ಕೇರಳ: ದಕ್ಷಿಣ ಭಾರತದ ಖ್ಯಾತ ಚಿತ್ರ ನಟಿ ನಿತ್ಯಾ ಮೆನನ್ ಅವರನ್ನು ಚಿತ್ರರಂಗದಿಂದ ಬಹಿಷ್ಕರಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಈ ಕುರಿತಂತೆ ಚಿತ್ರ ನಿರ್ಮಾಪಕರುಗಳು ನಿತ್ಯಾ ವಿರುದ್ಧ ಆಕ್ರೋಶಗೊಂಡಿದ್ದು, ನಿತ್ಯಾ ಅವರಿಗೆ ಗರ್ವ ಹೆಚ್ಚಾಗಿದ್ದು, ನಿರ್ಮಾಪಕರನ್ನು ಭೇಟಿಯಾಗುವುದಿಲ್ಲ. ಅಲ್ಲದೇ ಅವರಿಗೆ ಚಿತ್ರಗಳ ಬಗ್ಗೆ ಆಸಕ್ತಿಯೂ ಇಲ್ಲ ಎಂದು ದೂರಿದ್ದಾರೆ ಎನ್ನಲಾಗಿದೆ.
ಥಟ್ಸಾಯಂ ಒರು ಪೆನ್ಕುಟ್ಟಿ ಚಿತ್ರದ ಶೂಟಿಂಗ್ ವೇಳೆ ನಿತ್ಯಾ ಭೇಟಿಗೆ ಒಂದಿಷ್ಟು ನಿರ್ಮಾಪಕರು ಬಂದಿದ್ದರು. ಆಗ ಅವರ ಭೇಟಿಗೆ ನಿತ್ಯಾ ಮುಂದಾಗಿರಲಿಲ್ಲ. ಇದಕ್ಕೆ ಆಕ್ರೋಶಗೊಂಡ ನಿರ್ಮಾಪಕರು ಆಕೆಯನ್ನು ಚಿತ್ರರಂಗದಿಂದ ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ವರದಿಯಾಗಿದೆ.
ಆದರೆ, ಈ ಕುರಿತಂತೆ ರಾಷ್ಟ್ರೀಯ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ನಿತ್ಯಾ, ನನ್ನ ತಾಯಿ ಕ್ಯಾನ್ಸರ್’ನಿಂದ ಬಳಲುತ್ತಿದ್ದಾರೆ. ಇಂತಹ ನೋವಿನಲ್ಲೂ ಸಹ ನಾನು ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದೇನೆ ಎಂದಿದ್ದಾರೆ.

















