Read - < 1 minute
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಕೊರೋನಾ ವೈರಸ್ ಲಾಕ್ ಡೌನ್’ನಲ್ಲಿ ಸಡಿಲಿಕೆ ಮಾಡಿರುವ ರಾಜ್ಯ ಸರ್ಕಾರ ಮೇ 4ರಿಂದ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಿದ್ದು, ಪಾರ್ಸಲ್ ತೆಗೆದುಕೊಂಡು ಹೋಗಲು ಮಾತ್ರ ಅನುಮತಿಯಿದೆ ಎಂದಿದೆ.
ಈ ಕುರಿತಂತೆ ರಾಜ್ಯ ಅಬಕಾರಿ ಆಯುಕ್ತರು ಆದೇಶ ಹೊರಡಿಸಿದ್ದು, ಇದಕ್ಕಾಗಿ ಕೆಲವೊಂದು ಷರತ್ತುಗಳನ್ನೂ ಸಹ ವಿಧಿಸಿದ್ದಾರೆ.
ಆದೇಶದಲ್ಲೇನಿದೆ:
- ಎಲ್ಲ ಮೂರೂ ಝೋನ್ಗಳಲ್ಲೂ ಮೇ 4ರಿಂದ ಮದ್ಯ ಮಾರಾಟಕ್ಕೆ ಸರ್ಕಾರ ಅನುಮತಿ
- ಸೋಮವಾರ ಬೆಳಗ್ಗೆ 10 ಗಂಟೆಯಿಂದಲೇ ಮದ್ಯದ ಅಂಗಡಿಗಳು ಓಪನ್
- ಕನಿಷ್ಠ 6 ಅಡಿ ಅಂತರ ಕಾಯ್ಡುಕೊಂಡು ಖರೀದಿ ಮಾಡಬೇಕು
- ರೆಡ್ ಝೋನ್’ನಲ್ಲಿ ಸಿಂಗಲ್ ಶಾಪ್ಗಳಿಗೆ ಮಾತ್ರ ಅನುಮತಿ
- ಖರೀದಿಸುವಾಗ ಒಂದು ಸಲಕ್ಕೆ 5 ಜನರು ಮಾತ್ರ ಅಂಗಡಿ ಒಳಗಿರಬೇಕು
- ಪಾನ್, ಗುಟ್ಕಾ, ಮಸಾಲಾ ಮಾರಾಟಕ್ಕೂ ಸರ್ಕಾರ ಅನುಮತಿ
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
Get in Touch With Us info@kalpa.news Whatsapp: 9481252093
Discussion about this post