ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ನಿನ್ನೆ 5 ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಹಲವು ರಸ್ತೆಗಳನ್ನು ಸೀಲ್ ಡೌನ್ ಮಾಡಲಾಗಿದೆ.
ಕನಕ ನಗರದಲ್ಲಿ 21 ವರ್ಷದ ಯುವತಿಯಲ್ಲಿ ಪಾಸಿಟಿವ್ ಕಾಣಿಸಿದ್ದು, ಈಕೆ ಬೆಂಗಳೂರಿನಿಂದ ಬಂದಿದ್ದಳೆನ್ನಲಾಗಿದೆ.
ಹುಡ್ಕೋ ಕಾಲೋನಿಯ 65 ವರ್ಷದ ಪುರುಷನಲ್ಲಿ ಪಾಸಿಟಿವ್ ಪತ್ತೆಯಾಗಿದ್ದು, ಈತ ಕೆಮ್ಮು, ಶೀತ ಎಂದು ಆಸ್ಪತ್ರೆಗೆ ಹೋದಾಗ ಪರೀಕ್ಷೆಯಿಂದ ಆತನಲ್ಲಿ ಸೋಂಕಿರುವುದು ಪತ್ತೆಯಾಗಿದೆ.
ಹುತ್ತ ಕಾಲೋನಿಯ ಗೋಲ್ಡನ್ ಜ್ಯೂಬಿಲಿ ಬಳಿ 50 ವರ್ಷದ ಪುರುಷನಲ್ಲಿ ಪಾಸಿಟಿವ್ ಕಾಣಿಸಿಕೊಂಡಿದ್ದು ಈತ ಬೆಂಗಳೂರಿನಿಂದ ಬಂದಿದ್ದನೆನ್ನಲಾಗಿದೆ.
ಸಿರಿಯೂರತಾಂಡದ ನಿವಾಸಿಯಾದ 36 ವರ್ಷ ವಯಸ್ಸಿನ ಪುರುಷನಲ್ಲಿ ಕೊರೋನಾ ಸೋಂಕು ಇರುವುದು ಧೃಢಪಟ್ಟಿದ್ದು, ಈತನ ಸೋಂಕಿಗೆ ಹೊಳೆಹೊನ್ನೂರಿನಲ್ಲಿ ಕಳೆದ ವಾರ ಓರ್ವಮಹಿಳೆಯಲ್ಲಿ ಕಂಡಿದ್ದ ಪಾಸಿಟಿವ್ ಸಂಪರ್ಕವೇ ಕಾರಣ ಎನ್ನಲಾಗಿದೆ.
ಇನ್ನು, ಹೊಳೆಹೊನ್ನೂರಿನ ಸರ್ಕಾರಿ ಆರೋಗ್ಯ ಕೇಂದ್ರದ 32 ವರ್ಷದ ಆರೋಗ್ಯ ನಿರೀಕ್ಷರಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಇವರು ಮೂಲತಃ ಚಿತ್ರದುರ್ಗದವರಾಗಿದ್ದು ಅಲ್ಲಿ ಹೋಂ ಕ್ವಾರಂಟೈನ್’ನಲ್ಲಿದ್ದರು. ಇವರು ಕಾರ್ಯನಿರ್ವಹಿಸುತ್ತಿದ್ದ ಹೊಳೆಹೊನ್ನೂರು ಆರೋಗ್ಯ ಕೇಂದ್ರದ ಒಳಹೊರಗೆ ಮಾಡುವ ಮೂಲಕ ಸ್ಯಾನಿಟೈಸೇಷನ್ ಮಾಡಲಾಯಿತು.
ಭದ್ರಾವತಿ ನಗರ ಪ್ರದೇಶದದಲ್ಲಿ ಕಂಡುಬಂದ ಸೋಂಕಿತ ನಾಲ್ಕುಜನರ ನಿವಾಸದ ಸ್ಥಳಕ್ಕೆ ಸ್ಥಳಕ್ಕೆ ತಹಶೀಲ್ದಾರ್ ಶಿವಕುಮಾರ್, ನಗರಸಭಾ ಆಯುಕ್ತ ಮನೋಹರ್, ತಾಲೂಕು ಮುಖ್ಯ ವೈದ್ಯಾಧಿಕಾರಿ ಡಾ.ಗಾಯತ್ರಿ, ಆರೋಗ್ಯ ಇಲಾಖೆ ಮುಖ್ಯ ಸಿಬ್ಬಂದಿ ನೀಲೇಶ್ ರಾಜ್ ಹಾಗೂ ಪೋಲಿಸ್ ಅಧಿಕಾರಿಗಳು ತೆರಳಿ ಸದರಿ ಸೋಂಕಿತರ ನಿವಾಸದ ಪ್ರದೇಶದ ನೂರು ಮೀಟರ್ ವ್ಯಾಪ್ತಿಯ ಪ್ರದೇಶವನ್ನು ಸೀಲ್ ಡೌನ್ ಮಾಡಿದರು.
ಆರೋಗ್ಯ ಕೇಂದ್ರಕ್ಕೆ ಸ್ಯಾನಿಟೈಸೇಷನ್
ಹೊಳೆಹೊನ್ನೂರು ಆರೋಗ್ಯ ಕೇಂದ್ರದಲ್ಲಿ ಡಾ.ದೇವಾನಂದ ಅವರ ಸಮ್ಮುಖದಲ್ಲಿ ಆರೋಗ್ಯ ಕೇಂದ್ರಕ್ಕೆ ಸ್ಯಾನಿಟೈಸೇಷನ್ ಮಾಡಲಾಯಿತು.
ಎಲ್ಲಾ ಐದು ಜನಸೋಂಕಿತರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಕೋವಿಡ್ ಚಿಕಿತ್ಸಾ ಕೇಂದ್ರಕ್ಕೆ ಕಳುಹಿಸಲಾಯಿತು.
ಇದರೊಂದಿಗೆ ಹೊಳೆಹೊನ್ನೂರು ಸೇರಿದಂತೆ ಭದ್ರಾವತಿ ತಾಲೂಕಿನಲ್ಲಿ ಈವರೆಗೆ ಒಟ್ಟು 48 ಜನರಲ್ಲಿ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾದಂತಾಗಿದೆ.
Get In Touch With Us info@kalpa.news Whatsapp: 9481252093
Discussion about this post