕಾರ್ಯವು ನಡೆಯುತ್ತಿರುವ ಕಾರಣ ಈ ಭಾಗದಲ್ಲಿ ಸಂಚರಿಸುವ ಹಲವು ರೈಲಗಳ ರದ್ದತಿ ಮುಂದುವರೆಯಲಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ #SouthWesternRailway ಮಾಹಿತಿ ನೀಡಿದ್ದು, ನವೆಂಬರ್ 2ರಿಂದ ಡಿಸೆಂಬರ್ 15ರವರೆಗೆ ಪ್ರತಿದಿನ ನಾಲ್ಕು ಗಂಟೆಗಳ ಕಾಲ ಲೈನ್ ಬ್ಲಾಕ್ ತೆಗೆದುಕೊಳ್ಳಲಿದೆ. ಈ ಕಾರಣದಿಂದಾಗಿ, ಈ ಕೆಳಗೆ ತಿಳಿಸಲಾದ ಕೆಲವು ರೈಲು ಸೇವೆಗಳ ತಾತ್ಕಾಲಿಕ ರದ್ದತಿಯ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ತಿಳಿಸಿದೆ.
ಈ ರೈಲುಗಳ ವಿವರ ಹೀಗಿವೆ:
1. 16539 ಸಂಖ್ಯೆಯ ಯಶವಂತಪುರ-ಮಂಗಳೂರು #Mangalore ಜಂಕ್ಷನ್ ಸಾಪ್ತಾಹಿಕ ಎಕ್ಸ್’ಪ್ರೆಸ್ ರೈಲು ಮೊದಲು 01.11.2025 ರವರೆಗೆ ರದ್ದುಗೊಂಡಿತ್ತು. ಈಗ 08.11.2025 ರಿಂದ 13.12.2025 ರವರೆಗೆ ರದ್ದುಗೊಳ್ಳಲಿದೆ.2. 16540 ಸಂಖ್ಯೆಯ ಮಂಗಳೂರು ಜಂಕ್ಷನ್-ಯಶವಂತಪುರ ಸಾಪ್ತಾಹಿಕ ಎಕ್ಸ್’ಪ್ರೆಸ್ ರೈಲು ಮೊದಲು 02.11.2025 ರವರೆಗೆ ರದ್ದುಗೊಂಡಿತ್ತು. ಈಗ 09.11.2025 ರಿಂದ 14.12.2025 ರವರೆಗೆ ರದ್ದುಗೊಳ್ಳಲಿದೆ.
3. 16575 ಸಂಖ್ಯೆಯ ಯಶವಂತಪುರ – ಮಂಗಳೂರು ಜಂಕ್ಷನ್ ಗೋಮಟೇಶ್ವರ ಟ್ರೈ-ವೀಕ್ಲಿ ಎಕ್ಸ್’ಪ್ರೆಸ್ ಮೊದಲು 30.10.2025 ರವರೆಗೆ ರದ್ದುಗೊಂಡಿತ್ತು. ಈಗ 02.11.2025 ರಿಂದ 14.12.2025 ರವರೆಗೆ ರದ್ದುಗೊಳ್ಳಲಿದೆ.
4. 16576 ಸಂಖ್ಯೆಯ ಮಂಗಳೂರು ಜಂಕ್ಷನ್-ಯಶವಂತಪುರ ಟ್ರೈ-ವೀಕ್ಲಿ ಎಕ್ಸ್’ಪ್ರೆಸ್ ಮೊದಲು 30.10.2025 ರವರೆಗೆ ರದ್ದುಗೊಂಡಿತ್ತು. ಈಗ 03.11.2025 ರಿಂದ 15.12.2025 ರವರೆಗೆ ರದ್ದುಗೊಳ್ಳಲಿದೆ.
5. 16515 ಸಂಖ್ಯೆಯ ಯಶವಂತಪುರ – ಕಾರವಾರ ಟ್ರೈ-ವೀಕ್ಲಿ ಎಕ್ಸ್’ಪ್ರೆಸ್ ಮೊದಲು 31.10.2025 ರವರೆಗೆ ರದ್ದುಗೊಂಡಿತ್ತು. ಈಗ 03.11.2025 ರಿಂದ 15.12.2025 ರವರೆಗೆ ರದ್ದುಗೊಳ್ಳಲಿದೆ.
6. 16516 ಸಂಖ್ಯೆಯ ಕಾರವಾರ – ಯಶವಂತಪುರ ಟ್ರೈ-ವೀಕ್ಲಿ ಎಕ್ಸ್’ಪ್ರೆಸ್ ಮೊದಲು 01.11.2025 ರವರೆಗೆ ರದ್ದುಗೊಂಡಿತ್ತು. ಈಗ 04.11.2025 ರಿಂದ 16.12.2025 ರವರೆಗೆ ರದ್ದುಗೊಳ್ಳಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post