ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಎಷ್ಟು ದಿನದವರೆಗೆ ಭಾರತವನ್ನು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಎಂದು ಪ್ರಪಂಚ ಭಾರತದೆಡೆಗೆ ಬೊಟ್ಟು ಮಾಡಿ ತೋರಿಸುತ್ತದೆ ಹಾಗೂ ನಾವೂ ಎಷ್ಟು ದಿನ ಅದನ್ನ ಕೇಳುತ್ತಾ ಇರುತ್ತೇವೆ.
ಮೋದಿ ಅತ್ಯಂತ ಚಾಣಾಕ್ಷ ಅಥವಾ ಅದ್ಬುತ business man ಅಂತ ಇಂದು ಜಗತ್ತಿಗೆ ತೋರಿಸುತ್ತಿದ್ದಾರೆ.
ಟ್ರಂಪ್ ಅದೆಷ್ಟೋ ಉದ್ಯಮ ತನ್ನ ಹಿಡಿತದಲ್ಲಿ ಇಟ್ಟುಕೊಂಡಿಕೊಂಡಿರಬಹುದು. ಆದರೆ ಒಬ್ಬ ಸನ್ಯಾಸಿ ಯಾವುದೇ ಉದ್ಯಮವನ್ನು ಮಾಡದೇ ತನ್ನ ಬುದ್ದಿ ಚಾಣಾಕ್ಷತನದಿಂದ ಇಡಿಯ ವಿಶ್ವದಯೆದುರು ತನ್ನನ್ನು ತಾನು ಗುರುತಿಸಿಕೊಂಡು ಭಾರತ ವಿಶ್ವಕ್ಕೆ ಅನಿವಾರ್ಯ ಎಂಬ ಕಟು ಸತ್ಯವನ್ನು ವಿಶ್ವಕ್ಕೆ ಪರಿಚಯಿಸಿದ ಮಹಾನ್ ನಾಯಕರ ಸಾಲಿನಲ್ಲಿ ಮೋದಿ ನಿಂತಿದ್ದಾರೆ.
ಒಮ್ಮೆ ಯೋಚಿಸಿ ನೋಡಿ ಹಲವಾರು ದಿನಗಳಿಂದ ಎಲ್ಲಾ ಮಾಧ್ಯಮಗಳಲ್ಲಿ ಮಲೇರಿಯಾಕ್ಕೆ ಉಪಯೋಗಿಸುವ ಮಾತ್ರೆಗಳನ್ನು ಜಗತ್ತಿನ ಹಲವಾರು ರಾಷ್ಟ್ರಗಳು ಬೇಡಿಕೆ ಇಟ್ಟಿವೆ. ಅದರಿಂದ ಭಾರತಕ್ಕೆ 1.25 ಲಕ್ಷ ಕೋಟಿಯಷ್ಟು ಹಣ ಭಾರತಕ್ಕೆ ಹರಿದು ಬರುತ್ತದೆ ಎಂದು ಅಂದಾಜಿಸಲಾಗಿದೆ.
ಅಷ್ಟೇ ಅಲ್ಲದೇ ಜಗತ್ತಿನ ಅತಿದೊಡ್ಡ ರಾಷ್ಟ್ರಗಳೆಲ್ಲವು ಜಿಡಿಪಿ ಕುಸಿಯುವ ಹಂತಕ್ಕೆ ತಲುಪಿದರು ಭಾರತದ ಜಿಡಿಪಿ 4.8 ಎಂದು ವರದಿಗಳು ಹೇಳುತ್ತಿವೆ. ಇದು ವಿಶ್ವ ಹೇಳುತ್ತಿರುವ ಮಾತಾದರೆ ಭಾರತದ ಒಳಗೆ ಅದೆಷ್ಟೋ ಉದ್ಯಮಗಳು ಬಾಗಿಲು ಹಾಕುವ ಹಂತ ತಲುಪಿದೆ ಎಂದು ಕೂಗಾಡುತ್ತಿದ್ದಾರೆ ಆದರೆ ಅದು ಎಷ್ಟು ಸತ್ಯ ಸಂಗತಿ ಹೇಳುವುದು ಕಷ್ಟ ಸಾಧ್ಯ.
ಸ್ವಲ್ಪ ಯೋಚಿಸಿ…
- ಟೆಲಿಕಾಂ ಉದ್ಯಮ ವರ್ಕ್ ಫ್ರಂ ಹೋಂನಿಂದಾಗಿ ಉಪಯೋಗಿಸುವ ತನ್ನದೇ ಆದ ಲಾಭ ಗಳಿಸುವಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿವೆ.
- ಇನ್ನು ಡೆಲಿವರಿ ಉದ್ಯಮ ತನ್ನ ಉದ್ಯಮ ಕೌಶಲ್ಯವನ್ನು ಬದಲಾಯಿಸಿಕೊಂಡು ಮನೆಮನೆಗೆ ತನ್ನಸೇವೆ ವಿಸ್ತರಿಸಿಕೊಂಡಿದೆ.
- ಕಾರು ಅಥವಾ ಇನ್ನಾವುದೋ ಉತ್ಪಾದಕ ಉದ್ಯಮ ತನ್ನ ಮೂಲ ಉದ್ಯಮ ನಿಲ್ಲಿಸಿ ಭಾರತಕ್ಕೆ ಬೇಕಾಗುವ ವೆಂಟಿಲೇಟರ್ ಅಥವಾ ವೈದ್ಯಕೀಯ ಉಪಕರಣಗಳ ತಯಾರಿಕೆಯಲ್ಲಿ ನಿರತವಾಗಿದೆ. (ಉದಾಹರಣೆಗೆ ಆನಂದ್ ಮಹಿಂದ್ರ)
- ಬಟ್ಟೆ ಉದ್ಯಮ ಮಾಸ್ಕ್ ಅಥವಾ ಇನ್ನಿತರೆ ಹೊಸ ಪ್ರಯೋಗಗಳಿಗೆ ಕೈ ಹಾಕಿವೆ.
- ಸಕ್ಕರೆ ಕಾರ್ಖಾನೆಗಳು ಸ್ಯಾನಿಟಿಸೆರ್’ಗೆ ಬೇಕಾಗುವ ಎಥೆನಾಲ್ ಉತ್ಪಾದನೆಯಲ್ಲಿ ನಿರತವಾಗಿದೆ.
- ಸೋಪು ಸಾಬೂನು ಉದ್ಯಮ ಅನಿವಾರ್ಯ ಆಗಿಹೋಗಿದೆ.
- ಮೆಡಿಕಲ್’ಗಳ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ.
ಹೀಗೆ ಹಲವಾರು ಉದ್ಯಮಗಳು ತನ್ನ ಉತ್ಪಾದನಾ ತಂತ್ರವನ್ನು ಬದಲಾಯಿಸಿಕೊಂಡು ಲಾಭವೋ ನಷ್ಟವೋ ತನ್ನ ಬುಡವನ್ನು ಗಟ್ಟಿಗೊಳಿಸಿಕೊಳ್ಳುತ್ತಿವೆ. ಯಾವುದೇ ಉದ್ಯಮ ಇಂತಹ ಸಂದರ್ಭದಲ್ಲಿ ತನ್ನ ಮೂಲ ಉತ್ಪಾದನೆ ಸ್ಥಗಿತಗೊಳಿಸಿ ಬದಲಾದರೆ ಉದ್ಯಮ ಬಾಗಿಲು ಹಾಕುವ ಸಂದರ್ಭ ಕಡಿಮೆ ಮಾಡಲು ಸಾಧ್ಯ.
ಈಗ ಹೇಳಿ ಭಾರತ ವಿಶ್ವದಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರವೋ ಅಥವಾ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವೋ. ಇವಕ್ಕೆಲ್ಲಾ ಬದಲಾಗಲು ಅವಕಾಶ ಕೊಟ್ಟು ದೇಶದ ಆರ್ಥಿಕ ಪರಿಸ್ಥಿತಿಯನ್ನು ಬದಲಾಯಿಸುತ್ತಿರುವ ನಾಯಕ ಚಾಣಕ್ಯ ಅಥವಾ ಚತುರ ಅಲ್ಲದೆ ಮತ್ತೇನು?
Get in Touch With Us info@kalpa.news Whatsapp: 9481252093
Discussion about this post