ಕಲ್ಪ ಮೀಡಿಯಾ ಹೌಸ್ | ಗಾಂಧಿನಗರ |
ಗುಜರಾತ್ ರಾಜ್ಯ ಗಾಂಧಿ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಹಾಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ #Amith Shah ಜಯಭೇರಿ ಭಾರಿಸಿದ್ದಾರೆ.
ಗಾಂಧಿ ನಗರ ಕ್ಷೇತ್ರದ ಮತ ಎಣಿಕೆ ಮುಕ್ತಾಯಗೊಂಡಿದ್ದು ಅಮಿತ್ ಶಾ ಅವರು 5.5 ಲಕ್ಷ ಮತಗಳ ಬಾರೀ ಅಂತರದಿಂದ ಗೆಲುವು ಸಾಧಿಸಿ, ದಾಖಲೆ ಬರೆದಿದ್ದಾರೆ.
Also read: ದೆಹಲಿಯ ಎಲ್ಲ 7 ಕ್ಷೇತ್ರಗಳೂ ಬಿಜೆಪಿ ತೆಕ್ಕೆ ಸಾಧ್ಯತೆ | ಲೀಡ್’ನಲ್ಲಿ ಕಮಲ ಪಕ್ಷ
ಮತ ಎಣಿಕೆ ಆರಂಭದಿಂದಲೇ ಭಾರೀ ಅಂತರದಲ್ಲಿ ಲೀಡ್ ಕಾಯ್ದುಕೊಂಡಿದ್ದ ಅಮಿತ್ ಆ ಅವರು ಐದನೇ ಹಂತದಲ್ಲಿಯೇ 2 ಲಕ್ಷ ಮತಗಳ ಅಂತರ ಕಾಯ್ದುಕೊಂಡಿದ್ದರು.
ಗುಜರಾತ್ ರಾಜ್ಯದ 26 ಕ್ಷೇತ್ರಗಳ ಪೈಕಿ 25ರಲ್ಲಿ ಬಿಜೆಪಿ ಹಾಗೂ ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news






















