ಕಲ್ಪ ಮೀಡಿಯಾ ಹೌಸ್ | ಆನಂದಕಂದ ಲೇಖನ ಮಾಲಿಕೆ-8 |
ನಿರ್ಜನವಾಗಿ ಗಾಢಾಂಧಕಾರದಿಂದ ಕೂಡಿದೊಂದು ಕಾನನ. ಅಲ್ಲಿ ತನ್ನ ಬಂಧುಗಳಿಂದ ಕೂಡಿದೊಂದು ಜೇನುನೊಣ. ಅದು ತನ್ನ ತಾಯಿಯೂ, ಆದೇಶಕಿಯೂ ಆದ ರಾಣಿಜೇನಿನ ಆಜ್ಞೆಯಿಂದಾಗಿ ಮಕರಂದವನ್ನರಸಿ ಹೊರಟಿತು.
ಆಗ ತಾನೆ ರೆಕ್ಕೆ ಬಲಿತ, ಮಧುಕರ ವೃತ್ತಿಯನ್ನು ಕಾಣಲಾರಂಭಿಸಿದ ಆ ಜೇನು ಏನು ತಾನೆ ಹುಡುಕೀತು? ಅದಕ್ಕೆ ಸಹಾಯಕರಾರೂ ಸಿಗಲಿಲ್ಲ. ಅನುಭವಿ ಜೇನುಗಳು ತಾವು ಸೊಂಪಾಗಿ ಬೆಳೆದು ನಿಂತ ಹೂದೋಟಗಳಿಗೆ ಹಾರಿಹೋದವು. ಇವನಂತೆಯೇ ಜೀವನಾರಂಭಿಕರು ತಾವು ಆ ಅನುಭವಿಗಳ ಹಿಂದೆಯೇ ಓಡಿದವು. ಆದರೆ ಪಾಪ, ಈ ಜೇನು ಅರೆಬರೆ ದಾರಿ ಗೊತ್ತಿರುವ ಮಧ್ಯಮರ ಜೊತೆಗೂ ಹೋಗದೆ ಉಳಿದುಬಿಟ್ಟಿತು. ದಾರಿ ಗೊತ್ತಿಲ್ಲದಿದ್ದರೂ, ಹಿಂದೆ ಹೋಗಲಶಕ್ಯವಾಗಿತು.
ಆ ರಾಮನ ಕಪಿಗಳಂತೆ ಪ್ರಾಯೋಪವೇಶಕ್ಕೂ ಕೂಡಲರಿಯದ ಆ ನೊಣ ಅದನ್ನೂ ಮಾಡಲಾಗಲಿಲ್ಲ. ಗಟ್ಟಿ ಮನಸ್ಸು ಮಾಡಿ ತಮ್ಮ ವನದೇವತೆಯನ್ನು ನಮಸ್ಕರಿಸಿ ತನ್ನ ದಾರಿಯಲ್ಲಿ ಚುರುಕಾಯಿತು. ಅರಸುತ್ತಾ, ಚರಿಸುತ್ತಾ, ಹುಡುಕುತ್ತಾ ಮುಂದೆ ಹೋದಂತೆ ಪುಟ್ಟ ಜೇನಿಗೆ ಖುಷಿಯಾಗಲಾರಂಭಿಸಿತು. ಏಕೆಂದರೆ ಇಷ್ಟು ದಿನ ಕೂಪ ಮಂಡೂಕವಾಗಿದ್ದ ಅದು ಪ್ರಕೃತಿಯ ಅತ್ಯದ್ಭುತವಾದ ಅನುಭವಗಳನ್ನು ಕಾಣಲಾರಂಭಿಸಿತು.
ಹಿಂದೆಂದೂ ಕಾಣದಷ್ಟು ಹಚ್ಚ ಹಸಿರಾದ ಮರಗಿಡಗಳನ್ನು, ಅದನ್ನು ನಾನು ಸದಾ ನಿನ್ನ ಜೊತೆಗೇ ಇರುವೇ ಎನ್ನುವಂತೆ ತಬ್ಬಿ ಹರಡಿರುವ ಬಳ್ಳಿಗಳನ್ನು, ತನ್ನ ಹೊಟ್ಟೆ ತುಂಬಿಸಿಕೊಳ್ಳಲು ಎಷ್ಟು ಬೇಕಾದರೂ ವೇಗವಾಗಿ ಓಡುವ ಚಿರತೆಯನ್ನು, ಸದಾ ಶಾಂತಿಪ್ರಿಯರಾದ ಮಿಂಚಿನಂತೆ ಫಳಫಳ ಹೊಳೆಯುವ ಕಣ್ಣುಗಳುಳ್ಳ ಜಿಂಕೆಗಳನ್ನು, ಮರದ ಮೇಲೆ ಸದಾ ಚೇಷ್ಟೆ ಮಾಡುತ್ತಿರುವ ಕೋತಿಗಳನ್ನು, ಹೀಗೆ ಮನುಷ್ಯರಿಂದ ಅಬಾಧಿತವಾದ ಶಾಂತಿ, ಸಮೃದ್ಧಿಯಿಂದ ಕೂಡಿದ ಕಾಡನ್ನು ನೋಡಿತು. ಅಷ್ಟರಲ್ಲಿ ಅದಕ್ಕೆ ಆಯಸವಾಯಿತು. ತನಗೆ ಇನ್ನಾಗುವುದಿಲ್ಲ, ನಾನು ಸತ್ತೆ ಎನ್ನುವಷ್ಟರಲ್ಲಿ ಹೇ ಪುಟ್ಟ ಜೇನೇ, ಬಾ ಇಲ್ಲಿ ನನ್ನಲ್ಲಿರುವ ಮಕರಂದವನ್ನು ಸವಿ ಎಂಬುದಾಗಿ ಅಲ್ಲಿದ್ದ ಅರಳಿದ ಹೂವೊಂದು ನುಡಿಯಿತು. ಇದನ್ನು ಕೇಳಿ ಅದಕ್ಕೆ ಪರಮಾನಂದವಾಯಿತು.
ಆಹಾ! ನನ್ನ ಕಷ್ಟವನ್ನೂ ಅರ್ಥಮಾಡಿಕೊಳ್ಳುವ ಒಂದು ಜೀವಿ ಇಲ್ಲಿ ಇದೆಯಾ ಎಷ್ಟು ಆನಂದ. ಇಷ್ಟು ಹೊತ್ತಿನ ಆಯಾಸವನ್ನು ನಿವಾರಿಸಿಕೊಳ್ಳಲು ಎಂಥಾ ಅವಕಾಶವಿದು ಎಂದು ಅಲ್ಲಿದ್ದ ನಯನಮನೋಹರವಾದ ಆ ಹೂವಿನ ಸಂಪತ್ತನ್ನು ನೋಡಿದ ಆ ಜೀನಿನ ಬಾಯಿಂದ ಆನೆಯ ಜೊಲ್ಲು ಜೀರಿತು. ಆ ನೀರಿನ ಹನಿ ಹೂವಿಗೆ ತಾಕುವ ಮೊದಲೇ ಈ ಜೇನು ಮಕರಂದವನ್ನು ಸವಿಯಲಾರಂಭಿಸಿತು. ಆಗ ಅದಕ್ಕೆ ಇಷ್ಟು ದಿನ ತಾನು ಅನಾಯಾಸವಾಗಿ ತಿನ್ನುತ್ತಿದ್ದ ಜೀನಿನ ಮಹತ್ವ ಅರ್ಥವಾಯಿತು. ಅನಂತರ ಅದು ತನ್ನ ಗೂಡಿನ ಕಡೆಗೆ ಭ್ರಮರನಾದಗೈಯುತ್ತಾ ಹಾರಿತು. ಎಂಬ ಕನಸು ನಿನ್ನೆ ನನಗೆ ಗೋಚರವಾಯಿತು.
ಆದರೆ ವಿಷಯ ಸುಳ್ಳಲ್ಲ ಈ ವಿಷಯ. ಈ ವಿಷಯದ ಬಗ್ಗೆ ವಿಜ್ಞಾನಿಗಳಾದ ಪ್ರೊಫೆಸರ್ ಡೇನಿಯಲ್ ರಾಬರ್ಟ್ ಎಂಬುವರು 2013ರಲ್ಲಿ ಯೂನಿವರ್ಸಿಟಿ ಆಫ್ ಬ್ರಿಸ್ಟೆಲ್’ನಲ್ಲಿ ಸಂಶೋಧನೆ ನಡೆಸಿದರು. ಅದೇನೆಂದರೆ ಪ್ರತಿಯೊಂದು ಹೂವು ಕೂಡ ತಮ್ಮಲ್ಲಿರುವ ಪರಾಗ ಕಣಗಳಿಂದ ಉಂಟಾದ ಉಜ್ಜುವಿಕೆಯಿಂದ ಸಣ್ಣ ಮಟ್ಟದಲ್ಲಿ ವಿದ್ಯುತ್ ಕಿರಣಗಳು ಹೊರಡುತ್ತವೆ. ಜೇನುನೊಣ ಇದರ ಹತ್ತಿರ ಬಂದಾಗ ಅದರಲ್ಲಿರುವ ಸಣ್ಣ ಸಣ್ಣ ಕೊಡಲುಗಳಿಂದ ಈ ಶಕ್ತಿಯನ್ನು ಗ್ರಹಿಸುತ್ತದೆ. ಮತ್ತು ಹೋಗಿ ಮಕರಂದವನ್ನು ಹೀರುತ್ತದೆ. ಇದರಿಂದಾಗಿ ಜೇನುನೊಣವು ತಾನು ಪ್ರತಿಯೊಂದು ಹೂವನ್ನು ಪರೀಕ್ಷಿಸುವ ಆವಶ್ಯಕತೆ ಇಲ್ಲ.
ಅಬ್ಬಾ! ಎಂತಹ ವಿಸ್ಮಯಕರವಾದ ವಿಷಯವಿದು. ನೋಡಿ ವಿಸ್ಮಿತಗೊಂಡೆ.ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post