ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಈಗಾಗಲೇ ನಮ್ಮ ಹಲವು ಸೈನಿಕರನ್ನು ಕಳೆದುಕೊಂಡಿದ್ದು, ಭಾರತದ ಪ್ರಧಾನಿ ನರೇಂದ್ರ ಮೋದಿ #PMNarendraModi ಅವರೇ, ನಮ್ಮನ್ನು ರಕ್ಷಿಸಿ ಎಂದು ನೇಪಾಳಿ #Nepal ಸೈನಿಕರು ಮನವಿ ಮಾಡಿಕೊಂಡಿದ್ದಾರೆ.
ರಷ್ಯಾದ #Russia ಬಳಿ ನಡೆಯುತ್ತಿರುವ ಯುದ್ಧದಲ್ಲಿ ನೇಪಾಳಿ ಸೈನಿಕರು ಸಿಲುಕಿದ್ದು, ದಾಳಿಗೊಳಗಾದ ನಾಲ್ವರು ಸೈನಿಕರು ತಮ್ಮನ್ನು ರಕ್ಷಣೆ ಮಾಡುವಂತೆ ಭಾರತದ ಪ್ರಧಾನಿ ಮೋದಿ ಅವರಲ್ಲಿ ಮನವಿ ಮಾಡಿದ್ದಾರೆ.
ಏಜೆಂಟ್ ಒಬ್ಬನು ಸುಳ್ಳು ಹೇಳಿ ನಮ್ಮನ್ನು ಇಲ್ಲಿ ಸಿಲುಕಿಸಿದ್ದಾನೆ. ನಮ್ಮನ್ನು ರಕ್ಷಿಸುವಂತೆ ಎಷ್ಟೇ ಬೇಡಿಕೊಂಡರೂ ನಮ್ಮ ಸರ್ಕಾರ ಹಾಗೂ ರಾಯಭಾರಿ ಕಚೇರಿ ತಲೆಕೆಡಿಸಿಕೊಳ್ಳುತ್ತಿಲ್ಲ. ದಯಮಾಡಿ ನಮ್ಮನ್ನು ರಕ್ಷಿಸಿ. ಈಗ ನಮ್ಮನ್ನು ರಕ್ಷಿಸಲು ನಿಮ್ಮಿಂದ ಮಾತ್ರ ಸಾಧ್ಯ ಎಂದು ವಿನಂತಿಸಿದ್ದಾರೆ.
ಈಗಾಗಲೇ 20 ಸೈನಿಕರು ಸಾವನ್ನಪ್ಪಿದ್ದು, 100 ಮಂದಿ ಕಾಣೆಯಾಗಿದ್ದಾರೆ. ನೇಪಾಳದ ಕಮ್ಯುನಿಸ್ಟ್ ಸರ್ಕಾರ ನಮ್ಮನ್ನು ಉಳಿಸುವುದಿಲ್ಲ. ಈಗ ನಮ್ಮನ್ನು ಕಾಪಾಡಲು ಭಾರತದಿಂದ ಮಾತ್ರ ಸಾಧ್ಯ. ಮೋದಿ ಅವರೇ ದಯಮಾಡಿ ನಮ್ಮ ಪ್ರಾಣ ಉಳಿಸಿ ಎಂದು ಮನವಿ ಮಾಡಿದ್ದಾರೆ.
ಈ ಕುರಿತ ವೀಡಿಯೋವೊಂದು ವೈರಲ್ ಆಗಿದ್ದು, ಸಂಜಯ್, ರಾಮ್, ಸಂತೋಷ್ ಮತ್ತು ಶ್ರೇಷ್ಟ ಕುಮಾರ್ ಎಂಬ ನೇಪಾಳಿ ಸೈನಿಕರು ಮೋದಿಯವರಲ್ಲಿ ಮನವಿ ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post