Read - < 1 minute
- ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಹೆಚ್ಚಾಗಿರುವುದರಿಂದ ನೀರನ್ನು ಆದಷ್ಟು ಕುದಿಸಿ ಆರಿಸಿ ಕುಡಿಯುವ ಹವ್ಯಾಸ ಒಳ್ಳೆಯದು.
- ಭಾವಿ ಅಥವಾ ಅಂತರ್ಜಲ ನೀರನ್ನು ಬಳಸುವಾಗ ಎಚ್ಚರರಲಿ. ನೀರಿನ ಗುಣಮಟ್ಟ ಕಾಲ-ಕಾಲಕ್ಕೆ ತಪಾಸಣೆ ಮಾಡಿಸಿದರೆ ಒಳ್ಳೆಯದು.
- ಹೊಟೇಲ್ ಹಾಗೂ ಇನ್ನಿತರೆ ಜಾಗಗಳಲ್ಲಿ ಸಿಗುವ ನೀರನ್ನು ಕುಡಿಯದಿರುವುದೇ ಉತ್ತಮ.
- ತಳ್ಳುವ ಗಾಡಿಗಳಲ್ಲಿ ಮಾರುವ ಐಸ್ ಕ್ಯಾಂಡಿ, ಪಾನಿಪುರಿಯಂತಹ ಆಹಾರ ಪದಾರ್ಥಗಳನ್ನು ಕೊಳಕು ನೀರಿನಿಂದ ತಯಾರಿಸುತ್ತಾರೆ. ಅಂತಹ ಆಹಾರದಿಂದ ದೂರವಿರುವುದು ಉತ್ತಮ.
- ಕಾಲರಾ, ಮಲೇರಿಯಾದಂತಹ ರೋಗಗಳು ಹೆಚ್ಚಾಗಿ ಹರಡುವ ಕಾಲವಾಗಿರುವುದರಿಂದ ಎಚ್ಚರಿಕೆಯಿಂದ ಇರುವುದು ಅಗತ್ಯ.
- ಗರ್ಭಿಣಿ ಹಾಗೂ ಬಾಣಂತಿಯರು ಈ ಸಮಯದಲ್ಲಿ ಹೆಚ್ಚು ನೀರನ್ನು ಸೇಸಬೇಕು. ಒಂದೇ ಬಾರಿಗೆ ಕುಡಿಯಲು ಸಾಧ್ಯವಾಗಲಿಲ್ಲವಾದರೆ ಗಂಟೆಗೊಮ್ಮೆ ನೀರನ್ನು ಸೇಸುತ್ತಿರಬೇಕು.
- ಯೂರಿನ್ ಇನ್ಫೆಕ್ಷನ್ ಹರಡುವ ಸಾಧ್ಯತೆ ಇರುತ್ತದೆ ನೀರು ಹೆಚ್ಚು ಕುಡಿಯುವುದರಿಂದ ಈ ಅಪಾಯ ತಪ್ಪುತ್ತದೆ.
- ಹೆಚ್ಚಾಗಿ ಮಜ್ಜಿಗೆ, ನಿಂಬೆರಸದ ಪಾನಕ ಕುಡಿದರೆ ಉತ್ತಮ.
- ಬೇಸಿಗೆಯಲ್ಲಿ ನಮ್ಮ ದೇಹದಿಂದ ನೀರಿನ ಅಂಶ ಬಹಳ ಬೇಕ ಆಯಾಗುವುದರಿಂದ ಕಿಡ್ನಿಗಳಲ್ಲಿ ಕಲ್ಲು ಆಗುವ ಸಾಧ್ಯತೆ ಇರುತ್ತದೆ. ಹಾಗಾಗಿ ನೀರನ್ನು ಆದಷ್ಟು ಹೆಚ್ಚಾಗಿ ಸೇಸಬೇಕು.
- ಮಕ್ಕಳು ಈ ಸಮಯದಲ್ಲಿ ಮನೆಯ ಹೊರಗೆ ಆಡವಾಡುವ ಹವ್ಯಾಸವನ್ನು ಬೆಳೆಸಿಕೊಂಡಿರುತ್ತಾರೆ. ಹಾಗಾಗಿ ಅವರಿಗೆ ಆದಷ್ಟು ಮರದ ನೆರಳಿನಲ್ಲಿ ಆಡಲು ಸಲಹೆ ನೀಡಬೇಕು.
Discussion about this post