ಕಲ್ಪ ಮೀಡಿಯಾ ಹೌಸ್
ಆನಂದ್ ಆಡಿಯೋದ ಯೂಟ್ಯೂಬ್ ಚಾನೆಲ್‌ನಲ್ಲಿ ಇಂದು ಬಿಡುಗಡೆಯಾದ ಆನ ಚಿತ್ರದ ಟೀಸರ್ ನೋಡಿ ಈ ಚಿತ್ರದಲ್ಲಿ ಹಾರರ್ ಜಾನರ್ ಎಂದುಕೊಂಡರೆ, ಅದು ಕೇವಲ ಅರ್ಧದಷ್ಟು ಮಾತ್ರ ಸರಿ ಎನ್ನಬಹುದು. ಏಕೆಂದರೆ ಈ ಚಿತ್ರದಲ್ಲಿ ಬೆಚ್ಚಿ ಬೀಳಿಸುವಂತಹ ಅಂಶಗಳನ್ನು ಕಾಣಬಹುದು ಎನ್ನಲಾಗಿದೆ.

ಇಷ್ಟು ದಿನ ಕೇವಲ ಬಬ್ಲಿ ಪಾತ್ರಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದ ಅದಿತಿ ಪ್ರಭುದೇವರ ಪ್ರಭುದೇವಾ ಅವರ ಹಾರರ್ ಲುಕ್ ಎಲ್ಲರ ಹುಬ್ಬೆರಿಸುಂತೆ ಮಾಡಿದೆ.

ಟೀಸರ್‌ನಲ್ಲಿ ಹಲವು ಭಯಪಡಿಸುವ ಅಂಶಗಳಿದ್ದು ಹಾರಾರ್ ಸಿನಿಮಾ ಪ್ರಿಯರಿಗೆ ಕುತೂಹಲ ಮೂಡಿಸಿದೆ.
ಚಿತ್ರಕ್ಕೆ ಮನೋಜ್ ಪಿ ನಡೋಲೋಮನೆ ಆಕ್ಷನ್ ಕಟ್ ಹೇಳಿದ್ದು, ಯೂ.ಕೆ ಪ್ರೋಡಕ್ಷನ್ ಬ್ಯಾನರ್‌ನಲ್ಲಿ ಚಿತ್ರ ಮೂಡಿಬರುತ್ತಿದೆ. ಫಸ್ಟ್ ಟೈಮ್ ಸೂಪರ್ ವುಮೆನ್ ಕಾನ್ಸೆಪ್ಟ್‌ನ್ನು ಕನ್ನಡದಲ್ಲಿ ತರಲು ಚಿತ್ರತಂಡ ಪ್ರಯತ್ನ ಪಟ್ಟಿದೆ. ಅದಿತಿ ಪ್ರಭುದೇವ ಅವರ ಡಿಫ್‌ರೆಂಟ್ ಲುಕ್‌ಗಾಗಿ ಜನರು ಕಾಯುತ್ತಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news







Discussion about this post