ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ತುಮಕೂರು: ರೈತರು ಮತ್ತು ಅಕ್ಕಿ ಗಿರಣಿ ಮಾಲಿಕರ ಸಮಸ್ಯೆಯನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುವ ಮೂಲಕ ರೈತರು ಹಾಗೂ ಉದ್ಯಮಿಗಳ ಹಿತ ಕಾಯುವುದಾಗಿ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಗೋಪಾಲಯ್ಯ ಹೇಳಿದರು.
ನಗರದ ಸಪ್ತಗಿರಿ ಆಗ್ರೋ ಇಂಡಸ್ಟ್ರೀಸ್ ನಲ್ಲಿ ನಡೆದ ಗಿರಣಿ ಮಾಲೀಕರು ಮತ್ತು ರೈತರೊಂದಿಗೆ ಹಮ್ಮಿಕೊಂಡಿದ್ದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ಪ್ರಧಾನಿಗಳು ಹಾಗೂ ಮುಖ್ಯಮಂತ್ರಿಗಳು ರೈತರ ಬಗ್ಗೆ ಒಲವು ಹೊಂದಿದ್ದು, ಕೊರೋನಾ ಸಂದರ್ಭದಲ್ಲಿಯೂ ರೈತರ ಹಿತ ಕಾಯುವಲ್ಲಿ ಶ್ರಮಿಸಿದ ಬಿ.ಎಸ್. ವೈ ಅವರ ಮಾದರಿಯಲ್ಲಿ ನಾವು ಕಾರ್ಯ ನಿರ್ವಹಿಸುವುದಾಗಿ ಹೇಳಿದ ಅವರು, ಉತ್ತರ ಪ್ರದೇಶ ಮತ್ತು ಬೇರೆ ರಾಜ್ಯಗಳಲ್ಲಿ ಕೇಂದ್ರ ಸರ್ಕಾರ ಉದ್ದಿಮೆಗಳಿಗೆ ನೀಡಿರುವ ಸೌಲಭ್ಯಗಳನ್ನು ರಾಜ್ಯದಲ್ಲಿಯೂ ನೀಡಲು ಶ್ರಮಿಸುವುದಾಗಿ ಹೇಳಿದರು.
ರೈತರು ಮತ್ತು ಆಹಾರ ಸಂಬಂಧಿಸಿದಂತಹ ಉದ್ದಿಮೆಗಳಿಗೆ ಯಾವ ತೊಂದರೆಯಾಗದಂತೆ ಕಾರ್ಯನಿರ್ವಹಿಸುವ ದೃಷ್ಠಿಯಿಂದ ಆಹಾರ ಸಚಿವರು ರೈತರು ಹಾಗೂ ಉದ್ಯಮಿಗಳೊಂದಿಗೆ ಮಾತನಾಡುವ ಮೂಲಕ ಉದ್ಯೋಗ ಸೃಷ್ಠಿಯೊಂದಿಗೆ ರೈತರಿಗೆ ನೆರವಾಗುವ ಯೋಜನೆಯನ್ನು ರೂಪಿಸುತ್ತಿದ್ದಾರೆ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ರಾಜ್ಯದ ಮೂರು ನಾಲ್ಕು ಜಿಲ್ಲೆಗಳಲ್ಲಿ ಮಾತ್ರ ಸರ್ಕಾರ ಭತ್ತವನ್ನು ಖರೀದಿಸುತ್ತಿದ್ದು, ರೈತರ ಹೆಚ್ಚಿನ ಬೆಳೆಯನ್ನು ಬೆಳೆದಾಗ ಮಾತ್ರ ಇಂತಹ ಸಂಸ್ಥೆಗಳು ಉಳಿದು ಕೊಳ್ಳಲಿದ್ದು, ಇಲಾಖೆಯಿಂದ ಆಗುತ್ತಿರುವ ಅಕ್ಕಿಯ ಗುಣಮಟ್ಟ ಪರಿಶೀಲಿಸಿ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಸಚಿವರಾದ ಗೋಪಾಲಯ್ಯ, ಅರಣ್ಯ ಇಲಾಖೆ ಸಚಿವ ಆನಂದ್ ಸಿಂಗ್, ಶಾಸಕರಾದ ಪರಣ್ಣ ಮುನವಳ್ಳಿ, ಸೋಮನಿಂಗಪ್ಪ, ಆಹಾರ ಮತ್ತು ನಾಗರೀಕ ಪೂರೈಕೆ ಕಾರ್ಯದರ್ಶಿ ಎ.ಎನ್. ಪ್ರಸಾದ್, ಆಯುಕ್ತೆ ಶ್ಯಾಮಲ ಇಕ್ಬಾಲ್, ವಿಶ್ವರಾಧ್ಯ, ಪ್ರಸಾದ್, ಶ್ರೀಧರ್ ಬಾಬು ಸೇರಿದಂತೆ ಇತರರಿದ್ದಾರೆ.
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
Get In Touch With Us info@kalpa.news Whatsapp: 9481252093
Discussion about this post