ಶ್ರೀನಗರ: ಇಸ್ಲಾಮಿಕ್ ಸ್ಟೇಟ್ ಜಮ್ಮು-ಕಾಶ್ಮೀರ್(ಐಎಸ್‌ಜೆಕೆ)ಗೆ ಸೇರಿದ ನಾಲ್ವರು ಉಗ್ರರನ್ನು ಭಾರತೀಯ ಸೇನಾ ಯೋಧರು ಅಕ್ಷರಶಃ ಅಟ್ಟಾಡಿಸಿ ಬೇಟೆಯಾಡಿದ್ದಾರೆ.
ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ದಾಳಿ ನಡೆಸಿದ್ದ ಉಗ್ರರ ವಿರುದ್ದ ಸೇನೆ ಇಂದು ನಸುಕಿನಿಂದಲೇ ಕಾರ್ಯಾಚರಣೆ ಆರಂಭಿಸಿದ್ದರು. ಈ ವೇಳೆ ಸೇನೆ ಹಾಗೂ ಉಗ್ರರ ನಡುವೆ ಭಾರೀ ಗುಂಡಿನ ಕಾಳಗ ನಡೆಯಿತು.
Terrorists reportedly affiliated to ISJK.
— Shesh Paul Vaid (@spvaid) June 22, 2018
ಈ ವೇಳೆ ಐಎಸ್‌ಜೆಕೆ ಸಂಘಟನೆಗೆ ಸೇರಿದ ನಾಲ್ವರು ಉಗ್ರರನ್ನು ಭದ್ರತಾ ಪಡೆಗಳು ಎನ್‌ಕೌಂಟರ್ ಮಾಡಿವೆ. ಈ ನಡುವೆ ಓರ್ವ ಪೊಲೀಸ್ ಸಿಬ್ಬಂದಿ ವೀರಸ್ವರ್ಗ ಸೇರಿದ್ದು, ಓರ್ವ ನಾಗರಿಕ ಬಲಿಯಾಗಿದ್ದಾನೆ.
ಇನ್ನು, ಈ ಪ್ರದೇಶದಲ್ಲಿ ಇನ್ನು ಒಬ್ಬ ಉಗ್ರ ಅವಿತಿದ್ದಾನೆ ಎಂದು ಹೇಳಲಾಗಿದ್ದು, ಕಾರ್ಯಾಚರನೆಯನ್ನು ಮುಂದುವರೆಸಲಾಗಿದೆ. ಈ ನಡುವೆಯೇ, ಶ್ರೀನಗರ ಹಾಗೂ ಅನಂತನಾಗ್ ಜಿಲ್ಲೆಗಳಲ್ಲಿ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ಈ ಕುರಿತಂತೆ ಹೇಳಿಕೆ ನೀಡಿರುವ ಜಮ್ಮು ಕಾಶ್ಮೀರ ಡಿಜಿಪಿ ಎಸ್.ಪಿ. ವೈದ್, ನಾಲ್ವರು ಉಗ್ರರ ಅವಿತಿದ್ದಾರೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಇಂದು ನಸುಕಿನಿಂದಲೇ ಕಾರ್ಯಾಚರಣೆಯನ್ನು ಆರಂಭಿಸಿ, ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದಿದ್ದಾರೆ.
Two more bodies of terrorists recovered, taking total number to 4. https://t.co/ws9OsU8cQU
— Shesh Paul Vaid (@spvaid) June 22, 2018
Discussion about this post