ಬೈಂದೂರು: ನಿಮ್ಮ ವ್ಯಾಪ್ತಿಯಲ್ಲಿರುವ ರೈತರು ಹಾಗೂ ಹೈನುಗಾರರ ಅಭಿವೃದ್ಧಿಗಾಗಿ ಶ್ರಮಿಸಿ ಎಂದು ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರು, ಮಂಗಳೂರು ಹಾಲು ಒಕ್ಕೂಟದ ನೂತನ ಸದಸ್ಯ ಹದ್ದೂರು ರಾಜೀವ್ ಶೆಟ್ಟಿ ಅವರಿಗೆ ಸಲಹೆ ನೀಡಿದರು.
ಮಂಗಳೂರಿನ ಕರ್ನಾಟಕ ಹಾಲು ಒಕ್ಕೂಟದ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾದ ರಾಜೀವ್ ಶೆಟ್ಟಿ ಅವರು, ಶಾಸಕ ಸುಕುಮಾರ ಶೆಟ್ಟಿ ಅವರ ನಿವಾಸದಲ್ಲಿ ಭೇಟಿಯಾದ ವೇಳೆ ಮಾತನಾಡಿದರು.
ರಾಜೀವ್ ಶೆಟ್ಟಿ ಅವರ ಅವಿರೋಧ ಆಯ್ಕೆಗೆ ಹರ್ಷ ವ್ಯಕ್ತಪಡಿಸಿದ ಶಾಸಕರು, ಸಂಸ್ಥೆಯ ಅಭಿವೃದ್ಧಿಯೇ ನಿಮ್ಮ ಧ್ಯೇಯವಾಗಲಿ. ಜೊತೆಯಲ್ಲಿ ಹೈನುಗಾರರ ಶ್ರೇಯಸ್ಸನ್ನೂ ಸಹ ಕಾಯುವುದು ನಿಮ್ಮ ಆದ್ಯತೆಯಾಗಲಿ ಎಂದರು.
ಈ ಸಂದರ್ಭದಲ್ಲಿ ರಾಜೀವ್ ಶೆಟ್ಟಿ ಅವರನ್ನು ಶಾಲು ಹೊದಿಸಿ ಶಾಸಕರು ಅಭಿನಂದಿಸಿದರು.
Discussion about this post