ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಹೊಸಪೇಟೆ: ತಾಲೂಕು ಕಚೇರಿಯ ಜನಸ್ನೇಹಿ ಕಚೇರಿಯಲ್ಲಿ ಇಂದು ಬೆಳಿಗ್ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಧಗಧಗನೆ ಉರಿದು ಮಹತ್ವದ ದಾಖಲೆಗಳು ಸುಟ್ಟು ಕರಕಲಾಗಿದೆ.
ಇಂದು ದಿನಂಪ್ರತಿಯಂತೆ ಕಚೇರಿಯ ಸಿಬ್ಬಂದಿ ಕಚೇರಿಗೆ ಬಂದರು, ಬಾಗಿಲು ತೆಗೆದು ಒಳ ಹೋಗುವಷ್ಟರಲ್ಲಿ ಒಳಗಿನಿಂದ ದಟ್ಟ ಹೊಗೆ ಬರಲಾರಂಭಿಸಿತು ಜೊತೆಗೆ ಬೆಂಕಿ ಹತ್ತಿ ಎಲ್ಲಾ ಕೊಠಡಿಗಳಿಗೆ ಚಾಚಿಕೊಂಡಿದೆ.
ತತಕ್ಷಣವೇ ಹೆಚ್ಚಿನ ಸಿಬ್ಬಂದಿ ಹಿಂಬಾಗಿಲಿನ ಮೂಲಕ ಕೆಲ ಕಡತಗಳನ್ನು ಹೊರ ಸಾಗಿಸಿದರು. ಆದರೆ, ದಟ್ಟ ಹೊಗೆ ಮತ್ತು ಬೆಂಕಿಯಿಂದ ಎಲ್ಲ ದಾಖಲೆಗಳು ಹೊರತರಲು ಆಗಲಿಲ್ಲ. ಹೀಗಾಗಿ ಕೆಲವೂಂದು ದಾಖಲೆಗಳು ಸುಟ್ಟು ಕರಕಲಾಗಿವೆ.
ಅಗ್ನಿಶಾಮಕ ಸಿಬ್ಬಂದಿಯೂ ಸ್ಥಳೀಯ ಪೊಲೀಸರ ನೆರವಿನೊಂದಿಗೆ ಬೆಂಕಿ ನಂದಿಸಿದರು. ಸ್ಥಳಕ್ಕೆ ಮೂರು ಅಗ್ನಿಶಾಮಕ ದಳ ವಾಹನಗಳು ಬಂದಿದ್ದವು.
ತಹಶೀಲ್ದಾರ್ ಎಚ್. ವಿಶ್ವನಾಥ್, ಡಿವೈಎಸ್’ಪಿ ವಿ. ರಘುಕುಮಾರ ಸ್ಥಳದಲ್ಲಿ ಇದ್ದರು. ಕೂರೋನಾ ಸೋಂಕಿನ ಹಿನ್ನೆಲೆಯಲ್ಲಿ ಸರಿಯಾಗಿ ಕೆಲಸ ಕಾರ್ಯ ನೆಡೆಯದೆ ದಾಖಲೆಯನ್ನು ಸರಿಯಾಗಿ ಇಡಲು ತೊಂದರೆಯಿಂದಾಗಿ ದಾಖಲಾತಿ ಸುಟ್ಟು ಹೋಗಿರಬಹುದು ಎಂದು ಸ್ಥಳದಲ್ಲಿಯೇ ಇದ್ದ ಸಾರ್ವಜನಿಕರು ಸಂಶಯ ಪಡಬೇಕಾಯಿತು. ತಕ್ಷಣವೇ ವಿಷಯ ಗೊತ್ತಾಗಿ ಜನ ತಾಲೂಕು ಕಚೇರಿ ಎದುರು ಸೇರಿದ್ದರು ಬೆಂಕಿ ಆರಿದ ನಂತರ ಜನರನ್ನು ಪೊಲೀಸರು ಕಳುಹಿಸಿದರು.
ವರದಿ: ಎಂ.ಎಂ. ನಾಡಿಗೇರ್
Get in Touch With Us info@kalpa.news Whatsapp: 9481252093
Discussion about this post