ಕಲ್ಪ ಮೀಡಿಯಾ ಹೌಸ್ | ಸಿನಿಮಾ |
ಈವರೆಗೂ ಹಾಡುಗಳಿಂದ ಗಮನ ಸೆಳೆದಿದ್ದ `ಕಲ್ಟ್’ #CULT ಚಿತ್ರ ಇದೀಗ ಟ್ರೇಲರ್ ಮೂಲಕ ಮತ್ತಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಮಾಸ್ ಮತ್ತು ಕ್ಲಾಸ್ ಅಂಶಗಳನ್ನು ಒಳಗೊಂಡಿರುವ `ಕಲ್ಟ್’ ಟ್ರೇಲರ್‍ನಲ್ಲಿ ಝೈದ್ ಖಾನ್ #Zaid Khan ಮೂರು ಶೇಡ್‍ಗಳಲ್ಲಿ ಕಂಡರೆ, ರಚಿತಾರಾಮ್ ಹಾಗೂ ಮಲೈಕಾ ವಸುಪಾಲ್ ಬೇರೆ ಬೇರೆ ಗೆಟಪ್‍ಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಜ.23ರಂದು ರಾಜ್ಯಾದ್ಯಂತ ತೆರೆ ಕಾಣಲಿರುವ ಈ ಚಿತ್ರದ ನಿರ್ದೇಶಕ ಅನಿಲ್ ಕುಮಾರ್ ಅವರು ಖಡಕ್ ಡೈಲಾಗ್, ರಗಡ್ ಕ್ಯಾರೆಕ್ಟರ್‍ಗಳ ಮೂಲಕ ಕಮರ್ಷಿಯಲ್ ಚೌಕಟ್ಟಿನಲ್ಲಿ ಟ್ರೈಲರನ್ನು ಕಟ್ಟಿಕೊಟ್ಟಿದ್ದಾರೆ. ಹಳ್ಳಿ ಹುಡುಗ ಹಾಗೂ ಸಿಟಿ ಯುವಕನಾಗಿ ಝೈದ್ ವಿವಿಧ ಗೆಟಪ್ ಗಳಲ್ಲಿ ಮಿಂಚಿದ್ದಾರೆ. ರಚಿತಾ ರಾಮ್ #Rachitha Ram ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು, `ಏಕ್ ಲವ್ ಯಾ’ ಬಳಿಕ ಮತ್ತೊಮ್ಮೆ ಧಮ್ ಸೇದಿದ್ದಾರೆ.
ಮಲೈಕಾ ವಸುಪಾಲ್ ದೇಸೀ ಹುಡುಗಿಯ ಲುಕ್‍ನಲ್ಲಿ ಕಂಗೊಳಿಸಿದ್ದಾರೆ. ಚಿತ್ರದಲ್ಲಿ ಸಾಕಷ್ಟು ವಿಷಯಗಳಿವೆ. ಆದರೆ ಟ್ರೇಲರ್‍ನಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನು ಮಾತ್ರ ತೋರಿಸಲಾಗಿದೆ. ಇನ್ನೂ ಒಂದಿಷ್ಟು ವಿಷಯಗಳನ್ನು ತೆರೆಯ ಮೇಲೆ ನೋಡಿದರೆ ಚೆನ್ನಾಗಿರುತ್ತದೆ’ ಎನ್ನುವುದು ನಿರ್ದೇಶಕರ ಅಭಿಪ್ರಾಯ.
ನಾಯಕ ಝೈದ್‍ಖಾನ್ ಮಾತನಾಡುತ್ತ ಈ ಚಿತ್ರಕ್ಕಾಗಿ ನಾನು ಎಲೆಕ್ಷನ್ ಪ್ರಚಾರದ ರೀತಿ ಎಲ್ಲಾ ಕಡೆ ಸುತ್ತಿ ಪ್ರಚಾರ ಮಾಡಿದ್ದೇನೆ. ಹಳ್ಳಿ ಹಳ್ಳಿಗಳಿಗೂ ಹೋಗಿ ಜನರನ್ನು ಮಾತನಾಡಿಸಿ, `ಕಲ್ಟ್’ ಕುರಿತು ಮಾಹಿತಿ ಹಂಚಿಕೊಂಡಿದ್ದೇವೆ. ಜನ ಸಪೆÇೀರ್ಟ್ ಮಾಡುತ್ತಾರೆಂಬ ನಂಬಿಕೆಯಿದೆ’ ಎಂದು ಹೇಳಿದ್ದಾರೆ. ನನ್ನ ತಂದೆಯ ಪಾತ್ರದಲ್ಲಿ ರಂಗಾಯಣ ರಘು ನಟಿಸಿದ್ದಾರೆ. ಅವರೊಟ್ಟಿಗೆ ನಟಿಸುವಾಗ ಸೀನ್‍ಗಳೆಲ್ಲ ನೈಜವಾಗಿ ಮೂಡಿಬಂದವು. ನಮ್ಮಿಬ್ಬರ ಬಾಂಡಿಂಗ್ ಅಷ್ಟರಮಟ್ಟಿಗಿತ್ತು’ ಎಂದು ರಚಿತಾರಾಮ್ ಹೇಳಿದ್ದಾರೆ.
ಈ ಚಿತ್ರ ನನ್ನ ಕೆರಿಯರ್‍ಗೆ ಮೆಟ್ಟಿಲಾಗುವ ಭರವಸೆಯಿದೆ. ನನ್ನ ಇನ್ನೊಂದು ಶೇಡ್ ಟ್ರೇಲರ್‍ನಲ್ಲಿಲ್ಲ. ಅದು ಸಖತ್ ಕಿಕ್ ಕೊಡುತ್ತದೆ’ ಎಂದು ದಾವಣಗೆರೆ ಪ್ರತಿಭೆ ಮಲೈಕಾ ವಸುಪಾಲ್ ಹೇಳಿದ್ದಾರೆ. ಕೆ.ವಿ.ಎನ್. ಪೆÇ್ರಡಕ್ಷನ್ಸ್ ಅರ್ಪಿಸುವಈ ಚಿತ್ರಕ್ಕೆ `ಲೋಕಿ ಸಿನಿಮಾಸ್’ ಬಂಡವಾಳ ಹೂಡಿ ನಿರ್ಮಾಣ ಮಾಡಿದೆ. ಇನ್ನುಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















