ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದ ಘಟನೆಯ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಹಿಂದೂ ಯುವ ಹೋರಾಟಗಾರ್ತಿ ಚೈತ್ರಾ ಕುಂದಾಪುರ ಅವರಿಗೆ ಹಿಂದೂ ಯುವಕರು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವ್ಯಕ್ತಪಡಿಸಿದ್ದು, ಇದಕ್ಕಾಗಿ ಹ್ಯಾಶ್ ಟ್ಯಾಗ್ ಆರಂಭಿಸಿದ್ದಾರೆ.
ಈ ಕುರಿತಂತೆ ಖ್ಯಾತ ವಾಗ್ಮಿ ನಿತ್ಯಾನಂದ ವಿವೇಕವಂಶಿ ವಾಸ್ತವ ಅಂಶಗಳೊಂದಿಗೆ ಚೈತ್ರಾ ಕುಂದಾಪುರ ಅವರಿಗೆ ಬೆಂಬಲ ವ್ಯಕ್ತಪಡಿಸಿ, ಬರೆದಿದ್ದಾರೆ… ಓದಿ…
ಚೈತ್ರಾ ಕುಂದಾಪುರ ವಿರುದ್ಧ ವ್ಯವಸ್ಥಿತ ಷಢ್ಯಂತ್ರ ನಡೆಯುತ್ತಿರುವುದು ನಮ್ಮ ಗಮನಕ್ಕೆ ಬರುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿನ ನೆಟ್ ವರ್ಕ್ ಬಳಸಿಕೊಂಡು ಉದ್ದೇಶಪೂರ್ವಕವಾಗಿ ಅವಳ ತೇಜೋವಧೆ ಮಾಡಲು ಕೆಲವು ಶಕ್ತಿಗಳು ಹಗಲೂ ರಾತ್ರಿ ಪ್ರಯತ್ನಿಸುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಇದು ಸರಿಯಲ್ಲ!
ಚೈತ್ರಾ ಕೋಪಿಷ್ಠಳಿರಬಹುದು, ಮುಂಗೋಪಿಯಿರಬಹುದು. ಆದರೆ ಅವಳು ಹಿಂದು ಸಮಾಜದ ಪರ ದನಿ ಎತ್ತಿರುವ ಹುಡುಗಿ. ಈ ತೇಜೋವಧೆ ಹೀಗೆ ಮುಂದುವರಿದರೆ ಸತ್ಯ ಮಾಡಿ ಹೇಳ್ತೀನಿ ನಿಮ್ಮ ಈ ಥರ್ಡ್ ರೇಟೆಡ್, ಚೀಪ್ ಪ್ರಯತ್ನಗಳನ್ನು ನೋಡೋವರೆಗೂ ನೋಡಿ ಜನ ಕೊನೆಗೆ ಅವಳ ಬೆಂಬಲಕ್ಕೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನಿಲ್ತಾರೆ. ನೋಡ್ತಿರಿ!
ಎಷ್ಟು ಅಂತ ಹಿಂಸೆ ಕೊಡ್ತೀರಿ ಆ ಹೆಣ್ಣುಮಗಳಿಗೆ? ನಿಮಗ್ಯಾರಿಗೂ ಅಕ್ಕ ತಂಗಿಯರಿಲ್ವಾ?? ಒಬ್ಬ ವ್ಯಕ್ತಿಯ ಮೇಲೆ ಇಷ್ಟು ದ್ವೇಷ ಸಾಧಿಸಬಾರದು. ನಾನು ನಿಮಗೆ ಎಚ್ಚರಿಕೆ ಕೊಡ್ತಿದೀನಿ ಅನ್ಕೊಳಿ ಅಥವಾ ಬುದ್ಧಿವಾದ ಅಂತಾನಾದ್ರೂ ತಿಳ್ಕೊಳಿ! ಇದು ಆದಷ್ಟು ಬೇಗ ನಿಲ್ಲದಿದ್ರೆ #IAmWithChaitraKundapura ಅಂತ ಹ್ಯಾಶ್ ಟ್ಯಾಗ್ ಹಾಕಿ ಬೆಂಬಲ ಶುರು ಮಾಡಿ ಅವಳಿಗೆ ರಾಜ್ಯ ಮಟ್ಟದಲ್ಲಿ ಬೆಂಬಲ ತರಲಿದ್ದೇವೆ. ಅವಶ್ಯ ಬಿದ್ದರೆ ರಾಷ್ಟ್ರ ಮಟ್ಟದಲ್ಲೂ ನೆನಪಿಡಿ.
ಎಲ್ಲಕ್ಕೂ ಮಿಗಿಲಾಗಿ ಅವಳೊಬ್ಬಳು ಹೆಣ್ಣು ಅನ್ನುವುದು ನಿಮ್ಮ ಗಮನದಲ್ಲಿರಲಿ. ಅವಳು ಹಿಂದು ಸಮಾಜದ ಪರವಾಗಿ ನಿಂತ ಹುಡುಗಿ. ನೀವು ಒಪ್ಪಿ ಬಿಡಿ ಅವಳು ಹಿಂದು ಸಮಾಜದ ಶಕ್ತಿ. ಚಿಕ್ಕವಳಿರಬಹುದು. ತಪ್ಪು ಮಾಡಿರಬಹುದು, ಭ್ರಮೆ ಹುಂಬತನಗಳಿರಬಹುದು. ಆದರೆ ಅದಕ್ಕೆ ನೀವು ಸೇಡು ತೀರಿಸಿಕೊಳ್ಳುತ್ತಿರುವ ರೀತಿ ಉತ್ತರವಲ್ಲ. ಇದು ಅತಿಯಾಯ್ತು. ನಾವೂ ನೋಡ್ತಾ ಇದೀವಿ. ಸತ್ತ ಹಾವನ್ನು ಮತ್ತೆ ಮತ್ತೆ ಬಡಿಯುವುದು ಸಜ್ಜನರಿಗೆ ಶೋಭೆಯಲ್ಲ ಅಥವಾ ನೀವು ಸಜ್ಜನರಲ್ಲ ಎನಿಸಿದರೆ ಇದನ್ನು ಮುಂದುವರೆಸಿ. ನಾವು ಏನು ಮಾಡಬೇಕೋ ಮಾಡ್ತಿವಿ.
ಒಂದು ನೆನಪಿಡಿ. ನಿಜವಾದ ಹಿಂದೂ ಸ್ತ್ರೀಯಲ್ಲಿ ದೇವರನ್ನು ಕಾಣುತ್ತಾನೆ ಹೊರತು ರಾಕ್ಷಸಿಯನ್ನಲ್ಲ. ಇಷ್ಟಾದರೂ ಇವೆಲ್ಲವನ್ನೂ ಮೀರಿ ನೀವು ಮಾಡೋದನ್ನೇ ಮಾಡ್ತೀವಿ ಅಂದ್ರೆ ನೆನಪಿಡಿ ಅವಳು ಬೆಳೆಯುವುದನ್ನು ಯಾರು ತಪ್ಪಿಸಲಾರರು!
ಇಷ್ಟಾದ ಮೇಲೆ ನನ್ನ ಮೇಲೆ ವೈಯಕ್ತಿಕವಾಗಿ ದಾಳಿ ಮಾಡ್ತೀರಾ? ನಿಮಗೆ ಗೊತ್ತಿರಲಿ ನನಗೆ ನನ್ನ ಇಮೇಜ್ ನ ಭಯವಿಲ್ಲ. ಹಿಂದೂ ಸಮಾಜಕ್ಕೋಸ್ಕರ, ದೇಶಕ್ಕೋಸ್ಕರ ನನ್ನಂಥಾ ಎಷ್ಟೋ ಜನ ಅದಾಗಲೇ ಸತ್ತೇ ಹೋಗಿದಾರೆ ಇನ್ನು ನಾನಿನ್ಯಾವ ಮಹಾ?? ಒಬ್ಬ ದೇಶಭಕ್ತ ಹೆಣ್ಣುಮಗಳ ಪರವಾಗಿ ನಿಂತೆನೆಂಬ ಕಾರಣಕ್ಕೆ ಹಾಗಾಗುವುದಾದರೆ ಆ ತ್ಯಾಗಕ್ಕೆ ನಾನು ಸಿದ್ಧನಿದ್ದೇನೆ. ಸಂಘಟನೆ, ಪರಿವಾರ, ಪಕ್ಷದ ಮುಖ್ಯಸ್ಥರುಗಳಿಗೂ ನಾನು ನೇರವಾಗಿ ಆಗ್ರಹಿಸುತ್ತಿದ್ದೇನೆ. ಇದನ್ನು ಬೇಗ ಇತ್ಯರ್ಥ ಮಾಡಿ ಮುಗಿಸಿ. ಇಲ್ಲದಿದ್ದರೆ ನಾವು ಪ್ರತಿಭೆಗಳನ್ನು ಉಪಯೋಗಿಸಿ ಎಸೆಯುವ ಅಯೋಗ್ಯರು ಅಂತ ಒಪ್ಪಿಕೊಂಡುಬಿಡಿ.
#ನಮ್ಮ_ಮನೆ_ಮಗಳು
#ಬಿಟ್ಟು_ಕೊಡೋ_ಪ್ರಶ್ನೇನೇ_ಇಲ್ಲ
Discussion about this post