ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಅಪ್ಪ ಅಂತಾ ಹೇಳೋದೇ ಒಂದು ಬಲ, ಶಕ್ತಿ, ಪ್ರೀತಿ, ವಾತ್ಸಲ್ಯ, ಮಮತೆ, ಅಪ್ಪನ ಜೊತೆ ನಡಿಯೋದೇ ಒಂದು ಅದ್ಭುತ ಖುಷಿ ಅಲ್ವಾ. ಹೌದು ಪ್ರತಿ ಹೆಣ್ಣಿಗೂ ಅಪ್ಪಾ ಅಂದ್ರೆ ಸಾಕು ಪ್ರಪಂಚದಲ್ಲಿ ಬೇರೆ ಏನು ಬೇಡ ಅನಿಸ್ಸುತ್ತೆ. ಯಾಕೆಂದರೆ ಅಪ್ಪನೇ ಪ್ರಪಂಚವಾಗಿರುತ್ತಾನೆ. ಅಪ್ಪನಿಗೂ ತನ್ನ ಮಗಳೇ ಇಡೀ ಜಗತ್ತು ಆಗಿರುತ್ತಾಳೆ. ಇವತ್ತಿಗೂ ಆ ಜೀವದ ಮೇಲೆ ಪ್ರೀತಿ ಬೆಟ್ಟದಂತೆ ಏರುತ್ತಿದೆ. ಆಕಾಶಕ್ಕೆ ಮುಟ್ಟುವಂತೆ ಅಪ್ಪನ ಪ್ರೀತಿ ಸಿಗುತ್ತಿದೆ ಈ ನನ್ನ ಜೀವಕ್ಕೆ.
ಅಪ್ಪನ ಮುದ್ದು ಮುದ್ದು ಮಾತು ಕೇಳೋಕೆ ಚಂದ, ಅವರು ಬೆನ್ನು ತಟ್ಟಿದಾಗ ಬರುವ ಭರವಸೆ ಯಾವ ದೇವರು ಕೊಟ್ಟರು ಬರುವುದಿಲ್ಲ. ಅಷ್ಟೊಂದು ಬಲವಿದೆ. ಅಪ್ಪನ ಮಾತಿನಲ್ಲಿ ಅವರು ಸಿಟ್ಟಿನಿಂದ ಹೇಳುವ ಮಾತಿನಲ್ಲಿ ನೂರಾರೂ ಅರ್ಥ ಅಡಕವಗಿರುತ್ತದೆ. ಅದನ್ನು ಮಕ್ಕಳು ಅರಿಯಬೇಕು ಅಷ್ಟೇ. ಮಗಳು ಚಿಕ್ಕವಳಾಗಿದ್ದಾಗ ತಂದೆಯಾಗಿ ಮಗಳ ಬೆರಳು ಹಿಡಿದು ನಡೆಸುತ್ತಾನೆ. ಅದೇ ಮಗಳು ಬೆಳೆಯುತ್ತಾ ದೊಡ್ಡವಳಾದಂತೆ ತಂದೆಯಾಗಿ ಜವಾಬ್ದಾರಿ ನಿಭಾಯಿಸುತ್ತಾನೆ. ಅದೇ ಮಗಳು ಕಾಲೇಜು ಮೆಟ್ಟಿಲು ಏರಿದಂತೆ ಒಬ್ಬ ಸ್ನೇಹಿತನಾಗಿ ಜೊತೆಗಿರುತ್ತಾನೆ ಅಪ್ಪ.
ಈಗ ನಿಜ ಹೇಳ್ಬೇಕು ಅಂದ್ರೆ ನಮ್ಮಪ್ಪ ನಂಗೆ ವರ್ಲ್ಡ್ ಬೆಸ್ಟ್ ಫ್ರೆಂಡ್ ಅಂತಾನೇ ಹೇಳಬಹುದು. ಯಾಕಂದ್ರೆ ಅಪ್ಪನ ಜೊತೆ ಪ್ರತಿಯೊಂದು ವಿಷಯವನ್ನು ಶೇರ್ ಮಾಡ್ತೀನಿ. ಯಾಕೆ ಗೊತ್ತಾ? ನಾನು ಮಾಡೋ ಕೆಲಸ ನನಗೆ ತಪ್ಪಿದರೂ ಅದು ಸರಿನೇ ಅನ್ಸುತ್ತೆ. ಹಾಗಾಗಿ ಅಪ್ಪ ಜೊತೆ ಮಾತನಾಡಿದಾಗ ಅಂದೇನೋ ಒಂದು ರೀತಿ ಸಮಾಧಾನ ಅನಿಸುತ್ತದೆ. ಮೊದಲು ಫ್ರೆಂಡ್ ಆಗಿ ಸಜೆಶನ್ ಹೇಳ್ತಾರೆ. ಆ ಮೇಲೆ ಒಬ್ಬ ತಂದೆಯಾಗಿ ಯೋಚಿಸಿ ಉತ್ತರ ಕೊಡ್ತಾರೆ. ಆಗ ನನ್ನೆಲ್ಲಾ ಗೊಂದಲಕ್ಕೆ ಪರಿಹಾರ ಸಿಕ್ಕಂತಾಗುತ್ತದೆ. ಅದಕ್ಕೆ ಹೇಳಿದ್ದು ಅಪ್ಪನಿಗಿಂತ ಒಳ್ಳೆಯ ಬೆಸ್ಟ್ ಫ್ರೆಂಡ್ ಯಾರು ಇರಲ್ಲ ಅಂತ. ಸೋ ನಂಗೀಗ ಅಪ್ಪನೇ ಎಲ್ಲಾ ಅನಿಸುತ್ತಿದೆ.
ನಾನು ದೇವರಿಗೆ ಕೈ ಮುಗಿಯುವ ಪ್ರತಿ ಸಾರಿನು ನಾನು ದೇವರಲ್ಲಿ ಕೇಳುವುದು ಒಂದೇ every time and every secand I pray to lard two save my parents because they are the my 2 eye’s.
ತಂದೆ ಪದೇ ಪದೇ ಮಕ್ಕಳಿಗೆ ಶಿಸ್ತು, ಸಮಯ ಪ್ರಜ್ಞೆ ಜವಾಬ್ದಾರಿ ಜೀವನದ ಬಗ್ಗೆ ಒಂದಿಷ್ಟು ಒಳ್ಳೆ ಮಾತು ಪ್ರಾರಂಭಿಸಿದರೆ ಸಾಕು. ಆ ಕಿವಿಯಲ್ಲಿ ಕೇಳಿ ಈ ಕವಿಯಲ್ಲಿ ಬಿಡುವ ಮಕ್ಕಳೇ ಹೆಚ್ಚು ಆದರೆ ಕಾಲ ಉರಳಿದಾಗ ತಿಳಿಯುತ್ತೆ. ಅಪ್ಪನ ಆ ಮಾತಿನಲ್ಲಿ ಎಷ್ಟೊಂದು ಅರ್ಥವಿತ್ತು ಅಂತ. ಅದಕ್ಕೆ ಸಮಯವಿದ್ದಾಗಲೇ ತಂದೆಯ ಮಾತಿಗೆ ಬೆಲೆ ಕೊಡಬೇಕು. ಇಲ್ಲಾಂದ್ರೆ ಕಾಲಕ್ಕೆ ಚಿಂತಿಸಿ ಫಲವಿಲ್ಲ ಎಂಬ ಹಾಗೇ ಆಗಿ ಬಿಡುತ್ತೆ.
ತಂದೆ ಯಾವಾಗಲೂ ಮಕ್ಕಳ ಹಿತವನೇ ಬಯಸುತ್ತೀರುತ್ತಾರೆ. ಯಾಕೆಂದರೆ ಅವರ ಇಡೀ ಜೀವನ ಮಕ್ಕಳ ಭವಿಷ್ಯವನ್ನು ರೂಪಿಸುವುದರಲ್ಲೆ ಅಡಕವಾಗಿರುತ್ತದೆ. ಅವರ ಜೀವ ನರನಾಡಿಯು ಪ್ರತಿ ಸೆಕೆಂಡ್ ಕೂಡ ಮಕ್ಕಳ ಬದುಕಿನ ಬಗ್ಗೆನೇ ಯೋಚಿಸುತ್ತಿರುತ್ತಾರೆ.
ಅಮ್ಮ ಜನ್ಮ ನೀಡಿದರೆ ತಂದೆ ಜೀವನ ಕೊಡುತ್ತಾನೆ. ಅಪ್ಪಾ ನಿನ್ನ ಬಗ್ಗೆ ಹೇಳೋಕೆ ಪದಗಳ ಗುಂಪೇ ಸಾಲದು. ನನ್ನ ಎಲ್ಲಾ ಮಾತನ್ನು ಬಂದೇ ಒಂದು ಸಾಲಿನಲ್ಲಿ ಹೇಳಬೇಕು ಅಂದ್ರೆ ಅಪ್ಪ ಇಡೀ ಜಗವೇ ನನಗೆ ನೀನಪ್ಪಾ.
ಅಪ್ಪ ಅಂದ್ರೆ ಆಕಾಶ…!
ಅಪ್ಪ ಅಂದ್ರೆ ಪ್ರೀತಿ…!
ಅಪ್ಪ ಅಂದ್ರೆ ಉಸಿರು…!
ಅಪ್ಪ ಅಂದ್ರೆ ಖುಷಿ…!
ಅಪ್ಪ ಅಂದ್ರೆ ಬೆಳಕು…!
ಅಪ್ಪ ಅಂದ್ರೆ ಬದುಕು…!
ಅಪ್ಪ ಅಂದ್ರೆ ಸರ್ವಸ್ವ…!
ಅಪ್ಪನೇ ನನಗೆ ಎಲ್ಲಾ ಅಪ್ಪ ಐ ಲವ್ ಯು
Get In Touch With Us info@kalpa.news Whatsapp: 9481252093
Discussion about this post