ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಕೊರೋನಾ ಸಂಕಷ್ಟದ ಈ ಕಾಲದಲ್ಲಿ ಆಕ್ಸಿಜನ್ ಒದಗಿಸುತ್ತಿರುವ ಭದ್ರಾವತಿಯ ವಿಐಎಸ್’ಎಲ್ ಆಕ್ಸಿಜನ್ ಘಟಕದ ಮಾಜಿ ಡೆಪ್ಯೂಟಿ ಮ್ಯಾನೇಜರ್ ಎಚ್. ಶಂಕರಪ್ಪ(68) ವಿಧಿವಶರಾಗಿದ್ದಾರೆ.
ವಿಐಎಸ್’ಎಲ್ ಆಕ್ಸಿಜನ್ ಹಳೆಯ ಘಟಕದಲ್ಲಿ ಕೆಲಸ ನಿರ್ವಹಿಸಿದ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಶಂಕರಪ್ಪ ಅವರೂ ಸಹ ಒಬ್ಬರು. ಇವರು ಹಳೆಯ ಹಾಗೂ ಹೊಸ ಘಟಕ ಎರಡರಲ್ಲೂ ಸಹ ಕೆಲಸ ನಿರ್ವಹಿಸಿದ್ದು, ಇದರ ನಿರ್ವಹಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಮೃತರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಶ್ರೀಯುತರ ಆತ್ಮಕ್ಕೆ ಸಗ್ದತಿ ದೊರೆಯಲಿ ಎಂದು ವಿಐಎಸ್’ಎಲ್ ಅಧಿಕಾರಿ, ಸಿಬ್ಬಂದಿಗಳು, ಕಾರ್ಮಿಕ ಮುಖಂಡರು ಪ್ರಾರ್ಥಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post