ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಹರಿಹರ: ಕೊರೋನಾ ವೈರಸ್ ದಾವಣಗೆರೆ ಜಿಲ್ಲೆಯಲ್ಲಿ ಅಟ್ಟಹಾಸದಿಂದ ಮೆರೆಯುತ್ತಿದೆ. ಗ್ರೀನ್ ವಲಯದಲ್ಲಿ ಇರಬೇಕಾದ ಜಿಲ್ಲೆ ರೆಡ್ ವಲಯಕ್ಕೆ ಬಂದು ನಿಂತಿದ. ಇದುವರೆಗೂ ಅಧಿಕಾರಿಗಳು ಪಟ್ಟ ಶ್ರಮ ಸಮುದ್ರದ ನೀರಿನಲ್ಲಿ ಹೋಮ ನಡೆಸಿದಂತಾಗಿದೆ.
ಇದರ ನಡುವೆ ರಾಜ್ಯ ಸರ್ಕಾರ ಲಾಕ್ ಡೌನ್ ವನ್ನು ಸಡಿಲಗೊಳಿಸಿ ಮದ್ಯ ಮಾರಾಟಕ್ಕೆ ಅನುಮತಿ ನೀಡಿದೆ. ಪರೋಕ್ಷವಾಗಿ ಕೊರೋನಾ ವೈರಸ್ ಹರಡಲು ಸಹಕಾರಿ ನೀಡಿದೆ.
ಈಗಾಗಲೇ ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೋಂಕಿತ ಸಂಖ್ಯೆ ಹೆಚ್ಚಳವಾಗುತ್ತಿದೆ. ಶಂಕಿತರ ಸಂಖ್ಯೆ ನಿಯಂತ್ರಣಕ್ಕಾಗಿ ಮಾನ್ಯ ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಸಂಬಂಧಿಸಿದ ಅಧಿಕಾರಿಗಳಿಗೆ ತಮ್ಮ ವ್ಯಾಪ್ತಿಯಲ್ಲಿ ಎಲ್ಲ ರೀತಿಯ ಅಗತ್ಯ ಮುಂಜಾಗೃತ ಕ್ರಮ ತೆಗೆದುಕೊಳ್ಳುವಂತೆ ಆದೇಶ ನೀಡಿದ್ದಾರೆ.
ಬಡವರ ಹಸಿವನ್ನು ನೀಗಿಸಲು ಈ ಹಿಂದಿನ ರಾಜ್ಯ ಸರ್ಕಾರವು ಇಂದಿರಾ ಕ್ಯಾಂಟೀನ್ ಅನ್ನು ಆರಂಭಿಸಿತ್ತು. ಈಗಿನ ರಾಜ್ಯ ಸರ್ಕಾರವು ಕೊರೋನಾದ ಸಂಕಷ್ಟದ ಸಮಯದಲ್ಲಿ ಇಂದಿರಾ ಕ್ಯಾಂಟೀನಲ್ಲಿ ಜನತೆಗೆ ಉಚಿತ ಊಟದ ವ್ಯವಸ್ಥೆಯನ್ನು ಮಾಡುವಂತೆ ಆದೇಶಿಸಿದೆ ಎಂಬ ಮಾಹಿತಿಯೂ ಕೇಳಿ ಬಂದಿದೆ.
ಆದರೆ ಹರಿಹರದಲ್ಲಿ ಇರುವ ಇಂದಿರಾ ಕ್ಯಾಂಟೀನ್ ಸ್ವಚ್ಛತೆಯಿಲ್ಲದೆ ಕೊರೋನಾ ವೈರಸ್ಸನ್ನು ಊಟಕ್ಕೆ ಬರುವ ಬಡವರಿಗೆ ಉಚಿತವಾಗಿ ನೀಡುವಂತೆ ಕಾಣುತ್ತಿದೆ.
ಕೇವಲ ಮಾಸ್ಕ್ ಹಾಕಿಕೊಳ್ಳುವುದರಿಂದ ಸಾಮಾಜಿಕ ಅಂತರ ಪಾಲನೆ ಮಾಡುವುದರಿಂದ ಕೊರೋನಾ ವೈರಸ್ ನಿಯಂತ್ರಣಕ್ಕೆ ಬರುವುದಿಲ್ಲ. ಇಂದಿರಾ ಕ್ಯಾಂಟೀನಿಗೆ ಊಟಕ್ಕೆ ಬರುವ ಜನರಿಂದ, ಜನರು ಬಿಟ್ಟು ಹೋಗುವ ಅನ್ನದದಿಂದ ಬರುವುದಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ ಸ್ವಾಮಿ.
ಹರಿಹರದ ಇಂದಿರಾ ಕ್ಯಾಂಟೀನ್ ಸ್ವಚ್ಛತೆ ಇಲ್ಲದೆ ಜನರು ಬಂದು ಅದೇ ಜಾಗದಲ್ಲಿ ಊಟ ಮಾಡುತ್ತಿರುವ ದೃಶ್ಯ ನಮ್ಮ ವರದಿಗಾರರ ಕ್ಯಾಮೆರಾದಲ್ಲಿ ಇಂದು ಸೆರೆಯಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಇಂದಿರಾ ಕ್ಯಾಂಟೀನ್ ಮೇಲ್ವಿಚಾರಕರಿಗೆ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ತಾಕೀತು ಮಾಡುತ್ತಾರೆ ಕಾದು ನೋಡಬೇಕಾಗಿದೆ.
(ವರದಿ: ಪ್ರಕಾಶ ಮಂದಾರ, ದಾವಣಗೆರೆ)
Get in Touch With Us info@kalpa.news Whatsapp: 9481252093
Discussion about this post