ಕಲ್ಪ ಮೀಡಿಯಾ ಹೌಸ್ | ಮುಂಜಾನೆ ಸುವಿಚಾರ |ಪ್ರಪಂಚದಲ್ಲಿ ಯಾರಿಗೆ ಯಾರೂ ಅನಿವಾರ್ಯ ಇಲ್ಲ. ಯಾರು ಇದ್ದರೂ ಜೀವನ ನಡೆಯುತ್ತದೆ, ಇರದೇ ಇದ್ದರೂ ಜೀವನ ನಡೆಯುತ್ತದೆ ಇದು ಪರಮ ಸತ್ಯ.
ಆದರೆ ಮನುಷ್ಯ ತನ್ನ ಪರಿವಾರ, ಬಂಧು ಬಾಂಧವರು, ಸ್ನೇಹಿತರು, ಸಮುದಾಯ, ಸಮಾಜದ ಒಳಗೆ ಬದುಕುತ್ತಾನೆ. ಎಲ್ಲರ ಮಧ್ಯ ಇದ್ದೂ ಒಂಟಿಯಾಗಿ ಇರುವುದು ಕೆಲವೊಮ್ಮೆ ಅನಿವಾರ್ಯವಾಗುವುದರಿಂದ ಯಾರಿಗೇ ಯಾರೂ ಸದಾ ಕಾಲ ಜೊತೆಗೆ ಇರುವುದು ಸಾಧ್ಯವಿಲ್ಲ, ಅನಿವಾರ್ಯವೂ ಇಲ್ಲ ಎಂಬ ಮಾತನ್ನು ಮನಸ್ಸಿನಲ್ಲಿಟ್ಟು ಕೊಂಡು ಇದ್ದಾಗ ನಮ್ಮ ಮನಸ್ಸಿಗೆ ನೋವು ಆಘಾತ ಗಳು ಆಗುವುದಿಲ್ಲ ಅಥವಾ ಕಡಿಮೆ ಪ್ರಮಾಣದಲ್ಲಿ ಆಗುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post