ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ತಾವು ಮಂಡ್ಯದಿಂದ #Mandya ಸ್ಪರ್ಧೆ ಮಾಡುವ ವಿಚಾರದ ನಿರ್ಧಾರವನ್ನು ಎರಡು ದಿನದಲ್ಲಿ ತಿಳಿಸುತ್ತೇವೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ #HDKumaraswamy ಹೇಳಿದ್ದಾರೆ.
ಹೃದಯ ಶಸ್ತ್ರಚಿಕಿತ್ಸೆ #HeartSurgery ಯಶಸ್ವಿಯಾಗಿ ಬೆಂಗಳೂರಿಗೆ ಹಿಂದಿರುಗಿದ ನಂತರ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ವೈದ್ಯಕೀಯ ಕ್ಷೇತ್ರದಲ್ಲಿ ಮುಂದುವರೆದ ಅತ್ಯಾಧುನಿಕ ತಂತ್ರಜ್ಞಾನದ ಆವಿಷ್ಕಾರಗಳು ಮನುಷ್ಯನ ಜೀವನಕ್ಕೆ ಹೆಚ್ಚಿನ ಅವಕಾಶ ಕಲ್ಪಿಸುತ್ತವೆ ಎಂದರು.
ನನ್ನ ಶಸ್ತ್ರಚಿಕಿತ್ಸೆಯ ಯಶಸ್ಸಿಗಾಗಿ ಪ್ರಾರ್ಥಿಸಿದ ರಾಜ್ಯ ಎಲ್ಲರಿಗೂ ಧನ್ಯವಾದಗಳು. ನಿಮ್ಮಗಳ ಪ್ರಾರ್ಥನೆಯೇ ಇಂದು ನನಗೆ ಮರುಜೀವ ನೀಡಿದೆ ಎಂದು ಭಾವುಕರಾದರು.

3-4 ದಿನಗಳ ಕಾಲ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದು, ಆ ಬಳಿಕ ಎನ್’ಡಿಎ #NDA ಅಭ್ಯರ್ಥಿಗಳ ಪರವಾಗಿ ಸಾಧ್ಯವಾದಷ್ಟು ಪ್ರಚಾರ ಮಾಡುತ್ತೇನೆ. ನನಗೆ ನಡೆದಾಡಲು ಹೆಚ್ಚು ಸಾಧ್ಯವಿಲ್ಲ ಎಂದರು.
ಸಿದ್ಧರಾಮಯ್ಯ #Siddharamaiah ಅವರು ಕೇಂದ್ರದ ವಿರುದ್ಧ ಸುಪ್ರೀಂ ಮೆಟ್ಟಿಲೇರುತ್ತೇವೆ ಎನ್ನುವುದು ನಾಟಕ ಅಷ್ಟೇ. ನಮ್ಮ ದುಡ್ಡು, ನಮ್ಮ ತೆರಿಗೆ ಅಂತೆಲ್ಲಾ ಮಾಡುವುದು ನಾಟಕ. ಇಂತಹ ಡ್ರಾಮಾಗಳನ್ನೆಲ್ಲಾ ಬಿಟ್ಟು ಸರಿಯಾಗಿ ಕೆಲಸ ಮಾಡುವುದನ್ನು ಕಲಿತುಕೊಳ್ಳಿ ಎಂದು ಚಾಟಿ ಬೀಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post