ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನ್ಯಾಮತಿ: ಮಾನವ ಹಕ್ಕುಗಳ ಕಮಿಟಿ ರಾಜ್ಯಾವ್ಯಾಪಿ ಕೊರೊನಾ ಸಂಕಷ್ಟದ ಸಮಯದಲ್ಲಿ ಎಲ್ಲಾ ನಿರ್ದೇಶಕರು ಸದಸ್ಯರ ಸಹಯೋಗದೊಂದಿಗೆ ತಮ್ಮ ತಮ್ಮ ವ್ಯಾಪ್ತಿಯಲ್ಲಿ ನೆರವಿನ ಹಸ್ತ ನೀಡುತ್ತಿದ್ದು, ನ್ಯಾಮತಿ ತಾಲೂಕಿನ ಮಾನವ ಹಕ್ಕುಗಳ ಕಮಿಟಿ ನ್ಯಾಮತಿ ಸೇರಿದಂತೆ ಸುತ್ತ ಹತ್ತಾರು ಹಳ್ಳಿಗಳ ಅಂಗವಿಕಲರು, ವಯೋವೃದ್ಧರು, ನಿರಾಶ್ರಿತರಿಗೆ ದಿನದ 2 ಹೊತ್ತಿನ ಊಟದ ವ್ಯವಸ್ಥೆಯನ್ನು ನಿರ್ವಹಿಸಿತು.
ನ್ಯಾಮತಿಯ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ, ಶಬರಿಮಾಲಾ ಅಯ್ಯಪ್ಪ ಸೇವಾ ಸಮಾಜಂ, ಮಣಿಕಂಠ ಸೌಹಾರ್ದ ಸಹಕಾರಿ ನಿಯಮಿತಿ ವಿವಿಧ ಸಂಘ ಸಂಸ್ಥೆಗಳ ನೆರವಿನೊಂದಿಗೆ ಕಳೆದ ಮಾ.29ರಿಂದ ನಿರಂತರವಾಗಿ ನೊಂದವರನ್ನು ಆಯ್ಕೆ ಮಾಡಿ ನಿತ್ಯ ಊಟದ ವ್ಯವಸ್ಥೆ ಮಾಡುವ ಪರಿಕಲ್ಪನೆಯಲ್ಲಿ ತೊಡಿಗಿದೆ.
ನ್ಯಾಮತಿಯ ವಿವಿಧ ಬಡಾವಣೆಗಳಾದ ಶಿವಾನಂದ ಬಡಾವಣೆ, ವಿನೋಬನಗರ, ಕುಂಬಾರ ಬೀದಿ, ವಿಠಲನಗರ, ನೆಹರೂ ರಸ್ತೆ, ಗ್ರಾಮಗಳಾದ ಕಂಕನಹಳ್ಳಿ, ಆರುಂಡಿ, ಸುರಹೊನ್ನೆ ಮೊದಲಾದ ಕಡೆ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.
ಈ ಸಂದರ್ಭದಲ್ಲಿ ಮಾನವ ಹಕ್ಕುಗಳ ಕಮಿಟಿಯ ಅಧ್ಯಕ್ಷ ಗೋವಿನಕೋವಿ ವೆಂಕಟೇಶ್ ನೇತೃತ್ವದಲ್ಲಿ ತಂಡ ಇಡೀ ದಿನದ ಜವಾಬ್ದಾರಿ ವಹಿಸಿ ಬಿಸಿ ಬಿಸಿ ಊಟ ನೀಡುವ ಕಾರ್ಯ ಮಾಡಿತು. ಈ ಕಾರ್ಯಕ್ರಮಕ್ಕೆ ಕಮಿಟಿಯ ರಾಜ್ಯ ಕಾರ್ಯಾಧ್ಯಕ್ಷ ಕೆ. ನಾಗರಾಜ್, ರಾಜ್ಯ ಮಾಧ್ಯಮ ಸಲಹೆಗಾರ ಎಸ್.ಕೆ. ಗಜೇಂದ್ರಸ್ವಾಮಿ, ರಾಜ್ಯ ಸಂಘಟನಾ ಕಾರ್ಯದರ್ಶಿ ನಿರಂಜನಮೂರ್ತಿ, ಜಿಲ್ಲಾ ಕಾರ್ಯದರ್ಶಿ ಜಿ.ಸುಬ್ರಮಣ್ಯ ಅವರು ಚಾಲನೆ ನೀಡಿ ಕಮಿಟಿಯ ಕಾರ್ಯವನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ನ್ಯಾಮತಿ ಕಮಿಟಿಯ ಪ್ರಧಾನ ಕಾರ್ಯದರ್ಶಿ ರಾಕೇಶ್ ಕತ್ತಿಗೆ, ಉಪಾಧ್ಯಕ್ಷರುಗಳಾದ ಮಹೇಶ್, ಮಹೇಶ್ವರಪ್ಪ, ವೀಣಾ, ಕರಿಬಸಪ್ಪ ಸಹಕಾರ್ಯದರ್ಶಿಗಳಾದ ಶಿವಾನಂದಪ್ಪ, ಚಂದ್ರಶೇಖರ್, ಧನಂಜಯಪ್ಪ, ಅಯ್ಯಪ್ಪ ಸ್ವಾಮಿ ದೇವಾಲಯದ ಯಲ್ಲಪ್ಪರೆಡ್ಡಿ, ಹಾಲೇಶ್ ಕೋರಿ, ಬಿ.ಕೆ. ಕರಿಬಸಪ್ಪ, ಮಹೇಶ್ ಆಚಾರ್ ಆರುಂಡಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
Get in Touch With Us info@kalpa.news Whatsapp: 9481252093
Discussion about this post