ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯದ ಪ್ರಯಾಣಿಕರಿಗೆ ದೇಶದಲ್ಲೇ ಅತ್ಯುತ್ತಮ ದರ್ಜೆಯ ಸೇವೆ ನೀಡುತ್ತಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ #KSRTC ಈಗ ದಾವಣಗೆರೆ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದೆ.
ಹೌದು… ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದಾವಣಗೆರೆಗೆ #Davanagere ನೇರ ನೂತನ ಫ್ಲೈಬಸ್ ಸೇವೆ ಆರಂಭಿಸಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ #Airport ದಾವಣಗೆರೆಗೆ ನೂತನ ‘ಫ್ಲೈಬಸ್’ #FlyBus ಸೇವೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ, ಎಲ್ಲಾ ಫ್ಲೈಬಸ್ ಪ್ರಯಾಣಿಕರಿಗೆ ‘ನಂದಿನಿ’ #Nandini ಉತ್ಪನ್ನಗಳ ಸ್ನ್ಯಾಕ್ಸ್ ಕಿಟ್ ವಿತರಿಸುವ ಉಪಕ್ರಮವನ್ನೂ ಉದ್ಘಾಟಿಸಲಾಯಿತು.

ಬೆಂಗಳೂರು ವಿಮಾನ ನಿಲ್ದಾಣದಿಂದ ಹೊರಟ ಬಸ್ ಸ್ಯಾಟಲೈಟ್ ಟೌನ್ ರಿಂಗ್ ರೋಡ್ ಮೂಲಕ ದೊಡ್ಡಬಳ್ಳಾಪುರ ಬೈಪಾಸ್ – ದಾಬಸ್ ಪೇಟೆ – ತುಮಕೂರು ಬೈಪಾಸ್ – ಚಿತ್ರದುರ್ಗ ಬೈಪಾಸ್ ಮೂಲಕ ನೇರವಾಗಿ ದಾವಣಗೆರೆ ತಲುಪಲಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ತುಮಕೂರು ಬೈಪಾಸ್ ಮತ್ತು ಚಿತ್ರದುರ್ಗ ಬೈಪಾಸ್ ಬಳಿ ನಿಲುಗಡೆ ಇರಲಿದೆ.
ಸಿಗಲಿದೆ ಸ್ನ್ಯಾಕ್ಸ್
ಇನ್ನು ಪ್ರಮುಖವಾಗಿ, ನವೆಂಬರ್ 15 ರಿಂದ, ಕೆಎಂಎಫ್ ಸಹಯೋಗದೊಂದಿಗೆ ಎಲ್ಲಾ ಫ್ಲೈಬಸ್ ಪ್ರಯಾಣಿಕರಿಗೆ ಉಚಿತವಾಗಿ ನಂದಿನಿ ಸ್ನ್ಯಾಕ್ಸ್ ಕಿಟ್ (ನೀರಿನ ಬಾಟಲಿ, ಫ್ಲೇವರ್ಡ್ ಮಿಲ್ಕ್, ಕುಕೀಸ್, ಕೇಕ್, ಕೋಡುಬಳೆ) ವಿತರಿಸಲಾಗುತ್ತದೆ.

ಕಾರ್ಯಕ್ರಮದಲ್ಲಿ KSRTC ವ್ಯವಸ್ಥಾಪಕ ನಿರ್ದೇಶಕರಾದ ಅಕ್ರಂ ಪಾಷ, ನಿರ್ದೇಶಕರಾದ ಡಾ. ಕೆ. ನಂದಿನಿ ದೇವಿ ಮತ್ತು ಇಬ್ರಾಹಿಂ ಮೈಗೂರ, KIALನ ಮುಖ್ಯ ವಾಣಿಜ್ಯ ಅಧಿಕಾರಿ ಕೆನೆತ್, ಉಪಾಧ್ಯಕ್ಷ (ವಾಣಿಜ್ಯ) ಪ್ರವತ್, ವ್ಯವಸ್ಥಾಪಕ (ವಾಣಿಜ್ಯ) ಸಂಜಯ್ ಚಂದ್ರ, KMFನ ಸ್ವಾತಿ ರೆಡ್ಡಿ ಹಾಗೂ ನಿಗಮದ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post