ಕಲ್ಪ ಮೀಡಿಯಾ ಹೌಸ್
ಬಾಲಿವುಡ್‌ನ ಕಿಂಗ್ ಖಾನ್ ಬಾದ್ ಷಾ, ನಟ ಶಾರುಖ್ ಖಾನ್ ಯಾರಿಗೆ ತಾನೇ ಗೊತ್ತಿಲ್ಲ. ಪ್ರಪಂಚದ ಯಾವುದೇ ಮೂಲೆಗೆ ಹೋದರೂ ಬಹುತೇಕ ಅವರ ಅಭಿಮಾನಿಗಳನ್ನು ಕಾಣಬಹುದು.
Needed to transfer money to a travel agent in Egypt. Was having problems with the transfer. He said: you are from the country of @iamsrk. I trust you. I will make the booking, you pay me later. For anywhere else, I wouldn’t do this. But anything for @iamsrk. & he did!#SRK is 👑
— Ashwini_Deshpande (@AshwDeshpande) December 31, 2021
ಆದರೆ ಅವರ ಫ್ಯಾನ್ ಫಾಲೋಯಿಂಗ್ ಹೇಗಿದೆಯೆಂದರೆ ಅನೇಕರ ಕೆಲಸಗಳು ವಿದೇಶದಲ್ಲೂ ಬಹಳ ಸುಲಭವಾಗಿ ನಡೆಯುತ್ತದೆ. ವಾಸ್ತವವಾಗಿ, ಇತ್ತೀಚಿನ ದಿನಗಳಲ್ಲಿ ಒಂದು ಟ್ವೀಟ್ ಸದ್ದು ಮಾಡುತ್ತಿದೆ. ಇಂತಹದೊಂದು ಕಾರಣ ಈ ಟ್ವೀಟ್ ಹಿಂದೆ ಅಡಗಿದೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಟ್ವೀಟ್‌ನಲ್ಲಿ, ಶಾರುಖ್ ಅಭಿಮಾನಿಯೊಬ್ಬರು ಹಿಂಜರಿಕೆಯಿಲ್ಲದೆ ವಿದೇಶದಲ್ಲಿ ಹೇಗೆ ಸಹಾಯ ಮಾಡಿದರು ಎಂದು ಮಹಿಳೆಯೊಬ್ಬರು ಹೇಳಿದ್ದಾರೆ.
ಹರಿಯಾಣದ ಅಶೋಕ ಯೂನಿವರ್ಸಿಟಿಯ ಅರ್ಥಶಾಸ್ತ್ರದ ಪ್ರೊಫೆಸರ್ ಅಶ್ವಿನಿ ದೇಶಪಾಂಡೆ ಅವರು ಇತ್ತೀಚೆಗೆ ಈಜಿಪ್ಟ್ಗೆ ತೆರಳಿದ್ದರು. ಆಗ ಅವರಿಗೆ ಒಂದು ಅನಿವಾರ್ಯ ಪರಿಸ್ಥಿತಿ ಎದುರಾಗಿತ್ತು. ಆಗ ಆ ವಿದೇಶಿ ನೆಲದಲ್ಲಿ ಅವರ ಸಹಾಯಕ್ಕೆ ಬಂದಿದ್ದು ಒಬ್ಬ ಶಾರುಖ್ ಅಭಿಮಾನಿ! ಅದನ್ನು ಅಶ್ವಿನಿ ದೇಶಪಾಂಡೆ ಅವರು ಎಳೆಎಳೆಯಾಗಿ ವಿವರಿಸಿದ್ದಾರೆ. ಈಜಿಪ್ಟ್ನಲ್ಲಿ ಒಬ್ಬ ಟ್ರಾವೆಲ್ ಏಜೆಂಟ್ಗೆ ಅಶ್ವಿನಿ ದೇಶಪಾಂಡೆ ಹಣ ವರ್ಗಾವಣೆ ಮಾಡಬೇಕಿತ್ತು. ಆದರೆ ಅದಕ್ಕೆ ಕೆಲವು ಸಮಸ್ಯೆಗಳು ಎದುರಾಗಿದ್ದವು. ಆದರೆ ಆ ಟ್ರಾವೆಲ್ ಏಜೆಂಟ್ ಕೂಡ ಶಾರುಖ್ ಖಾನ್ ಅಭಿಮಾನಿ ಆಗಿದ್ದರಿಂದ ಆತ ಸಹಾಯ ಮಾಡಿದ.
‘ನೀವು ಶಾರುಖ್ ಖಾನ್ ಅವರ ದೇಶದವರು. ಹಾಗಾಗಿ ನಿಮ್ಮನ್ನು ನಾನು ನಂಬುತ್ತೇನೆ. ಮೊದಲು ನಿಮಗೆ ಬುಕಿಂಗ್ ಮಾಡುತ್ತೇನೆ. ನಂತರ ಯಾವಾಗ ಬೇಕಿದ್ದರೂ ನೀವು ಹಣ ನೀಡಿ. ಶಾರುಖ್ ಖಾನ್ ಮೇಲಿನ ಅಭಿಮಾನಕ್ಕಲ್ಲದೇ ಬೇರೆ ಯಾವ ಕಾರಣಕ್ಕೂ ನಾನು ಈ ಸಹಾಯ ಮಾಡುತ್ತಿರಲಿಲ್ಲ’ ಅಂತ ಆತ ಹೇಳಿದ ಎಂದು ಅಶ್ವಿನಿ ದೇಶಪಾಂಡೆ ಟ್ವೀಟ್ ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post