ಕಲ್ಪ ಮೀಡಿಯಾ ಹೌಸ್ | ಗದಗ |
ನಗರಕ್ಕೆ ಭೇಟಿ ನೀಡಿದ್ದ ಸಚಿವ ಶ್ರೀರಾಮುಲು Minister Shriramulu ಮುಂಜಾನೆಯೇ ಸಾರ್ವಜನಿಕರೊಂದಿಗೆ ಉಭಯಕುಶಲೋಪರಿ ವಿಚಾರಿಸಿದರು.
ಈ ಕುರಿತಂತೆ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಗದಗ ಜಿಲ್ಲೆಗೂ ನನಗೂ ಬಿಡಿಸಲಾಗದ ಅವಿನಾಭಾವ ಸಂಬಂಧವಿದೆ. ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದ ವೇಳೆ ಇಲ್ಲಿನ ಜನತೆ ತೋರಿದ ಅಭಿಮಾನಕ್ಕೆ ನಾನು ಸದಾ ಕೃತಜ್ಞನಾಗಿದ್ದೇನೆ ಎಂದಿದ್ದಾರೆ.

Also read: ಸಾಗರ ಮಾರ್ಕೆಟ್ ಬಳಿ ಚತುಷ್ಪಥ ರಸ್ತೆ ಕಾಮಗಾರಿಗೆ ವೇಗ: ಪರಿಶೀಲಿಸಿದ ಶಾಸಕ ಹಾಲಪ್ಪ
ಈ ವೇಳೆ ಅಭಿಮಾನಿಯೊಬ್ಬರ ತಮ್ಮ ಆಟೋವನ್ನು ಓಡಿಸುವಂತೆ ಕೋರಿದರು. ಇದನ್ನು ಸಂತೋಷದಿಂದ ಮನ್ನಿಸಿದ ಸಚಿವರು, ಚಾಲಕರೊಂದಿಗೆ ಕುಳಿತು ಆಟೋ ಓಡಿಸಿ, ಸಂತೋಷ ವ್ಯಕ್ತಪಡಿಸಿದರು. ಅಲ್ಲದೇ, ಚಾಲಕರಿಗೆ ಶುಭ ಕೋರಿದರು.












Discussion about this post