ಕಲ್ಪ ಮೀಡಿಯಾ ಹೌಸ್ | ಗದಗ |
ನೈಋತ್ಯ ರೈಲ್ವೆಯ ಗದಗ-ಹೋಟಗಿ ಡಬ್ಲಿಂಗ್ ಯೋಜನೆಯ ಭಾಗವಾಗಿ ಆಲಮಟ್ಟಿ ಯಿಂದ ವಂದಾಲ ನಡುವಿನ 9.60 ಕಿಮೀ ಬ್ರಾಡ್ ಗೇಜ್ ಡಬಲ್ ಲೈನ್ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ನೈಋತ್ಯ ರೈಲ್ವೆ ಅಧಿಕಾರಿಗಳು, ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮಾರ್ಚ್ 25ರಿಂದ ಸಾರ್ವಜನಿಕರ/ಪ್ರಯಾಣಿಕರ ಸಂಚಾರಕ್ಕೆ ತೆರೆಯಲಾಗಿದೆ ಎಂದು ತಿಳಿಸಿದ್ದಾರೆ.
Also Read: ಮಾ.30ರಂದು ಪಿಇಎಸ್ ತಾಂತ್ರಿಕ ಮತ್ತು ನಿರ್ವಹಣಾ ಸಂಸ್ಥೆಯಲ್ಲಿ ಉಚಿತ MOCK Test
ಈ ಹೊಸ ವಿಭಾಗದಲ್ಲಿ ಪರ್ವತಿಕಟ್ಟಿ ಹಳ್ಳದ ಮೇಲಿನ ಪ್ರಮುಖ ಓಪನ್ ವೆಬ್ ಗರ್ಡರ್ ಸೇತುವೆ ನಿರ್ಮಿಸಲಾಗಿದ್ದು, ಪ್ರತಿ 45.72 ಮೀಟರ್ ಉದ್ದದ 9 ಸ್ಪ್ಯಾನ್’ಗಳು ಒಳಗೊಂಡಿವೆ. ಜೊತೆಗೆ ಒಂದು ಸಣ್ಣ ಸೇತುವೆ, ಒಂದು ರಸ್ತೆ ಮೇಲ್ಸೇತುವೆ ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ನಿರ್ಮಿಸಲಾಗಿದೆ.

ಈ ಮಾರ್ಗದಲ್ಲಿ 60 ಕೆಜಿ ರೈಲು ಹಳಿಗಳನ್ನು ಪಿಎಸ್’ಸಿ ಸ್ಲೀಪರ್’ಗಳ ಮೇಲೆ ಸಮರ್ಪಕ ಬ್ಯಾಲಸ್ಟ್ ಕುಶನ್’ನೊಂದಿಗೆ ಅಳವಡಿಸಲಾಗಿದೆ. ಈ ಹಳಿ ಗರಿಷ್ಠ 110 ಕಿಮೀ/ಗಂ ವೇಗಕ್ಕೆ ಅನುಕೂಲವಾಗುವಂತೆ ನಿರ್ಮಿಸಲಾಗಿದೆ. ಅಗತ್ಯ ಸಿಗ್ನಲಿಂಗ್ ವ್ಯವಸ್ಥೆ, ನಿಲ್ದಾಣ ಸೌಲಭ್ಯಗಳು ಮತ್ತು ಸುರಕ್ಷತಾ ವ್ಯವಸ್ಥೆಗಳು ಒದಗಿಸಲಾಗಿದೆ.
ಆಲಮಟ್ಟಿ-ವಂದಾಲ ವಿಭಾಗವು ಯೋಜನೆಯ ಪ್ರಮುಖ ಬಾಕಿ ಕಾಮಗಾರಿಗಳಲ್ಲೊಂದು ಆಗಿದ್ದು, ಇದರ ಪೂರ್ಣಗೊಳಿಸುವಿಕೆಯಿಂದ ಗದಗ-ಹೋಟಗಿ ಡಬ್ಲಿಂಗ್ ಯೋಜನೆ ಸಂಪೂರ್ಣವಾಗಿ ಪೂರ್ಣಗೊಂಡಿದೆ. ಇದರಿಂದ ರೈಲು ಮಾರ್ಗ ಸಾಮರ್ಥ್ಯ ಹೆಚ್ಚಳ, ರೈಲು ವಿಳಂಬ ಕಡಿತ, ಸಮಯಪಾಲನೆ ಸುಧಾರಣೆ ಮತ್ತು ಪ್ರಯಾಣಿಕ ಹಾಗೂ ಸರಕು ರೈಲುಗಳ ವೇಗವಾದ ಸಂಚಾರಕ್ಕೆ ನೆರವಾಗಲಿದೆ.
ಇದರಿಂದ ಸುರಕ್ಷಿತ ಮತ್ತು ಸುಗಮ ರೈಲು ಕಾರ್ಯಾಚರಣೆ ಸಾಧ್ಯವಾಗುವುದರೊಂದಿಗೆ, ಪ್ರದೇಶದ ರೈಲು ಸಂಪರ್ಕ ಹಾಗೂ ಸರಕು ಸಾಗಣೆ ವ್ಯವಸ್ಥೆಗೆ ಮಹತ್ವದ ಉತ್ತೇಜನ ದೊರೆಯಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















