ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸಾಗರ: ಮೊಬೈಲ್ ಫೋನ್ ವಿಚಾರವಾಗಿ ಸಾಜಿಲ್ ಹುಸೇನ್ ಎಂಬಾತನನ್ನು ಕೊಲೆ ಮಾಡಿದ್ದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಸಾಗರ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.
ಅರಳಿಕೊಪ್ಪ ಗ್ರಾಮದ ಸಾಜಿಲ್ ಎಂಬ ಯುವಕನನ್ನು ಮೊಬೈಲ್ ಫೋನ್ ವಿಚಾರವಾಗಿ ಕೊಲೆ ಮಾಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸಾಗರದ ಸುಫೇಲ್ ಸುಕ್ಕಾ, ಮುಜ್ಜು ಮುಜಾಮಿಲ್, ಸುಹೇಬ್, ಅಬ್ದುಲ್ ಸಲಾಂ ಸಲ್ಲು, ಹಾಗೂ ಸಮೀವುಲ್ಲಾ ಅವರುಗಳೇ ಬಂಧಿತ ಆರೋಪಿಗಳಾಗಿದ್ದು, ಎಲ್ಲರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಪೊಲೀಸ್ ಉಪಾಧೀಕ್ಷಕ ವಿನಾಯಕ ಶಟಗೇರಿ ಅವರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಎಂ. ಸುನಿಲ್ ಕುಮಾರ್ ಅವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು.
Get in Touch With Us info@kalpa.news Whatsapp: 9481252093

















