ಸಿರಸಿ: ಸದ್ಗುರು ಭಗವಾನ್ ಶ್ರೀಶ್ರೀಧರ ಸ್ವಾಮೀಜಿಗಳ ಪರಮಾಪ್ತ ಶಿಷ್ಯರಾಗಿದ್ದ ಬ್ರಮ್ಮೈಕ್ಯ ಶ್ರೀ ಸಚ್ಚಿದಾನಂದ ಸ್ವಾಮೀಜಿಗಳವರ ಪ್ರಥಮ ವಾರ್ಷಿಕ ಆರಾಧನೆ ಸೆಪ್ಟೆಂಬರ್ 19,20, 21 ಹಾಗೂ 25ರಂದು ರಾಮ ಶಾಸ್ತ್ರಿಗಳ ಯಜಮಾನತ್ವದಲ್ಲಿ ವಿಜೃಂಭಣೆಯಿಂದ ನಡೆಯಲಿದೆ.
ಸಚ್ಚಿದಾನಂದ ಶ್ರೀಗಳು ಸದ್ಗುರು ಭಗವಾನ್ ಶ್ರೀಧರ ಸ್ವಾಮೀಜಿಗಳ ಪರಮಾಪ್ತ ಶಿಷ್ಯರಾಗಿ ವರದಪುರ ಶ್ರೀಧರ ಸ್ವಾಮೀಜಿಗಳೊಂದಿಗಿದ್ದು ಅವರ ಕಾಲಾನಂತರ ಸಿರಸಿ ಸಮೀಪದ ಗುರುಪುರ-ಕಾಣ್ಸುರು ಎಂಬ ಊರಿನಲ್ಲಿ ಶ್ರೀಧರ ಸಚ್ಚಿದಾನಂದ ಆಶ್ರಮವನ್ನು ಸ್ಥಾಪಿಸಿ ಅಹರ್ನಿಶಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಸೇವೆ ಸಲ್ಲಿಸಿದ್ದರು.
ಇನ್ನು, ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ವಿದ್ವಾನ್ ಶ್ರೀ ವೇ.ತಿಮ್ಮಣ್ಣ ಭಟ್ಟರು, ಕಟ್ಟೆ ಇವರ ಆಚಾರ್ಯತ್ವದಲ್ಲಿ ಸಂಪನ್ನಗೊಳ್ಳಲಿದ್ದು, ಈ ಅತ್ಯಪೂರ್ವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸನಾತನ ಧರ್ಮದ ವಿಜೃಂಭಣೆಯನ್ನು ಚಂದಗಾಣಿಸಿ ಕೊಡಬೇಕೆಂದು ರಾಮ ಶಾಸ್ತ್ರಿಗಳು ಆಸ್ತಿಕ ಬಂಧುಗಳಲ್ಲಿ ವಿನಂತಿಸಿದ್ದಾರೆ.
Discussion about this post