ಕಲ್ಪ ಮೀಡಿಯಾ ಹೌಸ್ | ಫ್ಲೋರಿಡಾ |
ಬಾರೀ ವಿಚಿತ್ರ ಘಟನೆಯೊಂದರಲ್ಲಿ ಬೆನ್ನಿನ ಮೇಲೆ ಕಪ್ಪೆ ಚಿಪ್ಪಿನ ರೀತಿಯ ಚರ್ಮ ಹೊಂದಿರುವ ಮಗುವೊಂದು ಪತ್ತೆಯಾಗಿದ್ದು, ವೈದ್ಯ ಲೋಕವನ್ನೇ ಅಚ್ಚರಿಗೊಳಿಸಿದೆ.
ಫ್ಲೋರಿಡಾದಲ್ಲಿ ಈ ರೀತಿ ಪತ್ತೆಯಾಗಿದ್ದು, ಹುಟ್ಟಿನಿಂದಲೇ ಈ ರೀತಿ ಇದೆ ಎಂದು ಹೇಳಲಾಗಿದೆ. ಮಗುವಿನ ದೇಹದಲ್ಲಿ ಚಿಪ್ಪನ್ನು ನೋಡಿ ಪೋಷಕರು ಆತನಿಗೆ ಲಿಟಲ್ ನಿಂಜಾ ಟರ್ಟಲ್ ಎಂದು ಹೆಸರಿಟ್ಟಿದ್ದಾರೆ.
ಆರಂಭದಲ್ಲಿ ಇದನ್ನು ಮಚ್ಚೆ ಎಂದು ಭಾವಿಸಿದ್ದರು. ಆದರೆ, ಮಗು ಬೆಳೆಯುತ್ತಾ ಹೋದಂತೆ ಇದೂ ಸಹ ಬೆಳದಿದೆ. ಮಗುವಿಗೆ ಎರಡು ವರ್ಷವಾಗುವಷ್ಟರಲ್ಲಿ ಇದು ಮತ್ತಷ್ಟು ಬೆಳೆದಿದೆಯಂತೆ.
Also read: ಕಾರು ಹತ್ತುವ ವೇಳೆ ಕುಸಿದ ಸಿದ್ಧರಾಮಯ್ಯ: ಸ್ವತಃ ಅವರೇ ಹೇಳಿದ್ದೇನು?
ಆನಂತರ ದಪ್ಪವಾಗಿ ಗಡ್ಡೆಯ ರೂಪವನ್ನು ಪಡೆದುಕೊಂಡಿದ್ದು, ಬೆನ್ನಿನ ಮೇಲೆ ದಪ್ಪದಾದ ಚಿಪ್ಪು ಇದ್ದ ಕಾರಣ ಅವನನ್ನು ಮಲಗಿಸಲು ಸಹ ಸಾಧ್ಯವಾಗುತ್ತಿರಲ್ಲಿಲ್ಲ. ಕಷ್ಟಪಟ್ಟು ಒಂದು ಬದಿಯಲ್ಲಿ ಮಲಗಿಸುತ್ತಿದ್ದೆವು ಎಂದು ಪೋಷಕರು ಸ್ಥಳೀಯ ಮಾಧ್ಯಮಗಳಿಗೆ ಹೇಳಿದ್ದಾರೆ.
ಚಿಪ್ಪು ಬೆಳವಣಿಗೆಯ ಹಂತದಲ್ಲಿ ತುರಿಕೆಗೆ ಸಹ ಕಾರಣವಾಗಿತ್ತು ಹೀಗಾಗಿ ಜೇಮ್ಸ್ ತನ್ನ ಬೆನ್ನನ್ನು ಪದೇ ಪದೇ ಕೆರೆದುಕೊಳ್ಳುತ್ತಿದ್ದನು. ಮಗುವಿನ ಈ ಅಪರೂಪದ ಕಾಯಿಲೆಯನ್ನು ಗುಣಪಡಿಸಲು ಎರಡು ಪ್ರಮುಖ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿದೆ. ಮೊದಲನೆಯದು ಅವನು ಆರು ತಿಂಗಳ ಮಗುವಾಗಿದ್ದಾಗ ಮತ್ತು ಎರಡನೆಯದು 8 ತಿಂಗಳ ನಂತರ ನಡೆಯಿತು.
ಚಿಕಿತ್ಸೆಯ ನಂತರ ಜೇಮ್ಸ್ ಸ್ಥಿತಿ ಸಂಪೂರ್ಣವಾಗಿ ಸುಧಾರಣೆಯಾಗಿದ್ದು, ಸರ್ಜರಿಯ ನಂತರ ನಾವು ತುಂಬಾ ಸಂತೋಷಗೊಂಡಿದ್ದೇವೆ. ಜೇಮ್ಸ್ ಈಗ ಯಾವುದೇ ಅಡ್ಡಿಯಿಲ್ಲದೆ ಆರಾಮವಾಗಿ ಮಲಗಲು ಸಾಧ್ಯವಾಗುತ್ತಿದೆ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post